ಕೊಯ್ಯೂರು ಕ್ರಾಸ್ ಬಳಿ ಬೈಕ್ ಮತ್ತು ಬಸ್ ಡಿಕ್ಕಿ: ಓರ್ವ ಸಾವು
ಲಾಯಿಲ: ಉಜಿರೆಯಿಂದ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ತೆರಳುತ್ತಿರುವ ವೇಳೆ ಕೊಯ್ಯೂರು ಕ್ರಾಸ್ ಬಳಿ ಬೈಕ್ ಗೆ ಹುಬ್ಬಳ್ಳಿಯಿಂದ ಧರ್ಮಸ್ಥಳ ಕ್ಕೆ ಬರುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಸಾವನ್ನಪ್ಪಿದ್ದು ಇನ್ನೋರ್ವ ಸವಾರ ಸಣ್ಣ ಪುಟ್ಟ ಗಾಯಗೊಂಡಿರುವ ಘಟನೆ ಡಿ.20 ರಂದು ನಡೆದಿದೆ.
ಬೈಕ್ ಸವಾರ ವಿಜಯ್ ಎಂಬಾತ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಮತ್ತೋರ್ವ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.
ಮೃತ ಯುವಕ ತಂದೆ ಇಲ್ಲದೆ ತಾಯಿ ಹಾಗೂ ತಂಗಿಯೊಂದಿಗೆ ವಾಸವಾಗಿದ್ದು ಈತನೆ ಮನೆಗೆ ಆಧಾರಸ್ತಂಭವಾಗಿದ್ದ. ಸಂಜೆ ಉಜಿರೆಗೆ ಕೆಲಸಕ್ಕೆಂದು ಬೈಕ್ ನಲ್ಲಿ ಬರುತ್ತಿದ್ದ . ಇಂದು ಕೂಡ ಬೈಕ್ ನಲ್ಲಿ ಬಂದಿದ್ದ ಈ ಯುವಕ ಸಂಜೆ ಮನೆಗೆ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ