• October 16, 2024

ಪವರ್ ಲಿಫ್ಟಿಂಗ್ ನಲ್ಲಿ 3 ಚಿನ್ನ, 1ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡ ಕುಂದಾಪುರದ ಸತೀಶ್ ಖಾರ್ವಿ

 ಪವರ್ ಲಿಫ್ಟಿಂಗ್ ನಲ್ಲಿ 3 ಚಿನ್ನ, 1ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡ ಕುಂದಾಪುರದ ಸತೀಶ್ ಖಾರ್ವಿ

 

ಆಲ್ ಇಂಡಿಯಾ ಪವರ್ ಲಿಫ್ಟಿಂಗ್ M-1 ವಿಭಾಗದ ಸ್ಪರ್ಧೆಯಲ್ಲಿ ನ್ಯೂ ಹರ್ಕ್ಯುಲೆಸ್ ಜಿಮ್ ನ ವ್ಯವಸ್ಥಾಪಕ ಸತೀಶ್ ಖಾರ್ವಿ 3 ಚಿನ್ನದ ಪದಕ ಹಾಗೂ 1 ಬೆಳ್ಳಿ ಪದಕ ಗೆದ್ದು ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಇವರು ಕುಂದಾಪುರದವರಾಗಿದ್ದು, ತೆಲಂಗಾಣದ ವಿಜಯ್ ಭಾಸ್ಕರ್ ರೆಡ್ಡಿ ಇಂಡೋರ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಆಲ್ ಇಂಡಿಯಾ ಪವರ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕವನ್ನು ಗೆದ್ದು ಕರ್ನಾಟಕಕ್ಕೆ ಕೀರ್ತಿಯನ್ನು ತಂದಿದ್ದಾರೆ.ಈ ಹಿಂದೆ ಇವರು 2 ಚಿನ್ನದ ಪದಕ, 2 ಬೆಳ್ಳಿ ಪದಕ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!