• June 24, 2024

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ” ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ಕಾರ್ಯಕ್ರಮ

 ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ” ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ಕಾರ್ಯಕ್ರಮ

ಜೆಸಿಐ ಭಾರತದ ವಲಯ 15 ಹಮ್ಮಿಕೊಂಡಿರುವ ವಿನೂತನ ಕಾರ್ಯಕ್ರಮವಾದ
“ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ನ ವಿಭಾಗದಲ್ಲಿ

ಜನ ಸೇವೆಯೇ ಜನಾರ್ಧನ ಸೇವೆ ಎಂಬುದನ್ನ ಅರಿತು ಜನರ ಕಷ್ಟಗಳಿಗೆ, ಊರಿನ‌ ಬೆಳವಣಿಗೆಗೆ ಸದಾ ಸ್ಪಂದಿಸುತ್ತ, ಊರಿನ ಜನರ ಅಪಾರ ಪ್ರೀತಿಗೆ ಪಾತ್ರರಾಗಿರುವ ಸರ್ವೋದಯ ಪ್ರೆಂಡ್ಸ್ ಅಟ್ಲಾಜೆಯ ಅಧ್ಯಕ್ಷರು , ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕ್ಕೊಂಡು ಪ್ರಸ್ತುತ ಗ್ರಾಮ ಪಂಚಾಯತ್ ಬಳಂಜದ ಉಪಾಧ್ಯಕ್ಷರಾಗಿರುವ ಶ್ರೀ ಯಶೋಧರ ಶೆಟ್ಟಿ ಯವರನ್ನು ಜೆಸಿಐ ಭವನದಲ್ಲಿ ಗೌರವಿಸಲಾಯಿತು.

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಉಪಾಧ್ಯಕ್ಷರಾಗಿರುವ ಪ್ರೀತಮ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು.

ವೇದಿಕೆಯಲ್ಲಿ ಮಾತೃಶ್ರೀ ಟೆಕ್ಸ್ ಟೈಲ್ಸ್ ಅಂಡ್ ರೆಡಿಮೇಡ್ ನ ಮಾಲಕರಾಗಿರುವ ಶ್ರೀ ಮೋಹನ್ ಸುವರ್ಣ ಹಾಗೂ ವಲಯ 15 ರ ಉಪಾಧ್ಯಕ್ಷರಾದ ಶಂಕರ್ ರಾವ್ ಅತಿಥಿಯಾಗಿ ಭಾಗವಹಿಸಿದರು.

ವೇದಿಕೆಯಲ್ಲಿ ಜೆಸಿಐ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ರಂಜಿತ್ ಎಚ್ ಡಿ ಬಳಂಜ, ಮಹಿಳಾ ಘಟಕದ ಸಂಯೋಜಕರಾದ ಶೃತಿ ರಂಜಿತ್, ಜೆಜೆಸಿ ಅಧ್ಯಕ್ಷರಾದ ಸಮನ್ವತ್ ಕುಮಾರ್ ಉಪಸ್ಥಿತರಿದ್ದರು.


ಸನ್ಮಾನ ಪತ್ರವನ್ನು ಕಾರ್ಯಕ್ರಮದ ಸಂಯೋಜಕರಾದ ರಕ್ಷಿತಾ ಶೆಟ್ಟಿ ವಾಚಿಸಿದರು. ಕಾರ್ಯದರ್ಶಿ ಅನುದೀಪ್ ಜೈನ್ ಧನ್ಯವಾದ ಸಲ್ಲಿಸಿದರು.


ವೇದಿಕೆ ಆಹ್ವಾನವನ್ನು ಪೂರ್ವ ಅಧ್ಯಕ್ಷರಾದ ಕಿರಣ್ ಕುಮಾರ್ ಶೆಟ್ಟಿ, ಜೆಸಿ ವಾಣಿಯನ್ನು ಶಿವಾನಿ ಉದ್ಘೋಷಿಸಿದರು.

ಕಾರ್ಯಕ್ರಮದಲ್ಲಿ ನಮ್ಮ ಘಟಕದ ಪೂರ್ವಧ್ಯಕ್ಷರುಗಳಾದ ಜೆಸಿ ತುಕಾರಾಮ್, ನಾರಾಯಣ ಶೆಟ್ಟಿ, ಚಿದಾನಂದ ಇಡ್ಯಾ, ಸಂತೋಷ ಪಿ ಕೋಟ್ಯಾನ್, ಪ್ರಸಾದ್ ಬಿ ಸ್, ಉಪಾಧ್ಯಕ್ಷರಾದ ಶೈಲೇಶ್, ಸದಸ್ಯರಾದ ಜಿತೇಶ್, ರತ್ನಕರ ಹಾಗೂ ಜೆಜೆಸಿ ಸದಸ್ಯರು ಭಾಗವಹಿಸಿದರು.

Related post

Leave a Reply

Your email address will not be published. Required fields are marked *

error: Content is protected !!