ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ ನಾಳೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ರವರೆಗೆ
ಬೆಳ್ತಂಗಡಿ ಉಪವಿಭಾಗದ ಕಲ್ಲೇರಿ ಶಾಖಾ ವ್ಯಾಪ್ತಿಯ 110/33/11 ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಕಲ್ಲೇರಿ ಟೌನ್ ಹಾಗೂ ಮುಗೇರಡ್ಕ ಫೀಡರುಗಳ ಹೊರೆಯನ್ನು ವಿಂಗಡಿಸಲು ಪ್ರತ್ಯೇಕವಾದ ಫೀಡರನ್ನು ನಿರ್ಮಿಸುವ ಹಾಗೂ ಉಪ್ಪಿನಂಗಡಿ ಟೌನ್, ಕೆಮ್ಮಾರ, ಕಲ್ಲೇರಿ ಟೌನ್ ಹಾಗೂ ಪದ್ಮುಂಜ ಫೀಡರುಗಳ ಹೆಚ್ ಟಿ ಲೈನ್ ಗೆ ತಾಗುತ್ತಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ನಾಳೆ (29) ರಂದು ಬೆಳಗ್ಗೆ 10 ರಿಂದ ಸಂಜೆ 5.30 ರ ತನಕ 11 ಕೆವಿ ಉಪ್ಪಿನಂಗಡಿ ಟೌನ್, ಕೆಮ್ಮಾರ, ಕಲ್ಲೇರಿ ಟೌನ್ ಹಾಗೂ ಪದ್ಮುಂಜ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ.