• October 13, 2024

ಶಿಬಾಜೆ ಗ್ರಾಮದಲ್ಲಿ ನಡೆದ ದಲಿತ ವ್ಯಕ್ತಿಯ ಕೊಲೆ ಪ್ರಕರಣ: ಹತ್ಯೆಗೆ ಆಕೆ ಕಾರಣವಾಗಿರಬಹುದು ಎಂದು ಮಾತನಾಡುತ್ತಿರುವ ಸ್ಥಳೀಯರು!! ಕೊಲೆ ನಡೆಸಿದ ಆರೋಪಿಗಳಾದರೂ ಎಲ್ಲಿದ್ದಾರೆ? ಎಲ್ಲಾ ಊಹಾಪೋಹಗಳಿಗೆ ಪೊಲೀಸರ ತನಿಖೆಯಿಂದ ಸಿಗಬೇಕಾಗಿದೆ ಉತ್ತರ

 ಶಿಬಾಜೆ ಗ್ರಾಮದಲ್ಲಿ ನಡೆದ ದಲಿತ ವ್ಯಕ್ತಿಯ ಕೊಲೆ ಪ್ರಕರಣ: ಹತ್ಯೆಗೆ ಆಕೆ ಕಾರಣವಾಗಿರಬಹುದು ಎಂದು ಮಾತನಾಡುತ್ತಿರುವ ಸ್ಥಳೀಯರು!! ಕೊಲೆ ನಡೆಸಿದ ಆರೋಪಿಗಳಾದರೂ ಎಲ್ಲಿದ್ದಾರೆ? ಎಲ್ಲಾ ಊಹಾಪೋಹಗಳಿಗೆ ಪೊಲೀಸರ ತನಿಖೆಯಿಂದ ಸಿಗಬೇಕಾಗಿದೆ ಉತ್ತರ

 


ಶಿಬಾಜೆ: ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಎ.ಸಿ ಕುರಿಯನ್ ಅವರಿಗೆ ಸೇರಿದ ತೋಟವೊಂದರಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ದಲಿತ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಪ್ರಾರಂಭಗೊಂಡು ದಿನಗಳೇ ಕಳೆದರೂ ಆರೋಪಿಗಳ ಪತ್ತೆಯಾಗಿಲ್ಲ ಎನ್ನುವ ಬಗ್ಗೆ ಆಕ್ರೋಶವೊಂದು ಹೊರಬಿದ್ದಿದ್ದು ದಲಿತ ಸಂಘಟನೆಗಳು ಬೀದಿಗಿಳಿಯುವ ಬಗ್ಗೆ ಎಚ್ಚರಿಕೆ ನೀಡಿದೆ.


ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಎ.ಸಿ ಕುರಿಯನ್ ಅವರಿಗೆ ಸೇರಿದ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಶ್ರೀಧರ ಎಂಬವರಿಗೆ ನಾಲ್ವರ ತಂಡವೊಂದು ಹಲ್ಲೆಗೈದಿದ್ದರು. ಹಲ್ಲೆಯ ಬಳಿಕ ಇತರ ಕೆಲಸಗಾರರು ಅಲ್ಲೇ ಪಕ್ಕದಲ್ಲಿರುವ ಕೊಠಡಿಯೊಂದರಲ್ಲಿ ವಿಶ್ರಾಂತಿ ಪಡೆಯಲು ಕಳುಹಿಸಿದ್ದರು ಎನ್ನಲಾಗಿದೆ. ಮಾರನೇ ದಿನ ಡಿ.18 ರಂದು ಶ್ರೀಧರ್ ನನ್ನು ಕರೆದಾಗ ಯಾವುದೇ ಸುಳಿವು ಸಿಗದೇ ಇದ್ದುದರಿಂದ ಗಾಬರಿಗೊಂಡ ಇತರ ಕೆಲಸಗಾರರು ಎಲ್ಲೆಡೆ ಹುಡುಕಾಡಿದ್ದು ಈ ವೇಳೆ ತೋಟದಲ್ಲಿ ಬೆತ್ತಲೆಯಾಗಿ ಮೃತದೇಹ ಪತ್ತೆಯಾಗಿದೆ.

ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಪೊಲೀಸರು ಆಗಮಿಸಿ ಸ್ಥಳ ಮಹಜರು ನಡೆಸಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.


ಈ ಬಗ್ಗೆ ದಲಿತ ಸಂಘಟನೆ ಮುಖಂಡರು ಧ್ವನಿ ಎತ್ತಿದ್ದು, ಕೃತ್ಯ ನಡೆದು ದಿನಗಳೇ ಕಳೆದರೂ ಇನ್ನೂ ಆರೋಪಿಗಳ ಬಂಧನವಾಗದ ಹಿನ್ನೆಲೆಯಲ್ಲಿ ಕೂಡಲೇ ಆರೋಪಿಗಳನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಸದ್ಯ ಈ ವಿಚಾರ ಸುದ್ದಿಯಾಗಿದ್ದು ಕೊಲೆಗೆ ಆಕೆಯೊಬ್ಬಳು ಕಾರಣವಾಗಿದ್ದಾಳೆ ಆಕೆಯ ವಿಚಾರದಲ್ಲೇ ಜಗಳ ನಡೆದು ಓರ್ವನ ಹತ್ಯೆಯಾಗಿದೆ ಎನ್ನುವ ಮಾತುಗಳು ಸ್ಥಳೀಯವಾಗಿ ಕೇಳಿಬರುತ್ತಿದ್ದು, ಕೊಲೆ ನಡೆಸಿದ ಆರೋಪಿಗಳಾದರೂ ಎಲ್ಲಿದ್ದಾರೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡಿದ್ದು ಪೊಲೀಸರ ತನಿಖೆಯಿಂದ ಎಲ್ಲಾ ಊಹಾಪೋಹಗಳಿಗೆ ಉತ್ತರ ಸಿಗಲಿದೆ.

Related post

Leave a Reply

Your email address will not be published. Required fields are marked *

error: Content is protected !!