ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಾಳೆ(ಜುಲೈ 21) ಸಂಜೆ 4 ಗಂಟೆಗೆ ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಶ್ರೀ ಕೃಷ್ಣಾನುಗ್ರಹ ಸಭಾಂಗಣದಲ್ಲಿ ಗುರುಪೂರ್ಣಿಮೆ ಮಹೋತ್ಸವ
ಹಿಂದೂ ಜನಜಾಗೃತಿ ಸಮಿತಿಯು ಕಳೆದ 22 ವರ್ಷಗಳಿಂದ ನಿರಂತರ ರಾಷ್ಟ್ರ ಮತ್ತು ಧರ್ಮಕಾರ್ಯ ಮಾಡುತ್ತಿದ್ದು, ಭಾರತದ ಸಂಸ್ಕೃತಿಯನ್ನು ರಕ್ಷಿಸುವ ಮತ್ತು ಸಂವರ್ಧನೆಗೊಳಿಸುವ ಅತ್ಯುನ್ನತ ಕಾರ್ಯವನ್ನು ಹಿಂದಿನಿಂದೂ ಗುರು-ಶಿಷ್ಯ ಪರಂಪರೆ ಮಾಡಿದೆ.
ಸ್ವಾಮಿ ವಿವೇಕಾನಂದರಿಗೆ ಭಾರತದ ವೈಶಿಷ್ಟ್ಯವನ್ನು ಒಂದೇ ವಾಕ್ಯದಲ್ಲಿ ವಿವರಿಸಿ ಎಂದಾಗ ಅವರು, ‘ಗುರುಶಿಷ್ಯ ಪರಂಪರೆಯೇ ಭಾರತದ ವೈಶಿಷ್ಟ್ಯವಾಗಿದೆ’ ಎಂದಿದ್ದರು. ಯಾವುದೇ ಕಾರ್ಯಕ್ಕೆ ಗುರಗಳ ಕೃಪೆಯಿದ್ದರೆ ಅದರಲ್ಲಿ ಯಶಸ್ಸು ನಿಶ್ಚಿತ. ಇಂತಹ ತೇಜಸ್ವಿ ಗುರು-ಶಿಷ್ಯ ಪರಂಪರೆಯನ್ನು ಸ್ಮರಿಸಲು ಮತ್ತು ಆದರ್ಶ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ಪ್ರೇರಣೆ ನೀಡಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜುಲೈ 21 ರಂದು ಸಂಜೆ 4.00 ಗಂಟೆಗೆ ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಶ್ರೀ ಕೃಷ್ಣಾನುಗ್ರಹ ಸಭಾಂಗಣದಲ್ಲಿ ಗುರುಪೂರ್ಣಿಮೆ ಮಹೋತ್ಸವವನ್ನು ಆಯೋಜಿಸಲಾಗಿದೆ.