• September 13, 2024

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೀರ್ತಿಗೆ ಪಾತ್ರರಾದ ವಾಲಿಬಾಲ್ ಕ್ರೀಡಾಪಟು ಭಾರತ ತಂಡದ ಆಟಗಾರ ಅಶ್ವಲ್ ರೈ ಬೆಳ್ತಂಗಡಿ

 ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೀರ್ತಿಗೆ ಪಾತ್ರರಾದ ವಾಲಿಬಾಲ್ ಕ್ರೀಡಾಪಟು ಭಾರತ ತಂಡದ ಆಟಗಾರ ಅಶ್ವಲ್ ರೈ ಬೆಳ್ತಂಗಡಿ

ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡಲಾಗುವ 2023ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಕ್ರೀಡಾ ಕ್ಷೇತ್ರದಲ್ಲಿ ವಾಲಿಬಾಲ್ ಕ್ರೀಡಾಪಟು ಭಾರತ ತಂಡದ ಆಟಗಾರ ಅಶ್ವಲ್ ರೈ ಬೆಳ್ತಂಗಡಿ ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೀರ್ತಿಗೆ ಪಾತ್ರರಾಗಿದ್ದಾರೆ.


ಯುವ ಆಟಗಾರ ಅಶ್ವಲ್ ರೈ ಭಾರತ ತಂಡವನ್ನು ಪ್ರತಿನಿಧಿಸುವ ನಂಬರ್ ವನ್ ಪ್ಲೇಯರ್.
2023 ಸಪ್ಟೆಂಬರ್ ಚೀನಾದಲ್ಲಿ ನಡೆದ ಎಷ್ಯಾನ್ ಗೇಮ್ಸ್ ನಲ್ಲಿ ಭಾರತದ ಪುರಷರ ವಾಲಿಬಾಲ್ ತಂಡವನ್ನು ಪ್ರತಿನಿಧಿಸಿ ಅಧ್ಬುತವಾದ ಸಾಧನೆಯನ್ನು ಮಾಡಿದರು.

2021 ಸೆಪ್ಟೆಂಬರ್ನಲ್ಲಿ ಜಪಾನ್ನ ಟೋಕಿಯೋದಲ್ಲಿ ನಡೆದ ಏಷಿಯನ್ ಗೇಮ್ಸ್ ಚಾಂಪಿಯನ್ಶಿಪ್ನಲ್ಲಿ ಪುರುಷರ ವಿಭಾಗದ ವಾಲಿಬಾಲ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದರು.


ದೇಶದಲ್ಲಿ IPL ಮಾದರಿಯಲ್ಲಿ ನಡೆಯುವ ಜನಪ್ರಿಯ ವಾಲಿಬಾಲ್ ಲೀಗ್ ಪ್ರೈಮ್ ವಾಲಿಬಾಲ್ ಲೀಗ್ ಪಂದ್ಯದಲ್ಲಿ ಕೊಲ್ಕತ್ತ ತಂಡರ್ ಬೋಲ್ಟ್ ತಂಡದ ನಾಯಕನಾಗಿ ಒಂದು ಬಾರಿ ಚಾಂಪಿಯನ್.. 2022 ರನ್ನರ್ ಅಫ್ ಪ್ರಶಸ್ತಿ ಪಡೆಯಲು ಅಶ್ವಲ್ ಚಾಣಾಕ್ಷತನದ ಆಟವೇ ಪ್ರಮುಖವಾಗಿತ್ತು.

ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರವು 2020 – 2021 ಸಾಲಿನ ಏಕಲವ್ಯ ಪ್ರಶಸ್ತಿಯನ್ನೂ ನೀಡಿ ಗೌರವಿಸಿತು. ಏಷ್ಯಾದ ಬೆಸ್ಟ್ ಬ್ಲಾಕರ್ ಎಂದೇ ಪ್ರಖ್ಯಾತಿ ಪಡೆದಿರುವ ಅಶ್ವಲ್ ರೈ, ಮೂಲತಃ ಬೆಳ್ತಂಗಡಿಯವರು. ತಂದೆ ಸಂಜೀವ ರೈ ಮತ್ತು ತಾಯಿ ವಾಣಿ ಎಸ್ ರೈ ಇವರ ಮಗ. ಸದ್ಯ ಸೌತ್ ವೆಸ್ಟರ್ನ್ ರೈಲ್ವೆ ಇಲಾಖೆಯಲ್ಲಿ ವೃತ್ತಿ ಸಲ್ಲಿಸುತ್ತಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!