ಮುಂಬೈ ಮೂಲದ “ವಕ್ರಾಂಗಿ ಏಟಿಎಂ ಕೇಂದ್ರ” ಬಲ್ಯೊಟ್ಟು ಆಶ್ರಮದ ಬಳಿ ಉದ್ಘಾಟನೆ
ಹೊಸ್ಮಾರು ಈದು – ಕ್ರಾಸ್ ನಲ್ಲಿ ಪ್ರಪ್ರಥಮ ಬಾರಿಗೆ ಅಭಿಜಿತ್ ಜೈನ್ ನಾರಾವಿ ಇವರ ಮಾಲಕತ್ವ ದಲ್ಲಿ ಅತ್ಯಂತ ವಿಶ್ವಾಸಾರ್ಹ ಮತ್ತು ಅತ್ಯುತ್ತಮ ಸೇವೆಯೊಂದಿಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಮುಂಬೈ ಮೂಲದ “ವಕ್ರಾಂಗಿ ಏಟಿಎಂ ಕೇಂದ್ರ” ಬಲ್ಯೊಟ್ಟು ಆಶ್ರಮದ ಬಳಿ ಇರುವ ಆದಿತ್ಯ ಕಾಂಪ್ಲೆಕ್ಸ್ ನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಇಂದು ಶುಭಾರಂಭ ಗೊಂಡಿತು.
ATM ಕೇಂದ್ರದ ಉದ್ಘಾಟನೆಯನ್ನು ಸಂಸ್ಥೆಯ ಮಾಲಕರ ಮಾತೃಶ್ರೀಯವರಾದ ಶ್ರೀಮತಿ ಸುಮಿತ್ರ ಜೈನ್, ನಿವೃತ್ತ ಮುಖ್ಯೋಪಾಧ್ಯಾಯಿನಿ ಇವರು ನೆರವೇರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ನಿರಂಜನ ಅಜ್ರಿ,ಮೊಕ್ತೇಸರರು ಶ್ರೀ ಸೂರ್ಯನಾರಾಯಣ ದೇವಸ್ಥಾನ ನಾರಾವಿ, ಪ್ರೇಮ್ ಕುಮಾರ್ ಜೈನ್,ಪ್ರಸಿದ್ಧ ಉದ್ಯಮಿಗಳು ಹೊಸ್ಮಾರು, ವಸಂತ ಭಟ್,ಶ್ರೀ ಸರಸ್ವತಿ ಟ್ರೇಡರ್ಸ್ ನಾರಾವಿ, ಡಾ| ಪ್ರಸಾದ್.ಬಿ.ಶೆಟ್ಟಿ ವಿಜಯ ಕ್ಲಿನಿಕ್ ಹೊಸ್ಮಾರು, N ವಿಜಯಕುಮಾರ್,ಉಪಾಧ್ಯಕ್ಷರು ಗ್ರಾ. ಪಂ ಈದು, ಉದಯ ಹೆಗ್ಡೆ,ಉಪಾಧ್ಯಕ್ಷರು,ಗ್ರಾ. ಪಂ ನಾರಾವಿ, ವಿನಯ್ ಹೆಗ್ಡೆ,ಅಧ್ಯಕ್ಷರು PWD ಗುತ್ತಿಗೆದಾರರ ಸಂಘ ಬೆಳ್ತಂಗಡಿ, ಅಶೋಕ್ ಕುಮಾರ್ ಜೈನ್, ಮಾಲಕರು ಶ್ರೀ ಆದಿತ್ಯ ಕಾಂಪ್ಲೆಕ್ಸ್ ಈದು ಕ್ರಾಸ್ ಹೊಸ್ಮಾರು, ಮಹಾವೀರ್ ಜೈನ್ ಪದ್ಮಾಂಜಲಿ,ವಾಲ್ಪಾಡಿ ಮತ್ತು ಅತುಲ್ ಜೈನ್ ಉಪನ್ಯಾಸಕರು SDM ಕಾಲೇಜು ಉಜಿರೆ ಇವರುಗಳು ದೀಪ ಬೆಳಗಿಸಿ ಸಂಸ್ಥೆಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರರಾದ ಅಭಿಜಿತ್ ಜೈನ್ ನಾರಾವಿ ಮತ್ತು ಸಹಪಾಲುದಾರರಾದ ಪ್ರವೀಣ್ ರೊಡ್ರಿಗಸ್ ರವರು ಉಪಸ್ಥಿತರಿದ್ದು ATM ಕೇಂದ್ರವು ದಿನದ 24 ಗಂಟೆಯೂ ಸಾರ್ವಜನಿಕ ಸೇವೆಗೆ ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದರು.