ಬೆಳ್ತಂಗಡಿ: ತಾಲೂಕು ಆರೋಗ್ಯ ಕೇಂದ್ರ ಬೆಳ್ತಂಗಡಿಯ ಡಯಾಲಿಸಿಸ್ ವಿಭಾಗದಲ್ಲಿ ಇನ್ವರ್ಟರ್ ಸಮಸ್ಯೆಯಿಂದ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರಿನ ಹಿನ್ನೆಲೆ ಇಂದು ತಾಲೂಕು ಆಸ್ಪತ್ರೆಗೆ ತಹಶಿಲ್ದಾರ್ ಪೃಥ್ವಿ ಸಾನಿಕಂ ಹಾಗೂ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪರಿಶೀಲನೆ ವೇಳೆ ಇನ್ವರ್ಟರ್ ಸಮಸ್ಯೆ ಕಂಡು ಬಂದಿದ್ದು ವೈದ್ಯರಾದ ಚಂದ್ರಕಾಂತ್ ಮತ್ತು ಸಿಬ್ಬಂದಿಗಳನ್ನು ಕರೆದು ತರಾಟೆ ಗೆ ತೆಗೆದುಕೊಂಡಿದ್ದಾರೆ. ತಕ್ಷಣ ಸಮಸ್ಯೆ ಬಗೆ ಹರಿಸುವಂತೆ ಸೂಚಿಸಿದ್ದಾರೆ.Read More
Tags :Hospital
ಮಂಗಳೂರು: ಮಂಗಳೂರಿನಲ್ಲಿ ಜನಿಸಿದ ನವಜಾತ ಶಿಸುವಿನ ಬಾಯಿಯಲ್ಲಿ ಹಲ್ಲುಗಳೆರಡು ಕಾಣಿಸಿಕೊಂಡಿದ್ದು ಅಚ್ಚರಿ ತಂದಿದೆ. ಕಾಸರಗೋಡಿನ ಮಂಜೇಶ್ವರ ಮೂಲದ ರಾಜೇಶ್ ಹಾಗೂ ಧನ್ಯ ದಂಪತಿಗಳ ಶಿಶು. ಜು.4 ರಂದು ಜನಿಸಿದ ಈ ಮಗುವಿನ ಬಾಯಲ್ಲಿ ಹಲ್ಲುಗಳು ಕಾಣಿಸಿಕೊಂಡಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವಂತೆ ಹಾಗೂ ದಂತ ವೈದ್ಯರನ್ನು ಸಂಪರ್ಕಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಅದರಂತೆ ಹೊಸಂಗಡಿಯ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಡಾ ಮುರಳಿ ಮೋಹನ ಚೂಂತಾರು ಅವರನ್ನು ಈ ದಂಪತಿಗಳು ಸಂಪರ್ಕಿಸಿ ಸಮಾಲೋಚನೆ ನಡೆಸಿದ್ದಾರೆ. ಈ ಬಗ್ಗೆ […]Read More
ಬಂಟ್ವಾಳ: ಕಾರ್ಮಿಕರು ವಾಸವಾಗಿದ್ದ ಮನೆಯ ಮೇಲೆ ಗುಡ್ಡವೊಂದು ಕುಸಿದು, ಶೆಡ್ ನೊಳಗೆ ಸಿಲುಕಿಕೊಂಡು ನಾಲ್ವರು ಕಾರ್ಮಿಕರ ಪೈಕಿ ಮೂವರು ಮೃತಪಟ್ಟಿದ್ದು, ಓರ್ವ ಕಾರ್ಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಜು ಪಾಲಕ್ಕಾಡ್, ಸಂತೋಷ್ ಆಲಕ್ಕುಯ್ಯ, ಬಾಬು ಕೊಟ್ಟಾಯಂ ಮೃತ ಕಾರ್ಮಿಕರಾಗಿದ್ದು ಜಾನಿ ಕಣ್ಣೂರು ಎಂಬಾತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವರೆಲ್ಲ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು.Read More