• July 27, 2024

ಕಂಬಳಬೆಟ್ಟು: ತಲೆಯ ನರದ ತೊಂದರೆಯಿಂದ ಬಳಲುತ್ತಿರುವ ವರ್ಷಿಣಿ ಎಂಬ ಪುಟ್ಟ ಬಾಲಕಿಗೆ ಬೇಕಿದೆ ನೆರವಿನ ಹಸ್ತ: ಮೊದಲಿನಂತಾಗಲು ಪರಿತಪಿಸುತ್ತಿರುವ ಪುಟ್ಟ ಜೀವ

 ಕಂಬಳಬೆಟ್ಟು: ತಲೆಯ ನರದ ತೊಂದರೆಯಿಂದ ಬಳಲುತ್ತಿರುವ ವರ್ಷಿಣಿ ಎಂಬ ಪುಟ್ಟ ಬಾಲಕಿಗೆ ಬೇಕಿದೆ ನೆರವಿನ ಹಸ್ತ: ಮೊದಲಿನಂತಾಗಲು ಪರಿತಪಿಸುತ್ತಿರುವ ಪುಟ್ಟ ಜೀವ

ಕಂಬಳಬೆಟ್ಟು: ವಿಟ್ಲ ಮುಡ್ನೂರು ಗ್ರಾಮದ, ಬಂಟ್ವಾಳ ತಾಲೂಕಿನ ಕಂಬಳಬೆಟ್ಟು ನಿವಾಸಿ ದಿವಂಗತ ವನರಾಜ ಹಾಗೂ ಲೀಲಾವತಿ ದಂಪತಿಯ ಪುತ್ರಿ ವರ್ಷಿಣಿ(14) ಎಂಬ ಪುಟ್ಟ ಬಾಲಕಿ ತಲೆಯ ನರದ ತೊಂದರೆಯಿಂದ ಬಳಲುತ್ತಿದ್ದಾರೆ.

ಬಾಳಿ ಬದುಕಬೇಕಾಗಿರುವ ಈ ಪುಟ್ಟ ಕಂದಮ್ಮ ಅನಾರೋಗ್ಯದಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ದಾನಿಗಳ ಧನದ ಸಹಾಯಕ್ಕೆ ಮಿಡಿಯುತ್ತಿದ್ದಾರೆ.

ಮಂಗಳೂರು ಕದ್ರಿ ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಮನೆಗೆ ವಾಪಾಸ್ಸಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಆರ್ಥಿಕ ನೆರವಿನ ಸಹಾಯ ಬೇಕಾಗಿದೆ.

ಕೈ ಕಾಲುಗಳಲ್ಲಿ ಶಕ್ತಿಯನ್ನು ಕಳೆದುಕೊಂಡ ಈ ಪುಟಾಣಿ ಮೊದಲಿನಂತಾಗಲು ಪರಿತಪಿಸುತ್ತಿದೆ. ನಾನು ಮೊದಲಿನಂತೆ, ಎಲ್ಲಾ ಮಕ್ಕಳಂತೆ ಆಟವಾಡುತ್ತ ಸಂತೋಷದಿಂದ ಕುಣಿದಾಡಲು ನನಗೆ ಯಾವಾಗ ಶಕ್ತಿ ಬರುತ್ತಮ್ಮ ಎಂದು ಕಣ್ ಸನ್ನೆಯಲ್ಲೇ ಮನಸಿನ ಅಗಾಧ ನೋವನ್ನು ಹೇಳಿಕೊಳ್ಳುವ ದೃಶ್ಯ ನೋಡುಗರ ಕಣ್ಣಂಚಲಿ ನೀರು ಬರದೇ ಇರಲಾರದು.

ದಯಮಾಡಿ ಈ ಪುಟ್ಟ ಬಾಲಕಿ ಮೊದಲಿನಂತಾಗಲು ದಾನಿಗಳ, ಸಂಘ ಸಂಸ್ಥೆಗಳ , ನಮ್ಮೆಲ್ಲರ ಸಹಾಯ ತುಂಬಾನೆ ಅಗತ್ಯವಾಗಿದೆ. ತಂದೆಯನ್ನು ಕಳೆದುಕೊಂಡ ಬಾಲಕಿಗೆ ತಾಯಿ ಹಾಗೂ ಸಹೋದರನೇ ಆಸರೆ. ಈಕೆಯನ್ನು ಕಂಡಾಗ ತಾಯಿ ಮನಸ್ಸು ಭಾರವಾಗುತ್ತದೆ. ದಯಮಾಡಿ ಸಹಾಯದ ನಿರೀಕ್ಷೆಯಲ್ಲಿದೆ ಈ ಕುಟುಂಬ. ಆರ್ಥಿಕ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಸಹಾಯ ನೀಡುವಿರಾ? ಆ ಪುಟ್ಟ ಬಾಲಕಿಯು ಆರೊಗ್ಯವಂತೆಯಾಗಬೇಕಾದರೆ ನಮ್ಮೆಲ್ಲರ ಸಹಾಯ ತುಂಬಾನೆ ಅಗತ್ಯವಾಗಿದೆ. ತಂದೆಯ ಪ್ರೀತಿಯನ್ನೂ ಕಳೆದುಕೊಂಡಿರುವ ಈ ಬಾಲಕಿಗೆ ಇದೀಗ ಆಧಾರ ಸ್ತಂಭ ತಾಯಿ ಮತ್ತು ಇಳಿ ವಯಸ್ಸಿನ ಸಹೋದರ. ನಾವೆಲ್ಲರು ಆ ಪುಟ್ಟ ಬಾಲಕಿಗೆ ನೆರವಾಗೋಣ. ಜೀವನದಲ್ಲಿ ಒಂದಿಷ್ಟು ಉತ್ತಮ ಕಾರ್ಯಮಾಡುವುದಕ್ಕೆ ಸಹಾಯವಾಗೋಣ.

ಸಹಾಯಕ್ಕಾಗಿ:

Name: VARSHINI
Bank name: bank of Baroda
Branch: Vitla
Ac.no: 83730100015510
Ifsc code: BARBOVJVITL(0=ZERO)

Related post

Leave a Reply

Your email address will not be published. Required fields are marked *

error: Content is protected !!