• December 27, 2024
ಸ್ಥಳೀಯ

ಕನ್ಯಾಡಿ:ಜು.13- ಆ.29: ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾರಂಭ

  ಕನ್ಯಾಡಿ: ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ತಮ್ಮ ಆತ್ಮೋನ್ನತಿ ಹಾಗೂ ಲೋಕ ಕಲ್ಯಾನಾರ್ಥವಾಗಿ ಚಾತುರ್ಮಾಸ ವೃತಾರಂಭವು ಜು.13 ರಿಂದ ಪ್ರಾರಂಭಗೊಂಡು ಆ.29 ರವರೆಗೆ ಶ್ರೀ ಗುರುದೇವ ಮಠದಲ್ಲಿ ಶ್ರೀ ಲಕ್ಷ್ಮೀಪತಿ ಗೋಪಾಲಚಾರ್ಯರು ಆಗಮ ಪ್ರವೀಣ ಬೆಂಗಳೂರು ಇವರ ಪೌರೋಹಿತ್ವದಲ್ಲಿ ನಡೆಯಲಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು. ಅವರು ಜು.8 ರಂದು ನಡೆದ 2ನೇ ಸುತ್ತಿನ ಸಭೆಯಲ್ಲಿ ಮಾತನಾಡಿದರು. ಜು.13ರಂದು ಗುರುಪೂರ್ಣಿಮೆಯಂದು ಮೂಲ ಮಠ ಶ್ರೀ […]Read More

General

ಪಡಂಗಡಿ ಬೀಡುವಿನ ಶ್ರೀ ಮಹಾಗಣಪತಿ ದೇವರಿಗೆ ಬೆಳ್ಳಿಯ ಮುಖಕವಚವನ್ನು ಸಮರ್ಪಿಸಿದ ಶಾಸಕ ಹರೀಶ್

  ಪಡಂಗಡಿ: ಪಡಂಗಡಿ ಬೀಡುವಿನ ಶ್ರೀ ಮಹಾಗಣಪತಿ ದೇವರಿಗೆ ಬೆಳ್ಳಿಯ ಮುಖಕವಚವನ್ನು ಶಾಸಕ ಹರೀಶ್ ಪೂಂಜ ಜು.8 ರಂದು ಸಮರ್ಪಿಸಿದರು. ಈ ಸಂದರ್ಭದಲ್ಲಿ ರತನ್ ಕುಮಾರ್ ಬೀಡು, ಶಾಂತಿ ಪ್ರಸಾದ್ ಬೀಡು, ಚಂದ್ರಕಾಂತ್ ಜೈನ್,  ಪುಷ್ಪರಾಜ್ ಜೈನ್, ಸತೀಶ್ ಕುಮಾರ್, ಸಂಪತ್ ಕುಮಾರ್ ಜೈನ್, ಉಮೇಶ್ ಪೂಜಾರಿ   ಸಂತೋಷ್ ಕುಮಾರ್ ಜೈನ್, ಲಾಲ್ ಚಂದ್ರ ಬಂಗ, ವಿನೋದ ಇವರುಗಳು ಉಪಸ್ಥಿತರಿದ್ದರು.Read More

ಸ್ಥಳೀಯ

ಮುಂಬೈ ಮೂಲದ “ವಕ್ರಾಂಗಿ ಏಟಿಎಂ ಕೇಂದ್ರ” ಬಲ್ಯೊಟ್ಟು ಆಶ್ರಮದ ಬಳಿ ಉದ್ಘಾಟನೆ

  ಹೊಸ್ಮಾರು ಈದು – ಕ್ರಾಸ್ ನಲ್ಲಿ ಪ್ರಪ್ರಥಮ ಬಾರಿಗೆ ಅಭಿಜಿತ್ ಜೈನ್ ನಾರಾವಿ ಇವರ ಮಾಲಕತ್ವ ದಲ್ಲಿ ಅತ್ಯಂತ ವಿಶ್ವಾಸಾರ್ಹ ಮತ್ತು ಅತ್ಯುತ್ತಮ ಸೇವೆಯೊಂದಿಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಮುಂಬೈ ಮೂಲದ “ವಕ್ರಾಂಗಿ ಏಟಿಎಂ ಕೇಂದ್ರ” ಬಲ್ಯೊಟ್ಟು ಆಶ್ರಮದ ಬಳಿ ಇರುವ ಆದಿತ್ಯ ಕಾಂಪ್ಲೆಕ್ಸ್ ನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಇಂದು ಶುಭಾರಂಭ ಗೊಂಡಿತು.ATM ಕೇಂದ್ರದ ಉದ್ಘಾಟನೆಯನ್ನು ಸಂಸ್ಥೆಯ ಮಾಲಕರ ಮಾತೃಶ್ರೀಯವರಾದ ಶ್ರೀಮತಿ ಸುಮಿತ್ರ ಜೈನ್, ನಿವೃತ್ತ ಮುಖ್ಯೋಪಾಧ್ಯಾಯಿನಿ ಇವರು ನೆರವೇರಿಸಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ನಿರಂಜನ ಅಜ್ರಿ,ಮೊಕ್ತೇಸರರು […]Read More

ಸ್ಥಳೀಯ

ಬೀದಿಬದಿ ವ್ಯಾಪಾರಿಗಳಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ

  ಬೆಳ್ತಂಗಡಿ: ಬೀದಿ ಬದಿ ವ್ಯಾಪಾರಿಗಳು ಸ್ವಚ್ಛತೆಯನ್ನ ಕಾಪಾಡಿಕೊಂಡು ವ್ಯಾಪಾರವನ್ನು ಮಾಡಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ಒಂದು ವಾರದೊಳಗೆ ಸಂಪೂರ್ಣವಾಗಿ ತ್ಯಜಿಸಿ ಪರ್ಯಾಯ ವ್ಯವಸ್ಥೆಯನ್ನ ರೂಡಿಸಿಕೊಳ್ಳಬೇಕು ಎಂದು ಪ.ಪಂ ಉಪಾಧ್ಯಕ್ಷ ಜಯಾನಂದ ಗೌಡ ತಿಳಿಸಿದರು. ಅವರು ಪಟ್ಟಣ ಪಂಚಾಯತ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಚೇರಿ ವತಿಯಿಂದ ದೀನ ದಯಾಳ್ ಅಂತಿಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ನಗರ ಬೀದಿ ವ್ಯಾಪಾರಿಗಳ ಬೆಂಬಲ ಉಪಘಟಕದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಎರಡು ದಿನಗಳ […]Read More

ಜಿಲ್ಲೆ

ಮಂಗಳೂರಿನಲ್ಲಿ ಜನಿಸಿದ ನವಜಾತ ಶಿಶುವಿನ ಬಾಯಿಯಲ್ಲಿ ಕಾಣಿಸಿಕೊಂಡ ಹಲ್ಲು

  ಮಂಗಳೂರು: ಮಂಗಳೂರಿನಲ್ಲಿ ಜನಿಸಿದ ನವಜಾತ ಶಿಸುವಿನ ಬಾಯಿಯಲ್ಲಿ ಹಲ್ಲುಗಳೆರಡು ಕಾಣಿಸಿಕೊಂಡಿದ್ದು ಅಚ್ಚರಿ ತಂದಿದೆ. ಕಾಸರಗೋಡಿನ ಮಂಜೇಶ್ವರ ಮೂಲದ ರಾಜೇಶ್ ಹಾಗೂ ಧನ್ಯ ದಂಪತಿಗಳ ಶಿಶು. ಜು.4 ರಂದು ಜನಿಸಿದ ಈ ಮಗುವಿನ ಬಾಯಲ್ಲಿ ಹಲ್ಲುಗಳು ಕಾಣಿಸಿಕೊಂಡಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವಂತೆ ಹಾಗೂ ದಂತ ವೈದ್ಯರನ್ನು ಸಂಪರ್ಕಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಅದರಂತೆ ಹೊಸಂಗಡಿಯ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಡಾ ಮುರಳಿ ಮೋಹನ ಚೂಂತಾರು ಅವರನ್ನು ಈ ದಂಪತಿಗಳು ಸಂಪರ್ಕಿಸಿ ಸಮಾಲೋಚನೆ ನಡೆಸಿದ್ದಾರೆ. ಈ […]Read More

ಜಿಲ್ಲೆ

ಜುಲೈ 8 ಮತ್ತು 9 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

  ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರೆದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲಾ ‌ಶಾಲಾ ಕಾಲೇಜುಗಳಿಗೆ ಜು.8 ಮತ್ತು ಜು.9 ರಂದು ದ.ಕ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.Read More

ಕ್ರೈಂ

ಬಂಟ್ವಾಳ: ಶೆಡ್ ಮೇಲೆ ಗುಡ್ಡ ಕುಸಿತ: ಮೂವರು ಕಾರ್ಮಿಕರ ಸಾವು

  ಬಂಟ್ವಾಳ: ಕಾರ್ಮಿಕರು ವಾಸವಾಗಿದ್ದ ಮನೆಯ ಮೇಲೆ ಗುಡ್ಡವೊಂದು ಕುಸಿದು, ಶೆಡ್ ನೊಳಗೆ ಸಿಲುಕಿಕೊಂಡು ನಾಲ್ವರು ಕಾರ್ಮಿಕರ ಪೈಕಿ ಮೂವರು ಮೃತಪಟ್ಟಿದ್ದು, ಓರ್ವ ಕಾರ್ಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಜು ಪಾಲಕ್ಕಾಡ್, ಸಂತೋಷ್ ಆಲಕ್ಕುಯ್ಯ, ಬಾಬು ಕೊಟ್ಟಾಯಂ ಮೃತ ಕಾರ್ಮಿಕರಾಗಿದ್ದು ಜಾನಿ ಕಣ್ಣೂರು ಎಂಬಾತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವರೆಲ್ಲ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು.Read More

ಸ್ಥಳೀಯ

ಉಪ್ಪಿನಂಗಡಿಯಲ್ಲಿ ನೆರೆ ಭೀತಿ

  ಉಪ್ಪಿನಂಗಡಿ: ಕುಮಾರಧಾರ- ನೇತ್ರಾವತಿ ನದಿಗಳು ಉಕ್ಕಿ ಹರಿಯುತ್ತಿದ್ದು, ಉಪ್ಪಿನಂಗಡಿಯಲ್ಲಿ ನೆರೆ ಎದುರಾಗಿದೆ. ಎರಡೂ ನದಿಗಳಲ್ಲಿ ನೀರಿನ ಮಟ್ಟ ಏರುತ್ತಲೇ ಇರುವುದರಿಂದ ಅಲ್ಲಿಯ ಜನರಲ್ಲಿ ಆತಂಕ ಮೂಡಿದೆ. ಸಹಸ್ರಲಿಂಗೇಶ್ವರ ಮಹಾಕಾಳಿ ಸ್ನಾನಘಟ್ಟದ ಬಳಿ ನೇತ್ರಾವತಿ ನದಿಗಿಳಿಯುವ 38 ಮೆಟ್ಟಿಲುಗಳಲ್ಲಿ ನೆನ್ನೆ ಸಂಜೆ ವೇಳೆಗೆ 6 ಮೆಟ್ಟಿಲುಗಳಷ್ಟೆ ಕಾಣುತ್ತಿದ್ದವು, ಪುತ್ತೂರು ತಹಶೀಲ್ದಾರ್ ಉಪ್ಪಿನಂಗಡಿಗೆ ಆಗಮಿಸಿ ಗೃಹರಕ್ಷಕರನ್ನೊಳಗೊಂಡ ಪ್ರಾಕೃತಿಕ ವಿಕೋಪ ತಂಡದ ರಬ್ಬರ್ ಬೋಟ್ ನಲ್ಲಿ ಸಂಚರಿಸಿ ಬೋಟ್ ನ ಕಾರ್ಯಕ್ಷಮತೆ ಪರಿಶೀಲನೆ ನಡೆಸಿದ್ದಾರೆ.Read More

ಸ್ಥಳೀಯ

ಬೆಳಾಲು: ಅಕ್ರಮ ಮರ ಸಾಗಾಟ: ಮರ ಹಾಗೂ ಲಾರಿ ಅಧಿಕಾರಿಗಳ ವಶ

  ಬೆಳಾಲು: ಬೆಳಾಲಿನಿಂದ ಉಪ್ಪಿನಂಗಡಿ ಮಾರ್ಗವಾಗಿ ಚಲಿಸುತ್ತಿದ್ದ ಲಾರಿ ಚಾಲಕ ಕಣಿಯೂರು ಎಂಬಲ್ಲಿ ರಿಕ್ಷಾ ಚಾಲಕರಿಗೆ ದಾರಿ ಬಿಡದೇ ರಿಕ್ಷಾ ಚಾಲಕರೊಂದಿಗೆ ವಾಗ್ವಾದಕ್ಕೆ ಇಳಿದಿದ್ದು ಈ ವೇಳೆ ಅನುಮಾನ ಬಂದ ಕಾರಣ ಸ್ಥಳೀಯರು ಲಾರಿಯನ್ನು ತಡೆಹಿಡಿದಿದ್ದ ಘಟನೆ ನಡೆದಿದೆ. ಬಳಿಕ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದು, ಅಧಿಕಾರಿಗಳು ಲಾರಿ ಹಾಗೂ ಮರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.Read More

error: Content is protected !!