• July 15, 2024

ಮಂಗಳೂರಿನಲ್ಲಿ ಜನಿಸಿದ ನವಜಾತ ಶಿಶುವಿನ ಬಾಯಿಯಲ್ಲಿ ಕಾಣಿಸಿಕೊಂಡ ಹಲ್ಲು

 ಮಂಗಳೂರಿನಲ್ಲಿ ಜನಿಸಿದ ನವಜಾತ ಶಿಶುವಿನ ಬಾಯಿಯಲ್ಲಿ    ಕಾಣಿಸಿಕೊಂಡ ಹಲ್ಲು

ಮಂಗಳೂರು: ಮಂಗಳೂರಿನಲ್ಲಿ ಜನಿಸಿದ ನವಜಾತ ಶಿಸುವಿನ ಬಾಯಿಯಲ್ಲಿ ಹಲ್ಲುಗಳೆರಡು ಕಾಣಿಸಿಕೊಂಡಿದ್ದು ಅಚ್ಚರಿ ತಂದಿದೆ.

ಕಾಸರಗೋಡಿನ ಮಂಜೇಶ್ವರ ಮೂಲದ ರಾಜೇಶ್ ಹಾಗೂ ಧನ್ಯ ದಂಪತಿಗಳ ಶಿಶು.

ಜು.4 ರಂದು ಜನಿಸಿದ ಈ ಮಗುವಿನ ಬಾಯಲ್ಲಿ ಹಲ್ಲುಗಳು ಕಾಣಿಸಿಕೊಂಡಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವಂತೆ ಹಾಗೂ ದಂತ ವೈದ್ಯರನ್ನು ಸಂಪರ್ಕಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಅದರಂತೆ ಹೊಸಂಗಡಿಯ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಡಾ ಮುರಳಿ ಮೋಹನ ಚೂಂತಾರು ಅವರನ್ನು ಈ ದಂಪತಿಗಳು ಸಂಪರ್ಕಿಸಿ ಸಮಾಲೋಚನೆ ನಡೆಸಿದ್ದಾರೆ.

ಈ ಬಗ್ಗೆ ಡಾ. ಮುರಳಿ ಮೋಹನ್ ಚೂಂತಾರು ಪ್ರತಿಕ್ರಿಯೆ ನೀಡಿ ನವಜಾತ ಶಿಶುವಿನ ಬಾಯಲ್ಲಿ ಹಲ್ಲು ಇರುವುದು ಅತಿ ವಿರಳ ಒಂದು ವೇಳೆ ಇದ್ದರೂ ಅದು ಮೃದುವಾಗಿರುತ್ತದೆ ಈ ಹಲ್ಲು ತಾಯಿ ಹಾಲುಣಿಸುವ ಸಂದರ್ಭದಲ್ಲಿ ಗಂಟಲಿನಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಇರುವುದರಿಂದ ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗುತ್ತದೆ ಆದರೆ ಇದೀಗ ಜನಿಸಿರುವ ಶಿಶುವಿನ ಹಲ್ಲು ಗಟ್ಟಿಯಿದ್ದು ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇಲ್ಲ ಎಂದಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!