ಕಳೆಂಜ: ಮೇದಿನಿ ಫಾರ್ಮ್ ಭತ್ತದ ಗದ್ದೆಯಲ್ಲಿ ಮುಂಗಾರು ನೇಜಿ ಸಂಭ್ರಮ: ಉತ್ಸಾಹದಿಂದ ಪಾಲ್ಗೊಂಡ ಗ್ರಾಮಸ್ಥರು
ಕಳೆಂಜ: ಮುಂದಿನ ಪೀಳಿಗೆಯ ಮಕ್ಕಳಿಗೆ ಗದ್ದೆ ಹಾಗೂ ನೇಜಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕೊಕ್ಕಡ ಕಪಿಲ ಜೇಸಿಐ ಅಧ್ಯಕ್ಷರಾದ ಜೇಸಿ ಕೆ ಶ್ರೀಧರ್ ರಾವ್ ಇವರ ಮೇದಿನಿ ಫಾರ್ಮ್ ನ ಭತ್ತದ ಗದ್ದೆಯಲ್ಲಿ ಮುಂಗಾರು ನೇಜಿ ಸಂಭ್ರಮ- 2022 ಕಾರ್ಯಕ್ರಮವು ಜು.16 ರಂದು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಕೊಕ್ಕಡ ನಿವೃತ್ತ ಕ್ಷೇತ್ರ ಸಮನ್ವಯ ಅಧಿಕಾರಿ ಗಣೇಶ್ ಐತಾಳ್ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಕೊಕ್ಕಡ ಕಪಿಲ ಜೇಸಿಐ ಅಧ್ಯಕ್ಷ ಜೇಸಿ ಕೆ ಶ್ರೀಧರ ರಾವ್ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಕಳೆಂಜ ಶ್ರೀ. ಸ.ದೇ. ಕಾರ್ಯದರ್ಶಿ ಕುಸುಮಾಕರ, ಕಪಿಲ ಕೊಕ್ಕಡ ಜೇಸಿಐ ಕಾರ್ಯದರ್ಶಿ ಜೆಸಿ ನರಸಿಂಹ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಂಗಾರು ನೇಜಿ ಸಂಭ್ರಮದಲ್ಲಿ ಎಚ್ ಜಿ ಎಫ್ ಜೋಸೆಫ್ ಪಿರೇರಾ, ಜೇಸಿ ಸದಸ್ಯ ವಿಜಯೇಂದ್ರ ಎಸ್, ಸುಂದರ ಪೂಜಾರಿ ನೇರೆಂಕೆ ಪಾಲು, ಬಾಲಕೃಷ್ಣ ದೇವಾಡಿಗ, ಅಶ್ವಿನಿ, ವೀರಪ್ಪ ಗೌಡ ಪಿಲ್ಯಡ್ಕ, ಗುಲಾಬಿ ಕುಕ್ಕಾಜೆ, ರಘುಚಂದ್ರ ಪೂಜಾರಿ ಹಾಗೂ ಸರಕಾರಿ ಫ್ರೌಢ ಶಾಲೆ ಶಾಲೆತಡ್ಕ ಇಲ್ಲಿಯ ಮಕ್ಕಳು,ಗ್ರಾಮಸ್ಥರು ಭಾಗಿಯಾಗಿದ್ದರು.
ಇತಿಹಾಸ ಪ್ರಸಿದ್ದ ಪೂಕರೆ ಗದ್ದೆ ಇದಾಗಿದ್ದು, ಅಲ್ಲೇ ನೆಲೆಸಿರುವ ವ್ಯಾಘ್ರ ಚಾಮುಂಡಿ, ರಕ್ತೇಶ್ವರಿ, ಪಂಜುರ್ಲಿ, ಗುಳಿಗ ದೈವಗಳಿಗೆ ಪ್ರಾರ್ಥನೆಯನ್ನು ಮಾಡಿ ನಂತರ ಪೂಕರೆ ಗದ್ದೆಗೆ ಇಳಿದು ನೇಜಿ ನೆಡುವ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಇವರ ಈ ಉನ್ನತ ಕಾರ್ಯಕ್ಕೆ ಎರಡು ವರ್ಷದ ಹಿಂದೆ ಜಿಲ್ಲಾ ಪ್ರಶಸ್ತಿ ಲಭಿಸಿದೆ.