ಕಲ್ಮಂಜ ಗ್ರಾಮದ ಗುತ್ತು ಬೈಲು ಎಂಬಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಕಿರು ಸೇತುವೆಯೊಂದು ಸಂಪೂರ್ಣ ಕೊಚ್ಚಿ ಹೋಗಿತ್ತು. ಈ ವಿಷಯವನ್ನು ಶಾಸಕರ ಗಮನಕ್ಕೆ ತಂದಾಗ ಮಳೆ ಕಡಿಮೆಯಾದಲ್ಲಿ ತಾತ್ಕಾಲಿಕವಾಗಿ ಸಂಪರ್ಕ ವ್ಯವಸ್ಥೆ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಅದರಂತೆ ಕೆಲವು ದಿನದಿಂದ ಮಳೆ ಕಡಿಮೆಯಾದರಿಂದ ತಕ್ಷಣವೇ ಇಂದು ತಾತ್ಕಾಲಿಕ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಇದು ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು. ಸರಕಾರದಿಂದ ಯಾವುದೇ ನೆರವು ಬಾರದಿರುವುದರಿಂದ ಕಂಗೆಟ್ಟಿದ್ದಕಲ್ಮಂಜ ಗ್ರಾಮಸ್ಥರಿಗೆ ನಿಟ್ಟುಸಿರು ಬಿಡುವಂತಾಗಿದೆRead More
Tags :Kalmanja
ಕಲ್ಮಂಜ: ಗ್ರಾ.ಪಂ ಕಲ್ಮಂಜ ಇದರ ನೂತನ ಅಧ್ಯಕ್ಷರಾಗಿ ವಿಮಲಾ , ಉಪಾಧ್ಯಕ್ಷರಾಗಿ ಪೂರ್ಣಿಮಾ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆRead More
ಕಲ್ಮಂಜ: ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಮದಿಮಾಲ್ ಕಟ್ಟೆ ಎಂಬಲ್ಲಿ ಇರುವಂತಹ ಅಂಗನವಾಡಿ ಕೇಂದ್ರದಲ್ಲಿ ಒಂದು ಶೌಚಾಲಯವಿದ್ದು ಈ ಶೌಚಾಲಯದ ಹೊರಭಾಗದಲ್ಲಿ ಇರುವಂತಹ ಪಿಟ್ (ಗುಂಡಿ) ಸಂಪೂರ್ಣವಾಗಿ ಜಖಂ ಗೊಂಡು ಕಸ ಕಡ್ಡಿಗಳಿಂದ ತುಂಬಿ ಅದರ ಮೇಲೆ ಮಣ್ಣು ಬಿದ್ದು ಗುಂಡಿ ಸಂಪೂರ್ಣವಾಗಿ ಮುಚ್ಚಿ ಹೋಗಿದೆ. ಈ ಕಾರಣಕ್ಕಾಗಿ ಪುಟಾಣಿ ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಇಲ್ಲದಂತಾಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ.Read More
ಕಲ್ಮಂಜ: ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಉಣಿಪಾಜೆ ಎಂಬಲ್ಲಿ ಮೇ.11 ರಂದು ರಾತ್ರಿ ಮೀನು ಹಿಡಿಯಲು ಹೋಗಿದ್ದ ವೇಳೆ ಆಕಸ್ಮಿಕವಾಗಿ ಮೃತಪಟ್ಟ ಘಟನೆ ಕುಕ್ಕೆಮಜಲು ಎಂಬಲ್ಲಿ ನಡೆದಿದೆ. ಕೃಷ್ಣಪ್ಪ ಗೌಡ (60)ಮೃತಪಟ್ಟ ದುರ್ದೈವಿ. ಪಜಿರಡ್ಕ ದೇವಸ್ಥಾನದಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿ ದೇವರಗುಂಡಿ ಎಂಬಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಉಜಿರೆ ಧರ್ಮಸ್ಥಳ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದು, ನಂತರ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು ಆದರೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತರು ಪತ್ನಿ ಕವಿತ ಹಾಗೂ […]Read More
ಕಲ್ಮಂಜ: ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಗುತ್ತಿನ ಮನೆ ನಿವಾಸಿ ಬಾಲಚಂದ್ರ ರಾವ್ ಅವರ ರಬ್ಬರ್ ಸ್ಮೋಕ್ ಹೌಸ್ ಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ ಘಟನೆ ಡಿ.26 ರಂದು ನಡೆದಿದೆ. ಪರಿಣಾಮ ಸುಮಾರು ಎರಡು ಕ್ವಿಂಟಾಲ್ ರಬ್ಬರ್, 7,000 ತೆಂಗಿನ ಕಾಯಿ ಹಾಗೂ ಮೂರು ಕೊಠಡಿಯಲ್ಲಿರಿಸಿದ್ದ ಅಡಿಕೆ ಸಂಪೂರ್ಣ ಸುಟ್ಟು ಕರಕಲಾಗಿದೆ. ತಕ್ಷಣ ಸ್ಥಳೀಯರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ ನಂತರ ಮಾಹಿತಿ ತಿಳಿದ ಅಗ್ನಿಶಾಮಕ ದಳ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆRead More
ದೇವರಗುಡ್ಡೆ ಆಶ್ರಮ-ಪಜಿರಡ್ಕ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನ-ನಿಡಿಗಲ್ ಸಂಪರ್ಕ ರಸ್ತೆಗೆ 1.15
ಕಲ್ಮಂಜ: ಕಲ್ಮಂಜ ಗ್ರಾಮದ ದೇವರಗುಡ್ಡೆ ಆಶ್ರಮ-ಪಜಿರಡ್ಕ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನ-ನಿಡಿಗಲ್ ಸಂಪರ್ಕ ರಸ್ತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ 1.15 ಕೋಟಿ ರೂ ಅನುದಾನ ಬಿಡುಗಡೆಗೊಂಡಿದೆ. ಅನುದಾನವನ್ನು ಬಿಡುಗಡೆಗೊಳಿಸಿದ ಶಾಸಕ ಹರೀಶ್ ಪೂಂಜರಿಗೆ ಕಲ್ಮಂಜ ಗ್ರಾಮಸ್ಥರು ಅಭಿನಂದನೆಯನ್ನು ತಿಳಿಸಿದ್ದಾರೆ.Read More
ಕಲ್ಮಂಜ: ತೋಟದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಉದಯ ಗೌಡ: ಯಾರೋ ಮಾಡಿದ ತಪ್ಪಿಗೆ ಬಲಿಯಾಯಿತು
ಕಲ್ಮಂಜ: ಮನೆಯಿಂದ ತೋಟಕ್ಕೆ ಹೋಗಿದ್ದ ಕಲ್ಮಂಜ ಗ್ರಾಮದ ಕರಿಯನೆಲ ಕಂರ್ಬಿತ್ತಿಲ್ ನಿವಾಸಿ ಉದಯ ಗೌಡ ಅವರು ವಿದ್ಯುತ್ ಅವಘಡದಿಂದ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಎಂದಿನಂತೆ ತೋಟದ ಕಡೆಗೆ ಹೋಗಿದ್ದ ಉದಯ ಗೌಡ ಇನ್ನೂ ಮನೆಗೆ ಬರದೇ ಇದ್ದಾಗ ಉದಯ ಗೌಡ ಅವರ ಸಹೋದರ ಪತ್ನಿ ತನ್ನ ಪತಿಗೆ ಕರೆ ಮಾಡಿ ತಿಳಿಸಿದ್ದಾರೆ. ಉದಯ ಗೌಡ ಸಹೋದರ ಹತ್ತಿರದಲ್ಲಿದ್ದ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿಯನ್ನ ತಿಳಿಸಿದ್ದಾರೆ. ಮಾಹಿತಿ ತಿಳಿದ ಸಂಬಂಧಿಕರು ಹುಡುಕಾಟ ನಡೆಸಿದಾಗ ಉದಯ ಗೌಡ ಅವರ […]Read More
ಕಲ್ಮಂಜ: ತೋಟಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟ ವ್ಯಕ್ತಿಯೋರ್ವರು ತೋಟದಲ್ಲಿ ಮೃತಪಟ್ಟಿರುವ ಘಟನೆ ಅ.30 ರಂದು ನಡೆದಿದೆ. ಮೃತ ಪಟ್ಟ ವ್ಯಕ್ತಿ ಕಲ್ಮಂಜ ಗ್ರಾಮದ ಕರಿಯನೆಲದ ಕರ್ಬಿತ್ತಿಲ್ ನಿವಾಸಿ ಶೀನಪ್ಪ ಗೌಡರ ಮಗನಾದ ಉದಯ ಗೌಡ( 43) . ಮನೆಯಿಂದ ತೋಟಕ್ಕೆ ಹೊರಟು ಹೋದವರು ಮನೆಗೆ ವಾಪಾಸು ಬರದೇ ಇದ್ದುದನ್ನು ಗಮನಿಸಿದ ಮನೆಮಂದಿ ಹುಡುಕಾಟ ನಡೆಸಿದಾಗ ತೋಟದಲ್ಲಿ ಮೃತದೇಹ ಕಂಡುಬಂದಿದೆ. ತಕ್ಷಣ ಮನೆಯವರು ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿಯನ್ನು ತಿಳಿಸಿದ್ದಾರೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. […]Read More
ಕಲ್ಮಂಜ: ಕಲ್ಮಂಜ ಗ್ರಾಮದ ಅಜಿತ್ ನಗರ ಎಂಬಲ್ಲಿ ದಿನೇ ದಿನೇ ಸಾಕು ನಾಯಿಗಳು ಸಾವನ್ನಪ್ಪುತ್ತಿದ್ದು, ಯಾರೋ ಕಿಡಿಗೇಡಿಗಳು ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ. ಆಹಾರ ಹುಡುಕುತ್ತಾ ರಸ್ತೆಗೆ ಬರುವ ಸಾಕುನಾಯಿಗಳು , ಮನೆಗೆ ಬಾರದೆ ಸಾವನ್ನಪ್ಪುತ್ತಿರುವುದು ಅಲ್ಲಿಯ ಸ್ಥಳಿಯರಲ್ಲಿ ಸಂಶಯ ಮೂಡಿದ್ದು , ತನಿಖೆ ನಡೆಸುವಂತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹತ್ತು ದಿನಗಳಿಂದ ನಡೆಯುತ್ತಿರುವ ಈ ಘಟನೆಯಲ್ಲಿ ಒಟ್ಟು 7 ಸಾಕು ನಾಯಿಗಳು ಜೀವ ಕಳೆದುಕೊಂಡಿದೆ. ಇನ್ನೂ ಇದೇ ರೀತಿಯಾಗಿ ಮುಂದುವರೆದರೆ ಇನ್ನೂ ಹಲವಾರು ಸಾಕು ನಾಯಿಗಳು […]Read More