ಕರಾವಳಿಯಾದ್ಯಂತ ಕೆಂಗಣ್ಣು ಖಾಯಿಲೆ ಹರಡುತ್ತಿದ್ದು ಜನ ಆತಂಕಕ್ಕೊಳಗಾಗಿದ್ದಾರೆ. ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಕಣ್ಣಿನ ಆರೋಗ್ಯದ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ.ಕಣ್ಣಿನ ಸಮಸ್ಯೆಯು ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಈ ಬಾರಿ ಮಳೆಗಾಲ ಮುಗಿದು ಚಳಿಗಾಲದ ಆರಂಭದಲ್ಲೇ ಈ ಸಮಸ್ಯೆ ತೀವ್ರವಾಗಿದೆ. ತಜ್ಞರ ಪ್ರಕಾರ ಈ ಬೇಸಿಗೆಯಲ್ಲಿ ಈ ರೋಗವು ಹೆಚ್ಚು ಅಪಾಯಕಾರಿ ಎಂದು ಸಾಬೀತಾಗಿದೆ ಮತ್ತು ಈ ಕಾಯಿಲೆಗೆ ಕಾರಣವಾದ ಬ್ಯಾಕ್ಟೀರಿಯಾಗಳು ಮೊದಲಿಗಿಂತ ಹೆಚ್ಚು ತೀವ್ರವಾಗಿರಲಿದ್ದು, ಅಸ್ತಿತ್ವದಲ್ಲಿರುವ ಔಷಧಿಗಳ ಪರಿಣಾಮವು ಅವುಗಳ ಮೇಲೆ ಬೀರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ. […]
ಕರಾವಳಿಯಾದ್ಯಂತ ಕೆಂಗಣ್ಣು ಕಾಯಿಲೆ ಹರಡುತ್ತಿದ್ದು, ಜನ ಆತಂಕಕ್ಕೊಳಗಾಗಿದ್ದಾರೆ. ಮಕ್ಕಳಲ್ಲಿ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಜಿಲ್ಲೆಯ ಇತರ ಭಾಗಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಕಾಯಿಲೆ ಇದಾಗಿದ್ದು, ಮನೆ, ಶಾಲೆ, ಆಸ್ಪತ್ರೆ ,ಮಾರ್ಕೆಟ್ ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ತೆರಳುವ ಕಾಯಿಲೆ ಇದ್ದವರಿಂದ ಇತರರಿಗೂ ಹಬ್ಬುತ್ತಿದೆ. ಇನ್ನು ಮೆದುಳು ಜ್ವರ ಲಸಿಕೆಯ ಸರ್ವೇಗೆಂದು ಮನೆ ಮನೆ ಭೇಟಿ ನೀಡುವ ಆಶಾ ಕಾರ್ಯಕರ್ತೆಯರಲ್ಲಿಯೂ ಜ್ವರ ಕಾಣಿಸಿಕೊಳ್ಳುತ್ತಿದೆ. ತಿಂಗಳ ಚುಚ್ಚುಮದ್ದಿಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವ ಕೆಂಗಣ್ಣು ಕಾಯಿಲೆ […]Read More
ಕಾಯರ್ತಡ್ಕ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ವತಿಯಿಂದ ಮತ್ತು ಗ್ರಾಮಸ್ಥರು ಹಾಗೂ ಕಳೆಂಜ ಗ್ರಾ.ಪಂ ಸಹಯೋಗದೊಂದಿಗೆ ಬಸ್ಸಿನ ಸಮಸ್ಯೆಯ ಕುರಿತು ನ.6 ರಂದುಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳೆಂಜ ಕಾಯರ್ತಡ್ಕದಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕಳೆಂಜ ಗ್ರಾ.ಪಂ ಅಧ್ಯಕ್ಷ ಪ್ರಸನ್ನ ಎಪಿ ವಹಿಸಿದ್ದರು. ಈ ಸಂದರ್ಭದಲ್ಲಿ ಮಿಯ್ಯೂರು- ಕಾಯರ್ತಡ್ಕ- ಬರೆಂಗಾಯ- ಧರ್ಮಸ್ಥಳ ದ ವರೆಗೆ ಸಂಚರಿಸುತ್ತಿರುವ ಬಸ್ಗಳ ಸಮಸ್ಯೆಗಳ ಕುರಿತು, 5.45 ಕ್ಕೆ ಧರ್ಮಸ್ಥಳ- ಬರೆಂಗಾಯ – ಕಾಯರ್ತಡ್ಕ ಮಿಯ್ಯಾರು ವರೆಗೆ ಸಂಚರಿಸುತ್ತಿದ್ದ […]Read More
ಕುದ್ರಾಯ: ಧರ್ಮಸ್ಥಳದಿಂದ ಮಿಯಾರ್ ಗೆ ತೆರಳುವ ಬಸ್ ಸಂಜೆ 5:30 ಸುಮಾರಿಗೆ ಕುದ್ರಾಯ ಎಂಬಲ್ಲಿ ಕೆಟ್ಟು ನಿಂತು ಇಂದು ವಿದ್ಯಾರ್ಥಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಸಮಯಕ್ಕೆ ಸರಿಯಾಗಿ ಬದಲಿ ಬಸ್ ನೀಡಿದ್ದರು ಸಹ ವಿದ್ಯಾರ್ಥಿಗಳಿಗೆ ಅಡಚಣೆಯುಂಟಾಗಿದೆ. ಈ ಮೊದಲು ಹಲವಾರು ಭಾರೀ ಇದೇ ಸಮಸ್ಯೆಗಳಾಗಿದ್ದು ಬರೆಂಗಾಯ ಕಾರ್ಯಾತಡ್ಕ ಹಾಗೂ ಮಿಯಾರ್ ಗೆ ತೆರಳುವ ಪ್ರಯಾಣಿಕರಿಗೆ ಅಸಮಾಧಾನ ಉಂಟಾಗಿದೆ. ಅತೀ ಹೆಚ್ಚು ಪ್ರಯಾಣಿಕರನ್ನು ತುಂಬಿಸಿಕೊಂಡು ಬರುವ ಈ ಬಸ್ಸಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಆದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಗದ […]Read More
ಧರ್ಮಸ್ಥಳ: ಹೈದರಾಬಾದ್ ಮೂಲದ ಮೇಕಪ್ ಆರ್ಟಿಸ್ಟ್ ಶ್ವೇತಾ ಎಸ್ ರೆಡ್ಡಿ ಎಂಬಾಕೆ ಕಾಂತಾರ ಚಿತ್ರದ ಪಂಜುರ್ಲಿ ದೈವದ ರೀಲ್ಸ್ ಮಾಡಿ ಇನ್ ಸ್ಟಾಗ್ರಾಂ ನಲ್ಲಿ ಹರಿಬಿಟ್ಟಿದ್ದು, ಈ ಪೋಸ್ಟ್ ಗೆ ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ತನ್ನ ತಪ್ಪಿನ ಅರಿವಾಗಿದ್ದ ಯುವತಿ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ತಪ್ಪೊಪ್ಪಿಗೆ ಕಾಣಿಕೆಯನ್ನು ಹಾಕಿದ್ದಾಳೆ. ತುಳುನಾಡಿನ ನಂಬಿಕೆಯ ದೈವ ಪಂಜುರ್ಲಿಯ ರೀಲ್ಸ್ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಇದೀಗ ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಿ ತಪ್ಪೊಪ್ಪಿಗೆ ಕಾಣಿಕೆಯನ್ನು ಹಾಕಿ, […]Read More
ಬಂದಾರು: ಬಂದಾರು ಗ್ರಾಮದ ಬೈಪಾಡಿ ನೇರೋಳ್ದಪಲಿಕೆ (ಪೆರ್ಲ) ಕಾಲೋನಿಯಲ್ಲಿ ಇತ್ತೀಚೆಗೆ ಆಕಸ್ಮಿಕವಾಗಿ ಮೃತರಾದ ಬಾಬು ಅವರ ತಾಯಿ ಚಂರ್ಬೆ ಅವರ ಕುಟುಂಬಕ್ಕೆ ಶಾಸಕ ಹರೀಶ್ ಪೂಂಜರವರು ನೀಡಿದ ಧನ ಸಹಾಯ ಹಾಗೂ ಗ್ರಾಮಪಂಚಾಯತ್ ವತಿಯಿಂದ ತುರ್ತು ಸಹಾಯದ ನಿಧಿಯ ರೂ 3,000/- ದ ಚೆಕ್ ಬಂದಾರು ಗ್ರಾ.ಪಂ. ಅಧ್ಯಕ್ಷೆ ಪರಮೇಶ್ವರಿ ಕೆ ಗೌಡ ಹಾಗೂ ಬೂತ್ ಪ್ರಮುಖರಾದ ಹೊನ್ನಪ್ಪ ಗೌಡ ಅವರು ಮೃತರ ಕುಟುಂಬಕ್ಕೆ ಹಸ್ತಾಂತರ ಮಾಡಿ, ಸಾಂತ್ವನ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ. […]Read More
ಪುದುವೆಟ್ಟು: ಅಕ್ರಮ ಗೋಸಾಗಾಟ: ಆರೋಪಿಗಳನ್ನು ಪೊಲೀಸರಿಗೊಪ್ಪಿಸಿದ ಪುದುವೆಟ್ಟು ಕಾಯರ್ತಡ್ಕ ಬಜರಂಗದಳ ಕಾರ್ಯಕರ್ತರು: 6
ನೆರಿಯ: ಕಾಯರ್ತಡ್ಕದಿಂದ ಅಣಿಯೂರಿಗೆ ಪಿಕಪ್ ನಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ತಿಳಿದ ಪುದುವೆಟ್ಟು ಕಾಯರ್ತಡ್ಕ ಬಜರಂಗದಳ ಕಾರ್ಯಕರ್ತರು ಮಿಂಚಿನ ಕಾರ್ಯಚರಣೆ ನಡೆಸಿ, ಆರೋಪಿಗಳನ್ನು ನಿಖರ ಮಾಹಿತಿ ಮೇರೆಗೆ ಪುದುವೆಟ್ಟು ಕಾಯರ್ತಡ್ಕ ಬಜರಂಗದಳ ಕಾರ್ಯಕರ್ತರು ತಡೆದು ಪರಿಶೀಲಿಸಿದಾಗ 6 ಗೋವುಗಳು ಪತ್ತೆಯಾಗಿರುವ ಘಟನೆ ನ. 2 ರಂದು ಪುದುವೆಟ್ಟು ಬಾಯಿತರು ಎಂಬಲ್ಲಿ ನಡೆದಿದೆ. ಪತ್ತೆಯಾಗಿದ್ದ ಗೋವುಗಳನ್ನು ಬಜರಂಗದಳ ಕಾರ್ಯಕರ್ತರು ರಕ್ಷಣೆ ಮಾಡಿದ್ದು ಆರೋಪಿಗಳನ್ನು ಧರ್ಮಸ್ಥಳ ಪೊಲೀಸರಿಗೊಪ್ಪಿಸಿದ್ದಾರೆ. ಆರೋಪಿಗಳಾದ ಆಜೀದ್ ಕಕ್ಕಿಂಜೆ, ರಫೀಕ್ ನೆರಿಯ, […]Read More
ಕಂಬಳಬೆಟ್ಟು: ವಿಟ್ಲ ಮಡ್ನೂರು ಗ್ರಾಮದ ಬಂಟ್ವಾಳ ತಾಲೂಕಿನ ಕಂಬಳ ಬೆಟ್ಟು ನಿವಾಸಿ ದಿವಂಗತ ವನರಾಜ ಹಾಗೂ ಲೀಲಾವತಿ ದಂಪತಿಯ ಪುತ್ರಿ ವರ್ಷಿನಿ 14 ವರ್ಷದ ಬಾಲಕಿಯ ತಲೆಯ ನರದ ತೊಂದರೆಯಿಂದ ಬಳಲುತ್ತಿದ್ದ ಬಾಲಕಿಗೆ ಶ್ರೀ ವಿಷ್ಟು ಯುವಶಕ್ತಿ ಬಳಗ (ರಿ) ಮಜ್ಜಾರಡ್ಕ ವತಿಯಿಂದ ನಡೆದ ಕೆಸರುಡೊಂಜಿ ದಿನ ಕಾರ್ಯಕ್ರಮದಲ್ಲಿ ಚುಕ್ಕಿ ವಿಟ್ಲ ,ರವಿ ಬೆಳ್ಳಾರೆ ಹಾಗೂ ನಾಗೇಶ್ ಬೆಳ್ಳಾರೆ ವಿಶೇಷ ವೇಷ ಧರಿಸಿ ಸಹಾಯ ಹಸ್ತಕ್ಕಾಗಿ ಡಬ್ಬ ಹಿಡಿದು ಹಣ ಸಂಗ್ರಹಣೆ ಮಾಡಿ ಅದರಲ್ಲಿ ಬಂದ […]Read More
ಕಂಬಳಬೆಟ್ಟು: ವಿಟ್ಲ ಮುಡ್ನೂರು ಗ್ರಾಮದ, ಬಂಟ್ವಾಳ ತಾಲೂಕಿನ ಕಂಬಳಬೆಟ್ಟು ನಿವಾಸಿ ದಿವಂಗತ ವನರಾಜ ಹಾಗೂ ಲೀಲಾವತಿ ದಂಪತಿಯ ಪುತ್ರಿ ವರ್ಷಿಣಿ(14) ಎಂಬ ಪುಟ್ಟ ಬಾಲಕಿ ತಲೆಯ ನರದ ತೊಂದರೆಯಿಂದ ಬಳಲುತ್ತಿದ್ದಾರೆ. ಬಾಳಿ ಬದುಕಬೇಕಾಗಿರುವ ಈ ಪುಟ್ಟ ಕಂದಮ್ಮ ಅನಾರೋಗ್ಯದಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ದಾನಿಗಳ ಧನದ ಸಹಾಯಕ್ಕೆ ಮಿಡಿಯುತ್ತಿದ್ದಾರೆ. ಮಂಗಳೂರು ಕದ್ರಿ ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಮನೆಗೆ ವಾಪಾಸ್ಸಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಆರ್ಥಿಕ ನೆರವಿನ ಸಹಾಯ ಬೇಕಾಗಿದೆ. ಕೈ ಕಾಲುಗಳಲ್ಲಿ ಶಕ್ತಿಯನ್ನು ಕಳೆದುಕೊಂಡ […]Read More
ಕೊಕ್ಕಡ: ಕೊಕ್ಕಡ ಗ್ರಾ.ಪಂ ವ್ಯಾಪ್ತಿಯ ಮಲ್ಲಿಗೆ ಮಜಲಿನಿಂದ ಸೌತಡ್ಕಕ್ಕೆ ಸಂಪರ್ಕಿಸುವ ಪಂಚಾಯತ್ ರಸ್ತೆಯನ್ನು ಸರಿಪಡಿಸುವಂತೆ ವಾರ್ಡ್ ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗದೇ ಇದ್ದಾಗ ಸ್ಥಳೀಯ ನಿವಾಸಿಗಳೇ ಖರ್ಚು ಮಾಡಿ ಸರಿಪಡಿಸಿದ್ದಾರೆ. ಮಳೆಯ ಸಂದರ್ಭ ಅಲ್ಲಿಯ ಸ್ಥಳೀಯರು ನಡೆದಾಡಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು ಇದರಿಂದ ಬೇಸತ್ತ ಸ್ಥಳೀಯರು ಪಂಚಾಯತ್ ವಾರ್ಡ್ ಸದಸ್ಯರ ಗಮನಕ್ಕೆ ತಂದಿದ್ದರು ಆದರೆ ಏನೂ ಪ್ರಯೋಜನವಾಗದೇ ಇದ್ದಾಗ ಅಲ್ಲಿಯ ಸ್ಥಳೀಯರೇ ಹಿಟಾಚಿ ಮೂಲಕ ಹೊಂಡ ಗಳನ್ನು ಮುಚ್ಚಿ ಸಂಚಾರ ಯೋಗ್ಯವಾದ […]Read More