• September 12, 2024

ಜೆಸಿಐ ಭಾರತದ ವಲಯ 15ರ ಉಪಾಧ್ಯಕ್ಷರಾಗಿ ಬೆಳ್ತಂಗಡಿ ಘಟಕಾಧ್ಯಕ್ಷ, ವಾಣಿ ಕಾಲೇಜಿನ ಉಪನ್ಯಾಸಕ ಶಂಕರ್ ರಾವ್ ಆಯ್ಕೆ

 ಜೆಸಿಐ ಭಾರತದ ವಲಯ 15ರ ಉಪಾಧ್ಯಕ್ಷರಾಗಿ ಬೆಳ್ತಂಗಡಿ ಘಟಕಾಧ್ಯಕ್ಷ, ವಾಣಿ ಕಾಲೇಜಿನ ಉಪನ್ಯಾಸಕ ಶಂಕರ್ ರಾವ್ ಆಯ್ಕೆ

ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ, ವಾಣಿ ಕಾಲೇಜಿನ ಉಪನ್ಯಾಸಕ ಶಂಕರ್ ರಾವ್ ಜೆಸಿಐ ಪುತ್ತೂರು ಅಥಿತ್ಯದಲ್ಲಿ ನಡೆದ ವಲಯ ಸಮ್ಮೇಳನದಲ್ಲಿ 2024ನೇ ಸಾಲಿನ ವಲಯ ಉಪಾಧ್ಯಕ್ಷರಾಗಿ ಆಯ್ಕೆಯಾದರು.

482 ಮತಗಳ ಪಡೆಯುವ ಮುಖಂತರ ವಲಯ ಉಪಾಧ್ಯಕ್ಷರ ಚುನಾವಣೆಯಲ್ಲಿ ವಿಜೇತರಾಗಿ ಬೆಳ್ತಂಗಡಿ ಜೆಸಿಐ ಘಟಕಕ್ಕೆ ಗೌರವ ತಂದು ಕೊಟ್ಟರು.

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದ ಆಧ್ಯಕ್ಷರಾಗಿ ಹಲವಾರು ಸಮಾಜಮುಖಿ ,ಗುರುತರ ಕೆಲಸ ಕಾರ್ಯಗಳನ್ನು ಮಾಡಿ ವಲಯದಲ್ಲಿ ಅತ್ಯುತ್ತಮ ಘಟಕಾಧ್ಯಕ್ಷ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಇವರನ್ನು ಘಟಕದ ಪೂರ್ವಧ್ಯಕ್ಷರುಗಳು, ಸದಸ್ಯರುಗಳು ಅಭಿನಂದಿಸಿದರು.

Related post

Leave a Reply

Your email address will not be published. Required fields are marked *

error: Content is protected !!