ನಾಲ್ಕು ಚಕ್ರ ವಾಹನ ಹೊಂದಿರುವ ರಾಜ್ಯದ ಪಡಿತರ ಚೀಟಿದಾರರಿಗೆ ದಂಡಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಈ ಹಿಂದೆ ನಾಲ್ಕು ಚಕ್ರದ ವಾಹನ ಹೊಂದಿದಂತಹ ಪಡಿತರ ಚೀಟಿ ದಾರರಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು ಹಿಂದಿರುಗಿಸದ ಕಾರಣ ಇದೀಗ ಸರ್ಕಾರ ದಂಡದ ಅಸ್ತ್ರವನ್ನು ಪ್ರಯೋಗಿಸಿದೆ ಎನ್ನಲಾಗುತ್ತಿದೆ. ನಾಲ್ಕು ಚಕ್ರಗಳ ವಾಹನ ಹೊಂದಿರುವವರು ಅಂತ್ಯೊ ದಯಾ ,ಬಿಪಿಎಲ್ ಚೀಟಿ ಹೊಂದಿದ್ದರೆ 2019 ಸೆಪ್ಟೆಂಬರ್ 3ರೊಳಗೆ ವಾಪಸ್ ನೀಡುವಂತೆ ಸರಕಾರ ಸೂಚಿಸಿತ್ತು, ಆ ಬಳಿಕ ಅವಧಿಯನ್ನು ವಿಸ್ತರಣೆ ಕೂಡ ಮಾಡಲಾಗಿತ್ತು. […]Read More
ಬೆಳ್ತಂಗಡಿ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ ಯಲ್ಲಿ ಜು.26 ರಂದು ಪ್ರಧಾನ್ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿಯಲ್ಲಿ 1 ರಿಂದ 8 ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದೊಂದಿಗೆ ಬೇಯಿಸಿದ ಮೊಟ್ಟೆಯನ್ನು ಶಾಸಕ ಹರೀಶ್ ಪೂಂಜರವರು ಮಕ್ಕಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ- ಶಿಕ್ಷಕೇತರ ವೃಂದ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.Read More
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಸುಮಾರು ರೂ.5 ಲಕ್ಷ ವೆಚ್ಚದಲ್ಲಿ ನೀರಾವರಿ, ವಿದ್ಯುತ್ತಿಕರಣ, ಪಂಪ್ ಸೆಟ್ ಅಳವಡಿಕೆಯ ಯೋಜನೆಯ 180 ಫಲಾನುಭವಿಗಳ ಸಭೆಯು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್, ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್ ನಾವೂರ ಹಾಗೂ ಎಸ್. ಸಿ. ಮೋರ್ಚಾ ಎಸ್. ಟಿ. ಮೋರ್ಚಾ ಪದಾಧಿಕಾರಿಗಳು ಪಂಚಾಯತ್ ಅಧ್ಯಕ್ಷರುಗಳು ಉಪಸ್ಥಿತರಿದ್ದರು.Read More
ಕಲ್ಮಂಜ: ಕಲ್ಮಂಜ ಗ್ರಾಮದ ಅಜಿತ್ ನಗರ ಎಂಬಲ್ಲಿ ದಿನೇ ದಿನೇ ಸಾಕು ನಾಯಿಗಳು ಸಾವನ್ನಪ್ಪುತ್ತಿದ್ದು, ಯಾರೋ ಕಿಡಿಗೇಡಿಗಳು ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ. ಆಹಾರ ಹುಡುಕುತ್ತಾ ರಸ್ತೆಗೆ ಬರುವ ಸಾಕುನಾಯಿಗಳು , ಮನೆಗೆ ಬಾರದೆ ಸಾವನ್ನಪ್ಪುತ್ತಿರುವುದು ಅಲ್ಲಿಯ ಸ್ಥಳಿಯರಲ್ಲಿ ಸಂಶಯ ಮೂಡಿದ್ದು , ತನಿಖೆ ನಡೆಸುವಂತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹತ್ತು ದಿನಗಳಿಂದ ನಡೆಯುತ್ತಿರುವ ಈ ಘಟನೆಯಲ್ಲಿ ಒಟ್ಟು 7 ಸಾಕು ನಾಯಿಗಳು ಜೀವ ಕಳೆದುಕೊಂಡಿದೆ. ಇನ್ನೂ ಇದೇ ರೀತಿಯಾಗಿ ಮುಂದುವರೆದರೆ ಇನ್ನೂ ಹಲವಾರು ಸಾಕು ನಾಯಿಗಳು […]Read More
ಬೆಳಾಲು: ಮನೆಯಲ್ಲಿ ಒಬ್ಬಂಟಿಯಾಗಿದ್ದ ವೃದ್ದೆಯನ್ನು ಕೊಲೆ ಮಾಡಿ ಚಿನ್ನಾಭರಣ ಹಾಗೂ ಹಣ ದರೋಡೆ ಮಾಡಿ ಪರಾರಿಯಾದ ಆರೋಪಿ ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳಾಲು ಗ್ರಾಮದ ಅಕ್ಕು ಎಂಬ ವೃದ್ದೆಯು ಮನೆಯಲ್ಲಿ ಒಬ್ಬಂಟಿಯಾಗಿ ಇರುವುದನ್ನು ತಿಳಿದ ಸಂಬಂಧಿ ಅಶೋಕ್ ಎಂಬವನು ವೃದ್ದೆಯ ಎರಡು ಕಿವಿಯನ್ನು ಹರಿದು ಕಿವಿಯಲ್ಲಿದ್ದ ಚಿನ್ನವನ್ನು ಎಳೆದಿದ್ದಾನೆ ನಂತರ ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದ. ವೃದ್ದೆಯ ಮೊಮ್ಮಗಳು ಶಾಲೆಯಿಂದ ಮನೆಗೆ ವಾಪಾಸಾದಾಗ ಆಕೆಯ ಅಜ್ಜಿಯು ನರಳಾಡುವುದನ್ನು ಕಂಡು ಪಕ್ಕದ ಮನೆಗೆ ಮಾಹಿತಿ ತಿಳಿಸಿದ್ದಾಳೆ. […]Read More
ಪದ್ಮುಂಜ: ಒಕ್ಕಲಿಗರ ಯಾನೆ ಗೌಡರ ಸಂಘದ ಕಣಿಯೂರು ಗ್ರಾಮ ಸಮಿತಿಯ ಪದ್ಮುಂಜ ವಲಯದ ಸಮಾಲೋಚನಾ ಸಭೆ ಜು. 24ರಂದು ಪದ್ಮುಂಜ ಸಿ. ಎ. ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅತಿಥಿಗಳಾಗಿ ಆಗಮಿಸದ್ದ ನಿವೃತ್ತ ಶಿಕ್ಷಕರಾದ ಗುಡ್ಡಪ್ಪ ಬಲ್ಯರವರು ಮಾತನಾಡಿ ನಮ್ಮ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಗೌರವಯುತ ಸಾಧನೆ ಮಾಡಲು ಪ್ರೇರೇಪಿಸುವ ನಿಟ್ಟಿನಲ್ಲಿ ಸಂಘಟನೆ ಬಲಗೊಳಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ 2022 ದಾಖಲೆ ಮಾಡಿದ ಮುಗೆರೋಡಿ […]Read More
ಮೊಗ್ರು: ಜು24.ಕಳೆದ ಒಂದು ತಿಂಗಳಿನಿಂದ ಬೆಳ್ತಂಗಡಿ ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಭಾಗಶಃ ಹಾನಿಗೊಳಗಾದ ಬಂದಾರು ಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮದ ಮುರ ಜನಾರ್ಧನ ಆಚಾರ್ಯ ಇವರ ಮನೆಗೆ ಹಾನಿ ಆಗಿದ್ದು ಶಾಸಕ ಹರೀಶ್ ಪೂಂಜರವರು ಜು.24 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತ್ರಸ್ತರಿಗೆ ವೈಯಕ್ತಿಕ ನೆರವನ್ನು ನೀಡಿ ಸರಕಾರದಿಂದ ಸಿಗುವ ಪರಿಹಾರವನ್ನು ಶೀಘ್ರದಲ್ಲಿ ಒದಗಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಜಯಂತ ಕೋಟ್ಯಾನ್ ,ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ […]Read More
ಕಂಬಳಬೆಟ್ಟು: ಸಿದ್ದಿವಿನಾಯಕ ಯುವಕ ಮಂಡಲ ಧರ್ಮನಗರ- ಕಂಬಳಬೆಟ್ಟು ಇವರ ವತಿಯಿಂದ ಮೂರೂ ಗ್ರಾಮಗಳನ್ನೊಳಗೊಂಡ ಹಿಂದೂ ಬಾಂಧವರ ತುಳುನಾಡ ಜಾನಪದ ಕ್ರೀಡೆ ಮತ್ತು ಆಚರಣೆಗಳನ್ನು ನೆನಪಿಸುವ ಸಲುವಾಗಿ ಮತ್ತು ಯುವಜನತೆಯ ಮನಸ್ಸುಗಳನ್ನು ದೇಶ ಭಾಷೆಗಳೊಂದಿಗೆ ಒಗ್ಗೂಡಿಸುವ ಸಲುವಾಗಿ ಕೆಸರ್ಡೊಂಜಿ ದಿನ ಕಾರ್ಯಕ್ರಮವು ಜು.24 ರಂದು ಕಾರ್ಯಾಡಿ ಬೈಲಿನಲ್ಲಿ ಜರುಗಿತು. ಧರ್ಮನಗರದಿಂದ ಕಾರ್ಯಾಡಿ ಬೈಲಿಗೆ ಬೈಕ್ ರ್ಯಾಲಿ ಮೂಲಕ ಬರಲಾಯಿತು. ಕಾರ್ಯಕ್ರಮವನ್ನು ಪುತ್ತೂರು ಚಾರಿಟೇಬಲ್ ಟ್ರಸ್ಟ್ ಮತ್ತು ರೈ ಎಜುಕೇಶನ್ ಸಂಚಾಲಕರು ಅಶೋಕ್ ಕುಮಾರ್ ರೈ ಕೋಡಿಂಬಾಡಿ ಉದ್ಘಾಟಿಸಿ, […]Read More
ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಸಮಾಜ ಸೇವಾ ವಿಭಾಗವಾದ ದಕ್ಷಿಣ ಕನ್ನಡ ರೂರಲ್ ಡೆವಲಪ್ಮೆಂಟ್ ಸೊಸೈಟಿ (ರಿ) ಬೆಳ್ತಂಗಡಿ, ದಕ್ಷಿಣ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ನಡುಜಾರು , ಅಂಗನವಾಡಿ ಕೇಂದ್ರ ನಡುಜಾರು ಇವುಗಳ ಆಶ್ರಯದಲ್ಲಿ ಬಹು ಉಪಯುಕ್ತವಾದ ಲಕ್ಷ್ಮಣಫಲ ಗಿಡವನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರವನ್ನು ಜು. 23 ರಂದು ನಡುಜಾರು ಶಾಲೆಯಲ್ಲಿ ಆಚರಿಸಲಾಯಿತು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಬಿನೋಯಿ ಏ. ಜೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ”ಇಷ್ಟು ದಿನ ಮಾನವ […]Read More
ಬೆಳ್ತಂಗಡಿ: ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜುವೆಲ್ಸ್ ನ ಎಲ್ಲಾ ಐದೂ ಮಳಿಗೆಯಲ್ಲೂ ಜುಲೈ 20 ರಿಂದ 30ರವರೆಗೆ ವೆಚ್ಚದ ಬೆಲೆಗೆ ಮಾರಾಟ ಯೋಜನೆ ಆರಂಭಿಸುತ್ತಿದ್ದು, ನೆಕ್ಲೇಸ್ ಬಳೆಗಳು, ಕಿವಿಯೋಲೆಗಳು ಸೇರಿದಂತೆ ನಿತ್ಯ ಬಳಕೆಯ ವಿಶೇಷ ವಿನ್ಯಾಸಗಳ ಆಕರ್ಷಕ ಆಭರಣಗಳು ತಯಾರಿಕಾ ವೆಚ್ಚದ ಬೆಲೆಯಲ್ಲಿ ಸಿಗಲಿದೆ. ಈ ಯೋಜನೆ ಸ್ಟಾಕ್ ಮುಗಿಯುವವರೆಗೆ ಮಾತ್ರ ಸೀಮಿತವಾಗಿದ್ದು, ಆಯ್ದ ಶ್ರೇಣಿಯ ಆಭರಣಗಳ ಮೇಲೆ ಈ ಯೋಜನೆ ಅನ್ವಯವಾಗುತ್ತದೆ . ಮುಳಿಯ ದ ಎಲ್ಲಾ ಐದು ಮಳಿಗೆಗಳಲ್ಲಿ ಗ್ರಾಹಕರು ಇದರ […]Read More