ಕಲ್ಮಂಜ : ಗುತ್ತಿನ ಮನೆ ಬಾಲಚಂದ್ರರವರ ರಬ್ಬರ್ ಸ್ಮೋಕ್ ಹೌಸ್ ಗೆ ಆಕಸ್ಮಿಕ ಬೆಂಕಿ: ಅಪಾರ ಪ್ರಮಾಣದ ಹಾನಿ
ಕಲ್ಮಂಜ: ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಗುತ್ತಿನ ಮನೆ ನಿವಾಸಿ ಬಾಲಚಂದ್ರ ರಾವ್ ಅವರ ರಬ್ಬರ್ ಸ್ಮೋಕ್ ಹೌಸ್ ಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ ಘಟನೆ ಡಿ.26 ರಂದು ನಡೆದಿದೆ.
ಪರಿಣಾಮ ಸುಮಾರು ಎರಡು ಕ್ವಿಂಟಾಲ್ ರಬ್ಬರ್, 7,000 ತೆಂಗಿನ ಕಾಯಿ ಹಾಗೂ ಮೂರು ಕೊಠಡಿಯಲ್ಲಿರಿಸಿದ್ದ ಅಡಿಕೆ ಸಂಪೂರ್ಣ ಸುಟ್ಟು ಕರಕಲಾಗಿದೆ.
ತಕ್ಷಣ ಸ್ಥಳೀಯರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ ನಂತರ ಮಾಹಿತಿ ತಿಳಿದ ಅಗ್ನಿಶಾಮಕ ದಳ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ