ಕನ್ಯಾಡಿ:ಜು.13- ಆ.29: ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾರಂಭ

ಕನ್ಯಾಡಿ: ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ತಮ್ಮ ಆತ್ಮೋನ್ನತಿ ಹಾಗೂ ಲೋಕ ಕಲ್ಯಾನಾರ್ಥವಾಗಿ ಚಾತುರ್ಮಾಸ ವೃತಾರಂಭವು ಜು.13 ರಿಂದ ಪ್ರಾರಂಭಗೊಂಡು ಆ.29 ರವರೆಗೆ ಶ್ರೀ ಗುರುದೇವ ಮಠದಲ್ಲಿ ಶ್ರೀ ಲಕ್ಷ್ಮೀಪತಿ ಗೋಪಾಲಚಾರ್ಯರು ಆಗಮ ಪ್ರವೀಣ ಬೆಂಗಳೂರು ಇವರ ಪೌರೋಹಿತ್ವದಲ್ಲಿ ನಡೆಯಲಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.
ಅವರು ಜು.8 ರಂದು ನಡೆದ 2ನೇ ಸುತ್ತಿನ ಸಭೆಯಲ್ಲಿ ಮಾತನಾಡಿದರು.
ಜು.13ರಂದು ಗುರುಪೂರ್ಣಿಮೆಯಂದು ಮೂಲ ಮಠ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಶ್ರೀ ಗುರುದೇವ ಮಠದಲ್ಲಿ ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ಚಾತುರ್ಮಾಸ ವೃತಸಂಕಲ್ಪ ವೈದಿಕ ವಿಧಿವಿಧಾನಗಳು. ಪೂರ್ವಾಹ್ನ ಗಂಟೆ 10ಕ್ಕೆ ಶ್ರೀರಾಮ ಮಹಾಸಂಸ್ಥಾನದಲ್ಲಿ ಸ್ವಾಮೀಜಿಯವರಿಂದ ಶ್ರೀ ರಾಮ ದೇವರಿಗೆ ವಿಶೇಷ ಪೂಜೆ, ಪೂರ್ವಾಹ್ನ 10.30ಕ್ಕೆ ದೇವರಗುಡ್ಡೆ ಗುರುದೇವ ಮಠದ ಪುರಾತನ ಶ್ರೀ ದೇವ ಲಿಂಗೇಶ್ವರ ದೇವಾಲಯದಿಂದ ಶ್ರೀಗಳ ವೈಭವದ ಪುರಪ್ರವೇಶ ಮೆರವಣಿಗೆ, ಶ್ರೀಗಳವರ ಗುರುಪೂರ್ಣಿಮೆಯ ವ್ಯಾಸಪೀಠದ ಪೀಠಾರೋಹಣ, ತಾ.29 ರಂದು ಚಾತುರ್ಮಾಸ್ಯ ಮುಕ್ತಾಯಗೊಂಡು ಗುರುಪಾದುಕಾ ಪೂಜೆ, ಶ್ರೀಗಳ ಆಶೀರ್ವಚನ, ಪ್ರಸಾದ ವಿತರಣೆ ನಡೆಯಲಿದೆ ಎಂದು ಹೇಳಿದರು.