ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು 18ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ದಶಂಬರ 17 ರಂದು ವಾಣಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜರಗಲಿದ್ದು, ಇದರ ಪೂರ್ವ ತಯಾರಿ ಸಭೆಯು ಪರಿಷತ್ತಿನ ಅಧ್ಯಕ್ಷ ಡಿ ಯದುಪತಿ ಗೌಡರ ಅಧ್ಯಕ್ಷತೆಯಲ್ಲಿ ವಾಣಿ ಕಾಲೇಜಿನಲ್ಲಿ ಜರಗಿತು. ಸಭೆಯಲ್ಲಿ ಸಮ್ಮೇಳನದ ಸಂಯೋಜನ ಸಮಿತಿಯ ಅಧ್ಯಕ್ಷರಾಗಿ ಬೆಳ್ತಂಗಡಿ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಜಯಾನಂದ ಗೌಡ ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಯುವ ಉದ್ಯಮಿ ಸುವರ್ಣ ಆರ್ಕೆಡೆಯ ಸಂಪತ್ ಸುವರ್ಣ, ಕೋಶಾಧ್ಯಕ್ಷರಾಗಿ ಮೀನಾಕ್ಷಿ ಎನ್ ಗುರುವಾಯನಕೆರೆ, ಪ್ರಧಾನ […]
ಮಾಚಾರು: ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ಇವರ ವತಿಯಿಂದ ನ.21 ರಂದು ನಡೆದ 14 ವರ್ಷದ ವಯೋಮಿತಿಯ ಬಾಲಕಿಯರ ಫುಟ್ಬಾಲ್ ಪಂದ್ಯಾಟದಲ್ಲಿ ಮೈಸೂರು ವಿಭಾಗವು ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಈ ತಂಡದಲ್ಲಿ ಉಜಿರೆ ಮಾಚಾರು ನಿವಾಸಿ ಕು.ದೀಪಿಕಾ ವಿ.ಬಿ ಇವರು ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ಇವರು ಉಜಿರೆಯ ಮಾಚಾರಿನ ಭಾರತಿ ವಿನಯಚಂದ್ರ ನಾಯ್ಕ ಇವರ ಪುತ್ರಿ. ಜನವರಿ ತಿಂಗಳಿನಲ್ಲಿ ಜಾರ್ಖಾಂಡ್ ನಲ್ಲಿ ನಡೆಯುವ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕ ರಾಜ್ಯದ ತಂಡಕ್ಕೆ ಪ್ರತಿನಿಧಿಸಲಿದ್ದಾರೆ.Read More
ಬೆಳ್ತಂಗಡಿ; ಸ್ಯಾಕ್ಸೋಫೋನ್ ವಾದನ ಕ್ಷೇತ್ರದಲ್ಲಿ ರಾಜ್ಯದ ಅತ್ಯುನ್ನತ ಕಲಾವಿದ, ಆಕಾಶವಾಣಿ ಮತ್ತು ದೂರದರ್ಶನದ ಎ ಗ್ರೇಡ್ ಕಲಾವಿದರೂ ಆಗಿರುವ ಧರ್ಮಸ್ಥಳ ಬಿ ಪ್ರಕಾಶ ದೇವಾಡಿಗರಿಗೆ ಅಮೇರಿಕಾದ ಪುತ್ತಿಗೆ ಮಠದಲ್ಲಿ “ಕೃಷ್ಣಾನುಗ್ರಹ ಪತ್ರ” ಮನ್ನಣೆ ದೊರೆತಿದೆ. ಅಮೇರಿಕಾದ ಫಿನಿಕ್ಸ್ನ ಪುತ್ತಿಗೆ ಮಠದ ಪೀಠಾದಿಪತಿಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅವರ ಮೂರನೇ ಬಾರಿಯ ಅಮೇರಿಕಾ ಕಲಾ ಪ್ರವಾಸದ ವೇಳೆ ನೀಡಿದ ಕಲಾ ಸೇವೆಯನ್ನು ಗೌರವಿಸಿ ಈ ಪುರಸ್ಕಾರ ಪತ್ರ ನೀಡಿ ಅಭಿನಂದಿಸಿದರು. ಅಮೆರಿಕಾದ ಅರಿಝೇನಾ ಎಂಬಲ್ಲಿರುವ ಸುಜ್ಞಾನ […]Read More
ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಕಾಲೇಜು ಹಾಗೂ ಟೈಮ್ಸ್ ಪದವಿ ಪೂರ್ವ ಕಾಲೇಜು ಹಾಸನ ಇವರ ಜಂಟಿ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಬಾಲಕರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಉಜಿರೆ ತಂಡ ಚಾಂಪಿಯನ್ ಪಟ್ಟವನ್ನು ಪಡೆದು ಹರಿಯಾಣದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ಸುಭಾಷ್,ಪ್ರತೀಕ್ ಶೆಟ್ಟಿ ,ವಿಕಾಸ್, ಕುಮಾರ್ ಗೌಡ, ಸೂಫಿಯನ್,ಆಫ್ರಿದಿ ಎಸ್ ಡಿ ಎಂ ಉಜಿರೆ.ಚಿನ್ಮಯಿ, ಆಕಾಶ್,ರಾಕೇಶ್.ಆಳ್ವಾಸ್ ಕಾಲೇಜು […]Read More
ಸ್ಪೇಸ್ ಮೀಡಿಯ, ಅದನಿ ಗ್ರೂಪ್ ಆಫ್ ಕಂಪೆನಿ ಅರ್ಪಿಸುವ ಗಾಂಧಿ ಸ್ಮೃತಿ , ನಮ್ಮ ನಡೆ ಗಾಂಧಿ ತತ್ವದೆಡೆ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರ ಘನ ಉಪಸ್ಥಿತಿಯಲ್ಲಿಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಮಾರುಕಟ್ಟೆ ವಿಭಾಗದ ಮುಖ್ಯಸ್ಥರು ಪದ್ಮನಾಭ್ ಶೆಟ್ಟಿಯವರಿಗೆಮಹಾತ್ಮಗಾಂಧಿ ಸದ್ಭಾವನ ಅಂತರಾಷ್ಟ್ರೀಯ ಪ್ರಶಸ್ತಿ 2023 ಮಹಾದೇವ ದೇಸಾಯಿ ಆಡಿಟೋರಿಯಂ ಗಾಂಧಿನಗರದಲ್ಲಿ ನ.6 ರಂದು ಪ್ರಶಸ್ತಿ ಪ್ರದಾನ ಮಾಡಲಾಯಿತು.Read More
ಸ್ಪೇಸ್ ಮೀಡಿಯ, ಅದನಿ ಗ್ರೂಪ್ ಆಫ್ ಕಂಪೆನಿ ಅರ್ಪಿಸುವ ಗಾಂಧಿ ಸ್ಮೃತಿ , ನಮ್ಮ ನಡೆ ಗಾಂಧಿ ತತ್ವದೆಡೆ ಕಾರ್ಯಕ್ರಮದಲ್ಲಿ ಉಜಿರೆ ಬದುಕುಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ರವರು ಮಹಾತ್ಮಗಾಂಧಿ ಸದ್ಭಾವನ ಅಂತರಾಷ್ಟ್ರೀಯ ಪ್ರಶಸ್ತಿ 2023 ಬೆಂಗಳೂರು ಗಾಂಧಿ ಭವನದಲ್ಲಿ ನ.6 ರಂದು ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಸರ್ಕಾರದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.Read More
ಪ್ರಶಸ್ತಿಯ ಮೌಲ್ಯ ವೃದ್ಧಿಯಾಗುವುದು ಅರ್ಹವಾದ ಸಂಸ್ಥೆಗೋ , ಅಥವಾ ವ್ಯಕ್ತಿಗೋ ಪ್ರಶಸ್ತಿ ಪ್ರಧಾನವಾದಾಗ.ಪ್ರಪಂಚದ ಸರ್ವ ಮಾನ್ಯತೆಗೆ ಅಂಗೀಕಾರವಾಗುವ ಮತ್ತು ತನ್ನ ವಿಶೇಷತೆಗಳಿಂದ ರಂಗಕಲೆಗಳಲ್ಲಿ ಸರ್ವಶ್ರೇಷ್ಠವಾಗಿರುವ ಸಾಂಸ್ಕೃತಿಕವಾಗಿ ಯಕ್ಷಗಾನ ಕ್ಷೇತ್ರದಲ್ಲಿನ ಅದ್ವಿತೀಯ ಸಾಧನೆಗಾಗಿ ಅರ್ಹವಾಗಿಯೇ ದಕ್ಷಿಣಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 2023 ನ್ನು ಕುರಿಯ ಪ್ರತಿಷ್ಠಾನ ತನ್ನ ಮುಡಿಗೇರಿಸಿಕೊಂಡಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ರಾಜಶ್ರೀ ಡಾ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದ ಕುರಿಯ ಪ್ರತಿಷ್ಠಾನ ತಿಟ್ಟಿನ ಭೇದವಿಲ್ಲದೆ , ಅಂಗೀಕರಿಸಲ್ಪಟ್ಟ ಕುರಿಯ ವಿಠಲ ಶಾಸ್ತ್ರಿಗಳ ಹೆಸರಿನಲ್ಲಿ ಕಲಾ ಸೇವೆಯನ್ನು ಮಾಡುತ್ತಿರುವ […]Read More
ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡಲಾಗುವ 2023ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಕ್ರೀಡಾ ಕ್ಷೇತ್ರದಲ್ಲಿ ವಾಲಿಬಾಲ್ ಕ್ರೀಡಾಪಟು ಭಾರತ ತಂಡದ ಆಟಗಾರ ಅಶ್ವಲ್ ರೈ ಬೆಳ್ತಂಗಡಿ ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೀರ್ತಿಗೆ ಪಾತ್ರರಾಗಿದ್ದಾರೆ. ಯುವ ಆಟಗಾರ ಅಶ್ವಲ್ ರೈ ಭಾರತ ತಂಡವನ್ನು ಪ್ರತಿನಿಧಿಸುವ ನಂಬರ್ ವನ್ ಪ್ಲೇಯರ್.2023 ಸಪ್ಟೆಂಬರ್ ಚೀನಾದಲ್ಲಿ ನಡೆದ ಎಷ್ಯಾನ್ ಗೇಮ್ಸ್ ನಲ್ಲಿ ಭಾರತದ ಪುರಷರ ವಾಲಿಬಾಲ್ ತಂಡವನ್ನು ಪ್ರತಿನಿಧಿಸಿ ಅಧ್ಬುತವಾದ ಸಾಧನೆಯನ್ನು ಮಾಡಿದರು. 2021 ಸೆಪ್ಟೆಂಬರ್ನಲ್ಲಿ ಜಪಾನ್ನ ಟೋಕಿಯೋದಲ್ಲಿ […]Read More
ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ, ವಾಣಿ ಕಾಲೇಜಿನ ಉಪನ್ಯಾಸಕ ಶಂಕರ್ ರಾವ್ ಜೆಸಿಐ ಪುತ್ತೂರು ಅಥಿತ್ಯದಲ್ಲಿ ನಡೆದ ವಲಯ ಸಮ್ಮೇಳನದಲ್ಲಿ 2024ನೇ ಸಾಲಿನ ವಲಯ ಉಪಾಧ್ಯಕ್ಷರಾಗಿ ಆಯ್ಕೆಯಾದರು. 482 ಮತಗಳ ಪಡೆಯುವ ಮುಖಂತರ ವಲಯ ಉಪಾಧ್ಯಕ್ಷರ ಚುನಾವಣೆಯಲ್ಲಿ ವಿಜೇತರಾಗಿ ಬೆಳ್ತಂಗಡಿ ಜೆಸಿಐ ಘಟಕಕ್ಕೆ ಗೌರವ ತಂದು ಕೊಟ್ಟರು. ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದ ಆಧ್ಯಕ್ಷರಾಗಿ ಹಲವಾರು ಸಮಾಜಮುಖಿ ,ಗುರುತರ ಕೆಲಸ ಕಾರ್ಯಗಳನ್ನು ಮಾಡಿ ವಲಯದಲ್ಲಿ ಅತ್ಯುತ್ತಮ ಘಟಕಾಧ್ಯಕ್ಷ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರನ್ನು […]Read More