• September 13, 2024

ಸೆಕ್ಯುಲರಿಸಮ್ ಹೆಸರಲ್ಲಿ ಹಮಾಸನ ಸಮರ್ಥನೆ’ ಈ ಕುರಿತು ವಿಶೇಷ ಸಂವಾದ !ಇಸ್ರೇಲ್ ಮೇಲಿನ ದಾಳಿಯಿಂದ ಪಾಠ ಕಲಿತು ಭಾರತವು ರಾಷ್ಟ್ರೀಯ ಸುರಕ್ಷೆಯ ದೃಷ್ಟಿಯಿಂದ ಮಾರ್ಗಕ್ರಮಣ ಮಾಡುವುದು ಆವಶ್ಯಕ ! – ಬ್ರಿಗೇಡಿಯರ್ ಹೇಮಂತ ಮಹಾಜನ್

 ಸೆಕ್ಯುಲರಿಸಮ್ ಹೆಸರಲ್ಲಿ ಹಮಾಸನ ಸಮರ್ಥನೆ’ ಈ ಕುರಿತು ವಿಶೇಷ ಸಂವಾದ !ಇಸ್ರೇಲ್ ಮೇಲಿನ ದಾಳಿಯಿಂದ ಪಾಠ ಕಲಿತು ಭಾರತವು ರಾಷ್ಟ್ರೀಯ ಸುರಕ್ಷೆಯ ದೃಷ್ಟಿಯಿಂದ ಮಾರ್ಗಕ್ರಮಣ ಮಾಡುವುದು ಆವಶ್ಯಕ ! – ಬ್ರಿಗೇಡಿಯರ್ ಹೇಮಂತ ಮಹಾಜನ್

ಭಾರತವು ರಷ್ಯಾ ಉಕ್ರೇನ್ ಯುದ್ಧದ ಕರೆಗೆ ರಾಜತಾಂತ್ರಿಕತೆ ಉಪಯೋಗಿಸಿ ಸಂಧಿ ಮಾಡಿಕೊಳ್ಳಲು ರೂಪಾಂತರಗೊಳಿಸಿತು. ಅದೇ ರೀತಿ ಈಗ ಇಸ್ರೇಲ್ ಮೇಲೆ ಹಮಾಸ ನಿಂದ ನಡೆದಿರುವ ದಾಳಿಯಿಂದ ಪಾಠ ಕಲಿತು ಭಾರತವು ರಾಷ್ಟ್ರೀಯ ಸುರಕ್ಷೆಯ ದೃಷ್ಟಿಯಿಂದ ನಿರ್ಣಯ ತೆಗೆದುಕೊಳ್ಳುವುದು ಅವಶ್ಯಕವಾಗಿದೆ, ಎಂದು ಯುದ್ಧ ಸೇವಾ ಮೆಡಲ್ ಪಡೆದಿರುವ ಬ್ರಿಗೇಡಿಯರ್ ಹೇಮಂತ ಮಹಾಜನ ಇವರು ಪ್ರತಿಪಾದಿಸಿದರು.

ಅವರು ಹಿಂದೂ ಜನಜಾಗೃತಿ ಸಮಿತಿಯಿಂದ ಆಯೋಜಿಸಿದ್ದ ಸೆಕ್ಯುಲರಿಸಂ ಹೆಸರಿನಲ್ಲಿ ಹಮಾಸನ ಸಮರ್ಥನೆ ಈ ವಿಷಯದ ಕುರಿತು ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

ಈ ಸಮಯದಲ್ಲಿ ಬ್ರಿಗೇಡಿಯರ ಹೇಮಂತ ಮಹಾಜನ ಮಾತು ಮುಂದುವರಿಸಿ, 7/10 ರಲ್ಲಿ ಹಮಾಸ ಭಯೋತ್ಪಾದಕ ಸಂಘಟನೆಯು ಇಸ್ರೇಲ್ ಮೇಲೆ ದಾಳಿ ನಡೆಸುವುದೆಂದರೆ ವಿಶ್ವಪ್ರಸಿದ್ಧ ಗುಪ್ತಚರ ಸಂಸ್ಥೆಯಾದ ‘ಮೊಸಾದ’ನ ವಿಫಲತೆಯಾಗಿದೆ. ಇಸ್ರೇಲ್ ಗುಪ್ತಚರ ಕ್ಷೇತ್ರದಲ್ಲಿ ತಂತ್ರಜ್ಞಾನದ ಮೇಲೆ ಹೆಚ್ಚು ಒತ್ತು ನೀಡಿತು ಮತ್ತು ಮಾನವೀಯ ಗುಪ್ತಚರ ಕ್ಷೇತ್ರದ ಕಡೆಗೆ ದುರ್ಲಕ್ಷ ಮಾಡಲಾಗಿತ್ತು. ಗಾಝಾ ಪಟ್ಟಿಯಿಂದ ಇಸ್ರೇಲ್ ನಲ್ಲಿ ಪ್ರತಿದಿನ ಕೆಲಸಕ್ಕಾಗಿ ಬರುವ 15 ರಿಂದ 20 ಸಾವಿರ ಜನರು 2 ರಿಂದ 3 ವರ್ಷ ಹಮಾಸಗಾಗಿ ಗುಪ್ತಚರ ಕೆಲಸ ಮಾಡುತ್ತಿದ್ದರು.

ಇಸ್ರೇಲ್ ಯುದ್ಧಕ್ಕಾಗಿ ಸಿದ್ಧ ಇಲ್ಲದಿರುವುದು ಗಮನಕ್ಕೆ ಬಂದ ನಂತರ ಅವರ ಮೇಲೆ ಹಮಾಸ್ ಆಕ್ರಮಣ ಮಾಡಿತು. ಇಸ್ರೇಲಿನ ಉನ್ನತ ತಂತ್ರಜ್ಞಾನ ಆಧಾರಿತ ‘ಆರ್ಯನ್ ಡೋಮ್’ ವ್ಯವಸ್ಥೆಯನ್ನು ಹಮಾಸನ ಅಲ್ಪ ತಂತ್ರಜ್ಞಾನವು ಸೋಲಿಸಿತು. ಇಸ್ರೇಲ್ ನಾಗರೀಕರಣ ಆದನಂತರ ಅಲ್ಲಿಯ ನಾಗರೀಕರ ಹೋರಾಟದ ಕ್ಷಮತೆ ಕಡಿಮೆ ಆಗಿದೆ. ಇಸ್ರೇಲ್ ತನ್ನ ಶತ್ರುವನ್ನು ತುಚ್ಚವಾಗಿ ಪರಿಗಣಿಸಿತು, ಶತ್ರುವಿನ ಉದ್ದೇಶ ಅರ್ಥ ಮಾಡಿಕೊಳ್ಳದಿರುವುದು, ಹಾಗೂ ಇಸ್ರೇಲ್ ನಲ್ಲಿನ ಜನರು ಪರಸ್ಪರ ಹೋರಾಡುತ್ತಿದ್ದರು. ಇಸ್ರೇಲಿನ ಈ ಎಲ್ಲಾ ತಪ್ಪಿನಿಂದ ಭಾರತಕ್ಕೆ ಬಹಳಷ್ಟು ಕಲಿಯಲು ಸಿಕ್ಕಿತು. ಭಾರತೀಯರಲ್ಲಿ ರಾಷ್ಟ್ರಭಕ್ತಿ ನಿರ್ಮಾಣ ಮಾಡುವುದು ಮತ್ತು ಸ್ವಾ. ಸಾವರ್ಕರ್ ಇವರು ಕಲಿಸಿರುವ ಪ್ರಕಾರ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಜನರಲ್ಲಿ ಸಿದ್ಧತೆ ನಿರ್ಮಾಣ ಮಾಡಬೇಕು.
ಈ ಸಮಯದಲ್ಲಿ ಸೈನ್ಯದಳದಿಂದ ಸೇವಾ ನಿವೃತ್ತ ಮೇಜರ್ ಸರಸ ತ್ರಿಪಾಠಿ ಇವರು ಭಾರತಕ್ಕೆ ಪಾಕಿಸ್ತಾನ, ಚೀನಾ ಈ ವಿದೇಶಿ ಶತ್ರುಗಳ ಜೊತೆಗೆ ದೇಶದಲ್ಲಿನ ಅಂತರಿಕ ಕಾರ್ಯನಿರತ ಇರುವ ನಕ್ಸಲ್ ವಾದಿ, ಪಾಕಿಸ್ತಾನ ಸಮರ್ಥಕ, ಭಯೋತ್ಪಾದಕರು ಮುಂತಾದ ದೇಶ ವಿರೋಧಿ ಶಕ್ತಿಯ ವಿರುದ್ಧ ಹೋರಾಡಬೇಕು. ಈ ಜಗತ್ತು ಮುತ್ಸದ್ದಿತನದ (ಡಿಪ್ಲೋಮೆಸಿ) ಮೇಲೆ ನಡೆಯುತ್ತದೆ. ಯಾರ ವರ್ತನೆ ಹೇಗೆ ಇರುತ್ತದೆ, ಅದೇ ರೀತಿ ಅವರ ಜೊತೆಗೆ ವರ್ತಿಸಬೇಕಾಗುತ್ತದೆ. ಯಾರು ಭಾರತವನ್ನು ಎರಡು ಭಾಗವಾಗಿ ವಿಂಗಡಿಸಿದರು, ಅವರಿಗೆ ಭಾರತದಲ್ಲಿ ಇಂದು ವಿಶೇಷ ಅಧಿಕಾರ ನೀಡಲಾಗಿದೆ. ಇದಕ್ಕಾಗಿ ದೇಶದಲ್ಲಿನ ಕೆಲವು ಕಾನೂನು ಬದಲಾಯಿಸಬೇಕು. ಒಳ್ಳೆಯ ಕಾನೂನು ರೂಪಿಸಬೇಕು. ಹಿಂದೂ ಧರ್ಮ ಮಾನವತಾವಾದಿಯಾಗಿದೆ; ಆದರೆ ಭಯೋತ್ಪಾದಕರ ಸಮರ್ಥನೆ ಮಾಡಲು ಸಾಧ್ಯವಿಲ್ಲ. ಹಮಾಸ್ ಇದು ಒಂದು ರಾಕ್ಷಸಿ ಸಂಘಟನೆ ಆಗಿದೆ ಮತ್ತು ಇಸ್ರೇಲವು ಅದನ್ನು ಮುಗಿಸಲೇಬೇಕು. ಹಿಂದೂ ದೇವತೆಗಳ ಕೈಯಲ್ಲಿ ಕೂಡ ಶಸ್ತ್ರಾಸ್ತ್ರಗಳು ಇವೆ. ಅದಕ್ಕಾಗಿ ಪ್ರತಿಯೊಬ್ಬ ಹಿಂದೂ ಆತ್ಮ ರಕ್ಷಣೆಗಾಗಿ ಸರಕಾರದ ಮಾನ್ಯತೆ ಪಡೆದು ಶಸ್ತ್ರಗಳನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದರು.

Related post

Leave a Reply

Your email address will not be published. Required fields are marked *

error: Content is protected !!