• July 16, 2024

ಕೊಯ್ಯೂರು ಶಕ್ತಿಕೇಂದ್ರದಲ್ಲಿ ನಮೋ ಯುವಚೌಪಲ್ 400 ಯೋಜನೆಗಳ ಮಾಹಿತಿ ಕಾರ್ಯಕ್ರಮ

 ಕೊಯ್ಯೂರು ಶಕ್ತಿಕೇಂದ್ರದಲ್ಲಿ ನಮೋ ಯುವಚೌಪಲ್ 400 ಯೋಜನೆಗಳ ಮಾಹಿತಿ ಕಾರ್ಯಕ್ರಮ

ಕೊಯ್ಯೂರು : ಕುವೆಟ್ಟು ಮಹಾಶಕ್ತಿ ಕೇಂದ್ರದ ಕೊಯ್ಯೂರು ಶಕ್ತಿಕೇಂದ್ರದಲ್ಲಿ ಮಾರ್ಚ್ 20 ರಂದು ನಮೋ ಯುವಚೌಪಲ್ 400 ಯೋಜನೆಗಳ ಮಾಹಿತಿ ಕಾರ್ಯಕ್ರಮ ಕೊಯ್ಯೂರು ಅದೂರುಪೇರಾಲ್ ಹಾಲು ಉತ್ಪಾದಕರ ಸಹಕಾರಿ ಸಂಘದ ಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ ಇವರು ನಮೋ ಯುವ ಚೌಪಾಲ್ ಬಗ್ಗೆ ಮಾಹಿತಿ ನೀಡಿದರು.

ಮಂಡಲ ಯುವಮೋರ್ಚಾ ಕಾರ್ಯದರ್ಶಿ ಹರೀಶ್ ಗೌಡ ಸಂಬೋಳ್ಯ,, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಹಾಗೂ ನಿಕಟ ಪೂರ್ವ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯದರ್ಶಿ ಗೀತಾ ರಾಮಣ್ಣ ಗೌಡ,ಪಂಚಾಯತ್ ಅಧ್ಯಕ್ಷರಾದ ದಯಮಣಿ,ಶಕ್ತಿ ಕೇಂದ್ರದ ಅಧ್ಯಕ್ಷರಾದ ತಾರಾನಾಥ ಗೌಡ ಹಾಗೂ ಪಂಚಾಯತ್ ಸದಸ್ಯರು ಹಾಗೂ ಬೂತ್ ಅಧ್ಯಕ್ಷ, ಕಾರ್ಯದರ್ಶಿಗಳು,ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!