• November 4, 2024

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಯಶಸ್ವಿ ಸಮಾರೋಪಹಿಂದೂ ರಾಷ್ಟ್ರಕ್ಕಾಗಿ ಶಾರೀರಿಕ, ವೈಚಾರಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುವ ಸಂಕಲ್ಪ !

 ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಯಶಸ್ವಿ ಸಮಾರೋಪಹಿಂದೂ ರಾಷ್ಟ್ರಕ್ಕಾಗಿ ಶಾರೀರಿಕ, ವೈಚಾರಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುವ ಸಂಕಲ್ಪ !

 

ಹನ್ನೆರಡನೆಯ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಅಂದರೆ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ ತನ್ನ ತಪಪೂರ್ತಿ (12 ವರ್ಷ) ಪೂರೈಸಿದೆ. ಈ ಅಧಿವೇಶನದ ಮಾಧ್ಯಮದಿಂದ ನಿರ್ಮಾಣಗೊಂಡ ಧರ್ಮನಿಷ್ಠ ಮತ್ತು ದೇಶಭಕ್ತರ ಸಂಘಟನೆಯಿಂದಾಗಿ ಇಂದು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ ನಿರ್ಮಾಣದ ಸಂಕಲ್ಪಶಕ್ತಿಯ ಸ್ಪಂದನಗಳು ವೈಶ್ವಿಕ ಸ್ತರದಲ್ಲಿಯೂ ಅರಿವಾಗುತ್ತಿವೆ. ಹಿಂದೂ ರಾಷ್ಟ್ರವು ಈಶ್ವರನ ಇಚ್ಛೆಯಂತೆ ಸೂಕ್ತ ಸಮಯದಲ್ಲಿ ಸ್ಥಾಪನೆಯಾಗುತ್ತದೆ. ನಿಜವಾಗಿ ಹೇಳಬೇಕೆಂದರೆ, ಅಯೋಧ್ಯೆಯಲ್ಲಿ ಶ್ರೀರಾಮನಜನ್ಮಭೂಮಿಯಲ್ಲಿ ಶ್ರೀರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನೆಯಾಗಿ ಸೂಕ್ಷ ದಲ್ಲಿ ‘ರಾಮ ರಾಜ್ಯ’ವು ಅಂದರೆ ಹಿಂದೂ ರಾಷ್ಟ್ರವು ಪ್ರಾರಂಭವಾಗಿದೆ. ಇದನ್ನು ಪೂರ್ಣರೂಪದಲ್ಲಿ ಸಾಕಾರಗೊಳಿಸಲು ಕೃತಿಯ ಸ್ತರದಲ್ಲಿ ದಿಶೆಯನ್ನು ಈ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ನಿರ್ಧರಿಸಲಾಯಿತು.

ಸನಾತನ ಹಿಂದೂ ಧರ್ಮವು ಭಾರತದ ಆತ್ಮವಾಗಿದೆ. ಭಾರತ ದೇಶವು ಜೀವಂತವಾಗಿರಬೇಕಾಗಿದ್ದರೆ, ಈ ಆತ್ಮವು ಸುರಕ್ಷಿತವಾಗಿರುವುದು ಅವಶ್ಯಕವಾಗಿದೆ; ಆದರೆ ದೇಶವಿರೋಧಿ ಶಕ್ತಿಗಳಿಂದ ಅದರ ಮೇಲೆಯೇ ದಾಳಿ ನಡೆಸಲು ಪ್ರಯತ್ನಿಸಲಾಗುತ್ತಿವೆ. ಕೆಲವರು ಸನಾತನ ಧರ್ಮವನ್ನು ಉಚ್ಛಾಟಿಸುವ ಹೇಳಿಕೆಯನ್ನು ನೀಡುತ್ತಿದ್ದಾರೆ, ಇನ್ನು ಕೆಲವರು ಭಾರತದ (ಇಂಡಿಯಾ ಅಲ್ಲ) ತುಂಡು ಮಾಡುವುದಾಗಿ ಘೋಷಿಸುತ್ತಾರೆ; ಕೆಲವರು ಈ ದೇಶದ ಮೂಲ ಸ್ವಭಾವವಾಗಿರುವ ಹಿಂದೂ ಧರ್ಮೀಯರು ಹಿಂಸಾವಾದಿಗಳಾಗಿದ್ದಾರೆಂದು ಹೇಳಿಕೆ ನೀಡುತ್ತಿದ್ದಾರೆ. ಇದು ಕೇವಲ ಮಾತುಗಳು ಮಾತ್ರವಲ್ಲ, ಭಾರತದ ಸ್ವಾತಂತ್ರ್ಯದ ಶತಮಾನೋತ್ಸವದ ವರೆಗೆ ಅಂದರೆ 2047ರ ವರೆಗೆ ಭಾರತವನ್ನು ಇಸ್ಲಾಮಿಸ್ತಾನ್ ಆಗಿ ಪರಿವರ್ತಿಸುವ ಪಿತೂರಿಯ ಟೂಲ್‌ಕಿಟ್ ಆಗಿದೆ. ಅದನ್ನು ಎದುರಿಸಬೇಕಾಗಿದ್ದರೆ, ಮುಂಬರುವ ಕಾಲದಲ್ಲಿ ಹಿಂದೂ ರಾಷ್ಟ್ರದ ಬೇಡಿಕೆಯ ಒಂದು ವ್ಯಾಪಕ ಜನಾಂದೋಲನವನ್ನು ರಚಿಸುವುದು ಆವಶ್ಯಕವಾಗಿದೆ. ಇದಕ್ಕಾಗಿ ಹಿಂದೂ ಜಾಗೃತಿ ಮತ್ತು ಸಂಘಟನೆಯನ್ನು ಮಾಡುವುದರೊಂದಿಗೆ ಹಿಂದೂ ರಾಷ್ಟ್ರಕ್ಕಾಗಿ ಶಾರೀರಿಕ, ವೈಚಾರಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುವ ನಿರ್ಧಾರವನ್ನು ‘ದ್ವಾದಶ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಅಂದರೆ ’ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಮಾಡಲಾಯಿತು. ಫೋಂಡಾ (ಗೋವಾ) ದಲ್ಲಿನ ಶ್ರೀರಾಮನಾಥ ದೇವಸ್ಥಾನದಲ್ಲಿ 24 ರಿಂದ 30 ಜೂನ ಈ ಕಾಲಾವಧಿಯಲ್ಲಿ ನಡೆದ ಈ ಮಹೋತ್ಸವದಲ್ಲಿ ಅಮೇರಿಕಾ, ಸಿಂಗಾಪುರ, ಇಂಡೋನೇಷ್ಯಾ, ಘಾನಾ (ದಕ್ಷಿಣ ಆಫ್ರಿಕಾ), ನೇಪಾಳ ಈ ದೇಶಗಳು ಸೇರಿದಂತೆ ಭಾರತದ 26 ರಾಜ್ಯಗಳ 1000 ಕ್ಕೂ ಹೆಚ್ಚು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಮಹೋತ್ಸವದಲ್ಲಿ ಮೊದಲ 3 ದಿನಗಳು ‘ಹಿಂದೂ ರಾಷ್ಟ್ರ ಅಧಿವೇಶನ’ನಡೆಯಿತು, ಜೂನ್ 27 ರಂದು ‘ಹಿಂದೂ ವಿಚಾರಮಂಥನ ಮಹೋತ್ಸವ’, ಜೂನ್ 28ರಂದು ‘ಮಂದಿರ ಸಂಸ್ಕೃತಿ ಪರಿಷತ್ತು’ ಮತ್ತು ಕೊನೆಯ ೨ ದಿನಗಳು ‘ನ್ಯಾಯವಾದಿಗಳ ಸಮಾವೇಶ’ ನಡೆಯಿತು.

ಸದ್ಯದ ಸೆಕ್ಯುಲರ ವ್ಯವಸ್ಥೆಯು ಅಮಾಯಕ ಹಿಂದೂಗಳ ಹತ್ಯೆಯನ್ನು ತಡೆಯಲು, ಹಿಂದೂ ಧರ್ಮದ ರಕ್ಷಣೆ ಮಾಡಲು, ಹಿಂದೂ ಧರ್ಮದವರಿಗೆ ಧಾರ್ಮಿಕ ಶಿಕ್ಷಣವನ್ನು ನೀಡುವಲ್ಲಿ ವಿಫಲವಾಗಿದೆ. ಆದ್ದರಿಂದಲೇ ದೇಶವಿರೋಧಿ ಮತ್ತು ಹಿಂದೂವಿರೋಧಿಗಳು ಭಾರತದ ಮೂಲ ಬೆನ್ನೆಲುಬಾಗಿರುವ ಸನಾತನ ಹಿಂದೂ ಧರ್ಮವನ್ನು ಗುರಿ ಮಾಡುತ್ತಿವೆ. ಆದೇ ರೀತಿ ಹಿಂದೂಗಳೂ ಎಲ್ಲ ಸಮಸ್ಯೆಗಳ ಮೂಲವಾಗಿರುವ ಸಂವಿಧಾನದಲ್ಲಿರುವ ಸೆಕ್ಯುಲರ ಮತ್ತು ಸೋಶಿಯಲಿಸ್ಟ ಈ ಶಬ್ದಗಳನ್ನು ತೆಗೆದುಹಾಕಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಒಕ್ಕೊರಳಿನಿಂದ ಒತ್ತಾಯಿಸಬೇಕು.

ಅಧಿವೇಶನದಲ್ಲಿ ನಿರ್ಧರಿಸಲಾಗಿರುವ ಕೆಲವು ಪ್ರಮುಖ ಅಂಶಗಳು : ಈ ವರ್ಷದ ಲೋಕಸಭೆ ಚುನಾವಣೆಯಲ್ಲಿ ಪಾಕಿಸ್ತಾನದ ‘ಐಎಸ್‌ಐ’ ಜೊತೆ ಸಂಪರ್ಕ ಹೊಂದಿರುವ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಹಣಕಾಸು ಪೂರೈಸುವ ‘ರಶೀದ್ ಇಂಜಿನಿಯರ್’ನಂತಹ ದೇಶವಿರೋಧಿಗಳು ಕಾರಾಗೃಹದಿಂದ ಚುನಾವಣೆಯಲ್ಲಿ ಭಾಗವಹಿಸಿ ಚುನಾಯಿತಗೊಂಡಿದ್ದಾರೆ. ‘ಎಮ್.ಐ.ಎಮ್.’ ನ ಭಾಗ್ಯನಗರದ ಸಂಸದ ಅಸದುದ್ದೀನ ಓವೈಸಿ ಅವರು ಲೋಕಸಭೆಯಲ್ಲಿ ‘ಲೋಕಸಭಾ ಸದಸ್ಯತ್ವ’ದ ಪ್ರಮಾಣ ವಚನ ಸ್ವೀಕರಿಸುವಾಗ ‘ಜಯ ಭೀಮ, ಜಯ ಮೀಮ’, ‘ಅಲ್ಲಾಹು ಅಕ್ಬರ್’ ಈ ಘೋಷಣೆಗಳೊಂದಿಗೆ ‘ಜಯ ಫಿಲೀಸ್ತೀನ (ಪ್ಯಾಲೆಸ್ಟೈನ್) ಎಂದೂ ಘೋಷಣೆ ಕೂಗಿದರು. 18 ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಮಾತನಾಡಿದ ವಿಪಕ್ಷ ನಾಯಕ ರಾಹುಲ ಗಾಂಧಿ ಇವರು ಹಿಂದೂಗಳನ್ನು ಹಿಂಸಾವಾದಿಗಳು ಎಂದು ಕರೆದರು. ಈ ಎಲ್ಲಾ ಹಿಂದೂವಿರೋಧಿ ಮತ್ತು ದೇಶವಿರೋಧಿ ಹೇಳಿಕೆಗಳು ಹಿಂದೂಗಳ ಭವಿಷ್ಯದ ಅಸ್ತಿತ್ವದ ಕುರಿತು ಪ್ರಶ್ನೆ ಮೂಡಿಸುವಂತಹದ್ದಾಗಿದೆ. ಇದರಿಂದಲೇ, ಹಿಂದೂಗಳ ರಕ್ಷಣೆಗಾಗಿ, ಹಾಗೆಯೇ ದೇಶದ ಸಮಗ್ರತೆಗಾಗಿ, ಹಿಂದೂಗಳನ್ನು ಸಂಘಟಿಸಲು ದೃಢಸಂಕಲ್ಪವನ್ನು ಈ ಅಧಿವೇಶನದಲ್ಲಿ ಮಾಡಲಾಯಿತು.

ಇಂದು ಕಾಶ್ಮೀರ, ಬಂಗಾಳ ಮೊದಲಾದ ರಾಜ್ಯಗಳಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯಗಳು ದೇಶಾದ್ಯಂತ ಪ್ರಾರಂಭವಾಗಿವೆ. ಆದ್ದರಿಂದ ಸರಕಾರ ಹಿಂದೂಗಳ ಸಮಸ್ಯೆಗಳನ್ನು ಬಗೆಹರಿಸಲು ಮಧ್ಯಪ್ರವೇಶಿಸುವಂತೆ ಮಾಡುವ ‘ಒತ್ತಡ ಗುಂಪು’ ಕಾರ್ಯಗತಗೊಳಿಸುವ ಆವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕಾಗಿ ದೇಶ-ವಿದೇಶಗಳಿಂದ ಆಗಮಿಸುತ್ತಿರುವ ಹಾಗೆಯೇ ‘ಹಿಂದೂ ರಾಷ್ಟ್ರ’ ಸಂಕಲ್ಪದೊಂದಿಗೆ ಜೋಡಿಸಲ್ಪಟ್ಟಿರುವ ಎಲ್ಲ ಹಿಂದೂ ಸಂಘಟನೆಗಳು ‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ ಮೂಲಕ ವರ್ಷವಿಡೀ ಕೆಲಸ ಮಾಡುವ ನಿರ್ಣಯವನ್ನು ಈ ಅಧಿವೇಶನದಲ್ಲಿ ಕೈಗೊಳ್ಳಲಾಯಿತು. ಈ ಮೂಲಕ ಹಿಂದೂ ‘ಈಕೋ-ಸಿಸ್ಟಮ್’ ನಿರ್ಮಾಣ ಮಾಡಲು ಪ್ರಯತ್ನಿಸಲಾಗುವುದು. ಮುಂಬರುವ ಭೀಕರ ಕಾಲವನ್ನು ನೋಡಿದರೆ ಹಿಂದೂಗಳು ಸ್ವಸಂರಕ್ಷಣೆಗಾಗಿ ಸಿದ್ಧರಾಗುವ ಆವಶ್ಯಕತೆಯ ಬಗ್ಗೆಯೂ ಗಣ್ಯರು ಪ್ರತಿಪಾದಿಸಿದ್ದಾರೆ.

ಅಧಿವೇಶನದ ಠರಾವುಗಳು : ಈ ಅಧಿವೇಶನದಲ್ಲಿ ಭಾರತ ಮತ್ತು ನೇಪಾಳವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು; ಸಂವಿಧಾನದ ಪ್ರಸ್ತಾವನೆಯಲ್ಲಿ ತುರುಕಿಸಲಾಗಿರುವ ‘ಸೆಕ್ಯುಲರ್’ ಮತ್ತು ‘ಸೋಶಿಯಲಿಸ್ಟ್’ ಎಂಬ ಪದಗಳನ್ನು ತೆಗೆದು ಹಾಕುವುದು, ಕಾಶಿ-ಮಥುರೆಯಂತಹ ಹಿಂದೂ ದೇವಸ್ಥಾನಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸಿ ಹಿಂದೂಗಳಿಗೆ ನೀಡುವುದು; ಮತಾಂತರ ಮತ್ತು ಗೋಹತ್ಯೆಯ ವಿರುದ್ಧ ಕಠಿಣ ಕಾನೂನುಗಳನ್ನು ರಚಿಸುವುದು; ಹಲಾಲ್ ಸರ್ಟಿಫಿಕೇಶನ್ ನಿಷೇಧಿಸುವುದು; ಹಿಂದೂ ದೇವಸ್ಥಾನಗಳ ಸರಕಾರೀಕರಣವನ್ನು ರದ್ದುಗೊಳಿಸುವುದು; ‘ಪ್ಲೇಸಸ್ ಆಫ್ ವರ್ಶಿಪ್’ ಮತ್ತು ‘ವಕ್ಫ್’ ಕಾನೂನು ರದ್ದುಗೊಳಿಸುವುದು; ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೊಳಿಸುವುದು; ಕಾಶ್ಮೀರಿ ಹಿಂದೂಗಳ ಪುನರ್ವಸತಿ; ಶ್ರೀರಾಮ ಸೇನೆಯ ಶ್ರೀ. ಪ್ರಮೋದ ಮುತಾಲಿಕ ಮೇಲಿನ ಗೋವಾ ನಿರ್ಬಂಧ ತೆರವುಗೊಳಿಸುವುದು; ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರನ್ನು ಹೊರಹಾಕುವುದು; ಓಟಿಟಿ ಪ್ಲಾಟ್‌ಫಾರ್ಮ್ ಕಾನೂನಿನ ವ್ಯಾಪ್ತಿಯಲ್ಲಿ ತರುವುದು; ಆನ್‌ಲೈನ್ ರಮ್ಮಿಯಂತಹ ಜೂಜಾಟಗಳನ್ನು ನಿಷೇಧಿಸುವುದು ಮುಂತಾದ ವಿಷಯಗಳ ಮೇಲಿನ ಠರಾವನ್ನು ‘ಹರ ಹರ ಮಹಾದೇವ’ ಈ ಜಯಘೋಷದೊಂದಿಗೆ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಈ ಅಧಿವೇಶನದಲ್ಲಿ ಹಿಂದೂ ರಾಷ್ಟ್ರದ ಆಂದೋಲನಕ್ಕೆ ವ್ಯಾಪಕ ರೂಪ ನೀಡಲು ಕೃತಿಯ ಸ್ತರದಲ್ಲಿ ರೂಪುರೇಷೆಗಳನ್ನು ನಿರ್ಧರಿಸಲಾಯಿತು.


ಗೋವಾ ಸರಕಾರವು ಧಾರ್ಮಿಕ ಸ್ಥಳಗಳು ಮತ್ತು ಶಾಲೆಗಳ 100 ಮೀಟರ್ ವ್ಯಾಪ್ತಿಯಲ್ಲಿ ಹೊಸ ಮದ್ಯದಂಗಡಿಗಳಿಗೆ ಅವಕಾಶ ನೀಡುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಈ ನಿರ್ಣಯವನ್ನು ಅಧಿವೇಶನದಲ್ಲಿ ವಿರೋಧಿಸಲಾಯಿತು. ಹಾಗೆಯೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಈ ನಿರ್ಣಯವನ್ನು ಹಿಂದಕ್ಕೆ ಪಡೆಯುವಂತೆ ಮನವಿ ಮಾಡಲಾಯಿತು. ಆ ಬಳಿಕ ರಾಜ್ಯ ಸರಕಾರವು ತಕ್ಷಣವೇ ಈ ನಿರ್ಣಯವನ್ನು ಹಿಂಪಡೆಯಿತು.


ಲೋಕಸಭೆಯ ಚುನಾವಣೆಯಲ್ಲಿ ಪ್ರಸ್ತುತ ಸರಕಾರಕ್ಕೆ ಅಪೇಕ್ಷಿತವಿರುವಷ್ಟು ಸ್ಥಾನ ದೊರಕದ ಕಾರಣ, ಹಿಂದುತ್ವನಿಷ್ಠರಲ್ಲಿ ಒಂದು ರೀತಿಯ ನಿರಾಶೆಯಾಗಿತ್ತು; ಆದರೆ ಈ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಿಂದ ಹಿಂದುತ್ವನಿಷ್ಠರಲ್ಲಿ ಒಂದು ಹೊಸ ಶಕ್ತಿಯನ್ನು ತುಂಬುವ ಕಾರ್ಯವಾಗಿದೆಯೆಂದು ಸ್ವಾತಂತ್ರ್ಯವೀರ ಸಾವರಕರ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷರಾದ ಶ್ರೀ. ರಣಜೀತ ಸಾವರಕರ ಇವರು ಹೇಳಿದರು.

ಹಿಂದೂ ದೇವಸ್ಥಾನಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ರಾಷ್ಟ್ರವ್ಯಾಪಿ ಅಭಿಯಾನ !
ಕಳೆದ ಎರಡು ವರ್ಷಗಳಲ್ಲಿ ಈ ಅಧಿವೇಶನದ ಮೂಲಕ ‘ಮಂದಿರ ಸಂಸ್ಕೃತಿ ರಕ್ಷಾ ಅಭಿಯಾನ’ವನ್ನು ಕೈಗೊಳ್ಳಲಾಯಿತು. ಈ ಮೂಲಕ 710 ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದ್ದು, 400 ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಮಂದಿರ ಮಹಾಸಂಘದ ವತಿಯಿಂದ ದೇಶಾದ್ಯಂತ 14 ಸಾವಿರ ದೇವಸ್ಥಾನಗಳ ಸಂಘಟನೆಯಾಗಿದೆ. ಈ ಮೂಲಕ ದೇವಸ್ಥಾನಗಳ ರಕ್ಷಣೆ ಮತ್ತು ಅಭಿವೃದ್ಧಿಯೊಂದಿಗೆ ದೇವಸ್ಥಾನಗಳ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು. ‘ಸೆಕ್ಯುಲರ’ ಸರಕಾರವು ದೇಶಾದ್ಯಂತ ಇರುವ ಹಿಂದೂಗಳ ನಾಲ್ಕೂವರೆ ಲಕ್ಷಕ್ಕೂ ಅಧಿಕ ಹಿಂದೂ ದೇವಸ್ಥಾನಗಳನ್ನು ಸರಕಾರೀಕರಣಗೊಳಿಸಿದೆ. ಈ ದೇವಸ್ಥಾನಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ರಾಷ್ಟ್ರವ್ಯಾಪಿ ಅಭಿಯಾನವನ್ನು ನಡೆಸಲಾಗುವುದು.
ಲೋಕಸಭೆ ಚುನಾವಣೆ ನಂತರ ದೇಶವಿರೋಧಿ ಶಕ್ತಿಗಳು ಆಕ್ರಮಣಕಾರಿಯಾಗಿವೆ. ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಈಗ ಉದ್ದೇಶಪೂರ್ವಕವಾಗಿ ಜಮ್ಮುವಿನಲ್ಲಿ ನಡೆಸಲಾಗುತ್ತಿದೆ. ಪಂಜಾಬ, ಪಶ್ಚಿಮ ಬಂಗಾಳ, ಮಣಿಪುರ ಮಾತ್ರವಲ್ಲದೆ ದೇಶದ ಹಲವೆಡೆ ಹಿಂದೂಗಳ ಮೇಲೆ ದಾಳಿಗಳು ಹೆಚ್ಚುತ್ತಿದೆ. ಆದ್ದರಿಂದ, ಮುಂಬರುವ ಕಾಲವು ಬಹಳ ಕಠಿಣವಾಗಿದೆ. ದಾರ್ಶನಿಕ ಸಂತರು ಸಾಧನೆಯಿಂದ ಈ ವಾತಾವರಣವನ್ನು ಬದಲಾಯಿಸಬಹುದು ಎಂದು ಹೇಳಿದ್ದಾರೆ. ಉದಾ : ಅರ್ಜುನನ ಬಳಿ ದೊಡ್ಡ ಸೈನ್ಯ ಇರಲಿಲ್ಲ; ಆದರೆ ಸಾಕ್ಷಾತ್ ಭಗವಾನ ಶ್ರೀಕೃಷ್ಣನು ಇದ್ದನು, ಹಾಗೆಯೇ ನಮ್ಮ ಬಳಿ ಧಾರ್ಮಿಕ ಶಕ್ತಿ, ಈಶ್ವರೀ ಶಕ್ತಿಯ ಆವಶ್ಯಕತೆಯಿದೆ. ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರತಿಯೊಬ್ಬ ಹಿಂದುವೂ ಸಾಧನೆ ಮಾಡುವುದು ಆವಶ್ಯಕವಾಗಿದೆ. ಈಗ ರಾಮರಾಜ್ಯದ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರವನ್ನು ಪ್ರತ್ಯಕ್ಷ ಸಾಕಾರಗೊಳಿಸಲು ಸ್ವಕ್ಷಮತೆಯನುಸಾರ ತನು-ಮನ-ಧನ ಮತ್ತು ಪ್ರಸಂಗ ಬಿದ್ದರೆ ಸರ್ವಸ್ವವನ್ನು ತ್ಯಾಗ ಮಾಡುವ ಅಂದರೆ ಸರ್ವೋಚ್ಚ ಕೊಡುಗೆ ನೀಡುವ ಆವಶ್ಯಕತೆಯಿದೆ. ಈ ಸಂದೇಶವನ್ನು ಈ ಅಧಿವೇಶನದ ಮೂಲಕ ಹಿಂದೂಗಳಿಗೆ ನೀಡಲಾಗಿದೆ.

Related post

Leave a Reply

Your email address will not be published. Required fields are marked *

error: Content is protected !!