• July 27, 2024

ಧರ್ಮಸ್ಥಳ: ನೇತ್ರಾವತಿ ಸಮೀಪದ ಖಾಸಗಿ ಲಾಡ್ಜ್ ನಲ್ಲಿ ಮಹಿಳೆ ಸಾವು

 ಧರ್ಮಸ್ಥಳ: ನೇತ್ರಾವತಿ ಸಮೀಪದ ಖಾಸಗಿ ಲಾಡ್ಜ್ ನಲ್ಲಿ ಮಹಿಳೆ ಸಾವು

ಧರ್ಮಸ್ಥಳ  : ಇಲ್ಲಿಯ ನೇತ್ರಾವತಿ ಸಮೀಪದ ಖಾಸಗಿಯೊಂದರ ಲಾಡ್ಜ್ ನಲ್ಲಿ ನೆಲೆಸಿದ್ದ ಬೆಂಗಳೂರು ಮೂಲದ ನಂದಿನಿ ಎಂಬ ಮಹಿಳೆ ಆಕಸ್ಮಿಕವಾಗಿ ಸಾವನ್ನಪ್ಪಿದ ಘಟನೆ ಇಂದು ಆದಿತ್ಯವಾರ ನಡೆದಿದೆ.

ಇವರ ಕುಟುಂಬ ಸಮೇತ ಧರ್ಮಸ್ಥಳ ದೇವಸ್ಥಾನಕ್ಕೆಂದು ಬಂದು ಲಾಡ್ಜ್ ನಲ್ಲಿ ನೆಲೆಸಿದ್ದ ವೇಳೆ ಈ ಘಟನೆ ನಡೆದಿದೆ.

ನಂದಿನಿ ಎಂಬ ಮಹಿಳೆ  ಶೌಚಾಲಯಕ್ಕೆಂದು ಹೋಗಿದ್ದು, ತುಂಬಾ ಹೊತ್ತಾದರೂ ಬಾರದೇ ಇದ್ದುದನ್ನು ಗಮನಿಸಿದ ಮನೆಯವರು ಹೋಗಿ ಪರಿಶೀಲಿಸಿದ್ದಾರೆ. ಈ ವೇಳೆ ಮಹಿಳೆ ಕೆಳಗೆ ಬಿದ್ದ ಸ್ಥಿತಿಯಲ್ಲಿ ಇದ್ದು , ಕೆನ್ನೆಗೆ ತೀವ್ರವಾದ ಪೆಟ್ಟು ಬಿದ್ದಿತ್ತು ಎನ್ನಲಾಗುತ್ತಿದೆ.

ತಕ್ಷಣ ಉಜಿರೆಯ ಎಸ್ ಡಿಎಂ ಹಾಸ್ಪಿಟಲ್ ಗೆ ಮನೆಯವರು ಕರೆದುಕೊಂಡು ಹೋಗಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ರವಾನಿಸುತ್ತಿರುವಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ನಂತರ ಮೃತ ದೇಹವನ್ನು ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Related post

Leave a Reply

Your email address will not be published. Required fields are marked *

error: Content is protected !!