• July 27, 2024

ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ವತಿಯಿಂದ ನಡೆದ ಫುಟ್ಬಾಲ್ ಪಂದ್ಯಾಟ: ಮಾಚಾರು ನಿವಾಸಿ ಕು.ದೀಪಿಕಾ ವಿ.ಬಿ ಯವರು ರಾಷ್ಟ್ರ ಮಟ್ಟಕ್ಕೆ ಆಯ್ಕೆ

 ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ವತಿಯಿಂದ ನಡೆದ ಫುಟ್ಬಾಲ್ ಪಂದ್ಯಾಟ: ಮಾಚಾರು ನಿವಾಸಿ ಕು.ದೀಪಿಕಾ ವಿ.ಬಿ ಯವರು ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಮಾಚಾರು: ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ಇವರ ವತಿಯಿಂದ ನ.21 ರಂದು ನಡೆದ 14 ವರ್ಷದ ವಯೋಮಿತಿಯ ಬಾಲಕಿಯರ ಫುಟ್ಬಾಲ್ ಪಂದ್ಯಾಟದಲ್ಲಿ ಮೈಸೂರು ವಿಭಾಗವು ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಈ ತಂಡದಲ್ಲಿ ಉಜಿರೆ ಮಾಚಾರು ನಿವಾಸಿ ಕು.ದೀಪಿಕಾ ವಿ.ಬಿ ಇವರು ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.

ಇವರು ಉಜಿರೆಯ ಮಾಚಾರಿನ ಭಾರತಿ ವಿನಯಚಂದ್ರ ನಾಯ್ಕ ಇವರ ಪುತ್ರಿ.

ಜನವರಿ ತಿಂಗಳಿನಲ್ಲಿ ಜಾರ್ಖಾಂಡ್ ನಲ್ಲಿ ನಡೆಯುವ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕ ರಾಜ್ಯದ ತಂಡಕ್ಕೆ ಪ್ರತಿನಿಧಿಸಲಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!