ವಿಟ್ಲ: ಕಲಾತಪಸ್ವಿ ಸಾಂಸ್ಕೃತಿಕ ತಂಡ’ದ ಪ್ರಥಮ ವರ್ಷದ ಸಂಭ್ರಮಾಚರಣೆ
ಕಂಬಳಬೆಟ್ಟು: ಸದಾ ಒಂದಲ್ಲ ಒಂದು ಕಾರ್ಯಚಟುವಟಿಕೆಯ ಮೂಲಕ ಅದೆಷ್ಟೋ ಕಲಾಭಿಮಾನಿಗಳ ಮನದಲ್ಲಿ ನೆಲೆಯನ್ನು ಕಂಡುಕೊಂಡ ‘ಕಲಾತಪಸ್ವಿ ಸಾಂಸ್ಕೃತಿಕ ತಂಡ’ದ ಪ್ರಥಮ ವರ್ಷದ ಸಂಭ್ರಮಾಚರಣೆಯು ಸಮಾಜ ಮಂದಿರ ಧರ್ಮನಗರ-ಕಂಬಳಬೆಟ್ಟು ವಿನಲ್ಲಿ ಜೂ.18 ರಂದು ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮಿತಾ ತಾರಾನಾಥ್ ಬೋಳಿಗದ್ದೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೀ ಕನ್ನಡ ಕಾಮಿಡಿಕಿಲಾಡಿಗಳು ಖ್ಯಾತಿಯ ಅನೀಶ್ ಪೂಜಾರಿ ವೇಣೂರು,ವಿಠಲ ಪದವಿಪೂರ್ವ ಕಾಲೇಜು ವಿಟ್ಲ ಇದರ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲರಾದ ಕಿರಣ್ ಕುಮಾರ್ ಬ್ರಹ್ಮಾವರ,ಹಾಡುಗಾರರು ಮತ್ತು ನಿರೂಪಕರಾದ ರಕ್ಷಣ್ ಮಡೂರು ಮತ್ತು ಸಂತೋಷ್ ಬೆಂಕ್ಯ,ರಂಗಭೂಮಿ ಕಲಾವಿದರಾದ ಮನೀಶ್ ಶೆಟ್ಟಿ ಸಿದ್ಧಕಟ್ಟೆ ಇವರು ಭಾಗವಹಿಸಿ ತಂಡಕ್ಕೆ ಶುಭಾಹಾರೈಕೆಯ ಮಾತುಗಳನ್ನಾಡಿದರು. ತದನಂತರ ಲಕ್ಕಿಡಿಪ್ ಅದೃಷ್ಟವಂತರ ಆಯ್ಕೆಯನ್ನು ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಸಾನ್ವಿ ಕನ್ಸ್ಟ್ರಕ್ಷನ್ ಇದರ ಮಾಲಕರಾದ ತಾರನಾಥ್ ಬೋಳಿಗದ್ದೆ ಇವರನ್ನು ಸನ್ಮಾನಿಸಲಾಯಿತು.
ಮುಂದಕ್ಕೆ ಕಲಾಯಶಸ್ವಿ-2 ನಾಮಾಂಕಿತ ವಿವಿಧ ಆನ್ಲೈನ್ ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.
ಕಲಾತಪಸ್ವಿ ಸಾಂಸ್ಕೃತಿಕ ತಂಡದ ಪ್ರಥಮ ಸಂಭ್ರಮಾಚರಣೆಯ ಪ್ರಯುಕ್ತ ನಡೆಸಿದ ಅದೃಷ್ಟ ಚೀಟಿಯ ಫಲಿತಾಂಶ ಇಲ್ಲಿದೆ.
ಪ್ರಥಮ:00883(ಅನ್ವಿ ಕಂಬಳಬೆಟ್ಟು)
ದ್ವಿತೀಯ:00443(ವರುಣ್ ಎಂ.ಎಸ್)
ತೃತೀಯ:00158(ದಿವಾಕರ ಭಂಡಾರಿ)