• April 26, 2025

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಪ್ರಾಯೋಜಿತ ಬಟ್ಟೆಯ ಕಸೂತಿ ಆರಿ ಕೌಶಲ್ಯ ಸ್ವ ಉದ್ಯೋಗ ತರಬೇತಿಯ ಸಮಾರೋಪ ಕಾರ್ಯಕ್ರಮ

 ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಪ್ರಾಯೋಜಿತ ಬಟ್ಟೆಯ ಕಸೂತಿ ಆರಿ ಕೌಶಲ್ಯ ಸ್ವ ಉದ್ಯೋಗ ತರಬೇತಿಯ ಸಮಾರೋಪ ಕಾರ್ಯಕ್ರಮ

 

ಬ್ಯಾಂಕ್ ಒಫ್ ಬರೋಡ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರ ನೇತೃತ್ವದಲ್ಲಿ, 15 ದಿನಗಳ ಬಟ್ಟೆ ಕಸೂತಿ ತಯಾರಿಕೆಯ(ಆರಿ ವರ್ಕ್ )ತರಬೇತಿಯ ಸಮಾರೋಪ ಕಾರ್ಯಕ್ರಮ ಕಲ್ಲೇರಿ ಹಾಲು ಉತ್ಪಾದಕರ ಸೊಸೈಟಿ ಸಭಾಂಗಣದಲ್ಲಿ ನಡೆಯಿತು.

ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಕಾರ್ಯಕ್ರಮ ವ್ಯವಸ್ತಾಪಕರಾದ ಜೀವನ್ ಕೊಲ್ಯ ತರಬೇತಿಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಮಾಹಿತಿ ನೀಡಿದರು.

ಬಹಳ ನಾಜುಕಾದ ತರಬೇತಿಯನ್ನು ಉತ್ತಮ ಮಟ್ಟದಲ್ಲಿ ಪಡೆದ ಮಹಿಳೆಯರಿಗೆ ಹುರಿದುಂಬಿಸಿ ಮುಂದೆ ಹೆಚ್ಚಿನ ಕೌಶಲ್ಯ ಪಡೆಯಲು ಪ್ರೇರೇಪಿಸಿದರು.

ಇಂದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಲ್ಲೇರಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಯಾದ ಜಯರಾಜ್ ಜೈನ್ ಇವರು ಮಹಿಳೆಯರು ಸಣ್ಣ ಅವಧಿಯಲ್ಲಿ ಹೆಚ್ಚಿನ ಕೌಶಲ್ಯ ದ ತರಬೇತಿ ಪಡೆದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು.

ತರಬೇತಿ ಪಡೆದ ಮಹಿಳೆಯರು ತರಬೇತಿ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಕಲ್ಲೇರಿ ಹಾಲು ಉತ್ಪಾದಕರ ಸಂಘದ ಸಿಬ್ಬಂದಿ ಪ್ರಮಿಳಾ, ತರಬೇತುದಾರರಾದ ಶುಭ ಲಕ್ಷ್ಮಿ, ಟೈಲರಿಂಗ್ ತರಬೇತುದಾರರಾದ ಮೀನಾಕ್ಷಿ ಉಪಸ್ಥಿತರಿದ್ದರು.

ಕಲ್ಲೇರಿ ಗ್ರಾಮ ವ್ಯಾಪ್ತಿಯ ಸುತ್ತ ಮುತ್ತ ಊರಿನ ಸುಮಾರು 22 ಮಹಿಳೆಯರು ಈ 15 ದಿವಸದ ತರಬೇತಿ ಪಡೆದು ಪ್ರಮಾಣ ಪತ್ರವನ್ನು ಪಡೆದರು.ಸ್ನೇಹಾ ಭಟ್ ಕಾರ್ಯಕ್ರಮ ನಿರೂಪಿಸಿ,ಸುಮಲತಾ ಇವರು ಸ್ವಾಗತಿಸಿದರು, ಶಿಲ್ಪಾ ಇವರು ಧನ್ಯವಾದಗೈದರು.

Related post

Leave a Reply

Your email address will not be published. Required fields are marked *

error: Content is protected !!