ಕೊಯ್ಯುರು: ಹಲವಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ
ಕೊಯ್ಯೂರು:ಕೊಯ್ಯುರು ಗ್ರಾಮದ ಆದೂರ್ ಪೇರಾಲ್ ನಲ್ಲಿ ನಡೆದ ಬೆಳ್ತಂಗಡಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ ರವರ ಚುನಾವಣಾ ಪ್ರಚಾರ ಸಂಧರ್ಭದಲ್ಲಿ ಹಲವಾರು ಮಂದಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿದರು.
ಕೊಯ್ಯುರ್ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ನಾರಾಯಣ ನೀರಾಕಜೆ, ಬಿಜೆಪಿಯ ಸಕ್ರಿಯ ಕಾರ್ಯಕರ್ತ ಮೋನಪ್ಪ ಸಾಲಿಯಾನ್ ಬಜಿಲ, ರವೀಂದ್ರ ಪೂಜಾರಿ ಬಜಿಲ, ಲೋಹಿತ್ ಉಮಿಯ, ಸುರೇಶ ಉಮಿಯ, ಯೋಗೀಶ್ ಪದ್ಮುಂಜ, ದೇಜಪ್ಪ ನಿರಾರಿ, ರವೀಂದ್ರ ಆಚಾರ್ಯ ಕೊಯ್ಯುರು ಮುಂತಾದವರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.
ಈ ಸಂಧರ್ಭದಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ, ಅಭ್ಯರ್ಥಿ ರಕ್ಷಿತ್ ಶಿವರಾಂ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಮಾಜಿ ಅಧ್ಯಕ್ಷ ರಾಜಶೇಖರ ಅಜ್ರಿ, ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೇಸ್ ಅಧ್ಯಕ್ಷ ಶಾಹುಲ್ ಹಮೀದ್, ಪ್ರವೀಣ್ ವಿ.ಜಿ. ಮುಂತಾದವರು ಉಪಸ್ಥಿತರಿದ್ದರು.