• December 9, 2024

ಕಲ್ಮಂಜ: ಮನೆಯಿಂದ ತೋಟಕ್ಕೆ ಹೋದ ವ್ಯಕ್ತಿ ಶವವಾಗಿ ಪತ್ತೆ

 ಕಲ್ಮಂಜ: ಮನೆಯಿಂದ ತೋಟಕ್ಕೆ ಹೋದ ವ್ಯಕ್ತಿ ಶವವಾಗಿ ಪತ್ತೆ

 

ಕಲ್ಮಂಜ: ತೋಟಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟ ವ್ಯಕ್ತಿಯೋರ್ವರು ತೋಟದಲ್ಲಿ ಮೃತಪಟ್ಟಿರುವ ಘಟನೆ ಅ.30 ರಂದು ನಡೆದಿದೆ.

ಮೃತ ಪಟ್ಟ ವ್ಯಕ್ತಿ ಕಲ್ಮಂಜ ಗ್ರಾಮದ ಕರಿಯನೆಲದ ಕರ್ಬಿತ್ತಿಲ್ ನಿವಾಸಿ ಶೀನಪ್ಪ ಗೌಡರ ಮಗನಾದ ಉದಯ ಗೌಡ( 43) .

ಮನೆಯಿಂದ ತೋಟಕ್ಕೆ ಹೊರಟು ಹೋದವರು ಮನೆಗೆ ವಾಪಾಸು ಬರದೇ ಇದ್ದುದನ್ನು ಗಮನಿಸಿದ ಮನೆಮಂದಿ ಹುಡುಕಾಟ ನಡೆಸಿದಾಗ ತೋಟದಲ್ಲಿ ಮೃತದೇಹ ಕಂಡುಬಂದಿದೆ.

ತಕ್ಷಣ ಮನೆಯವರು ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿಯನ್ನು ತಿಳಿಸಿದ್ದಾರೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬರಬೆಕಾಗಿದೆ.
ಶವ ಪರೀಕ್ಷೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಯ ಶವಗಾರಕ್ಕೆ ಸಾಗಿಸಲಾಗಿದೆ.

Related post

Leave a Reply

Your email address will not be published. Required fields are marked *

error: Content is protected !!