• December 9, 2024

ಬೆಳ್ತಂಗಡಿ:ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ರವರ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಹಣದ ಬೇಡಿಕೆಯಿಟ್ಟ ಕಿಡಿಗೇಡಿಗಳು

 ಬೆಳ್ತಂಗಡಿ:ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ರವರ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಹಣದ ಬೇಡಿಕೆಯಿಟ್ಟ ಕಿಡಿಗೇಡಿಗಳು

 

ಬೆಳ್ತಂಗಡಿ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ,ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ ರವರ ಹೆಸರಿನಲ್ಲಿ ಅವರ ಪೋಟೋ ಬಳಸಿ ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದು ಆ ಖಾತೆಯ ಮೂಲಕ ಹಣದ ಬೇಡಿಕೆ ಇಟ್ಟಿದ್ದಾರೆ ಯಾರೋ ಕಿಡಿಗೇಡಿಗಳು.

  ಫೇಸ್ ಬುಕ್ ನಲ್ಲಿ Rakshith Shivaram Tulunad ಎಂಬ ಹೆಸರಿನಲ್ಲಿ ಫೇಸ್ ಬುಕ್ ಅಕೌಂಟ್ ಸೃಷ್ಠಿಸಿ ಆ ಖಾತೆಯಿಂದ ನಿಮ್ಮಲ್ಲಿ ಗೂಗಲ್ ಪೇ ಇದೆಯೇ, ನನಗೆ ಸ್ವಲ್ಪ ಹಣದ ಅವಶ್ಯಕತೆ ಇದೆ ಎಂದು ಮೊಬೈಲ್ ನಂಬರ್ ತಿಳಿಸಿ ಹಣವನ್ನು ಮೊಬೈಲ್‍ಗೆ ಗೂಗಲ್ ಪೇ ಮಾಡಿ ಎಂದು ಸಂದೇಶವನ್ನು  ಕಳುಹಿಸಲಾಗಿದೆ. ಇಂಗ್ಲೀಷ್ ಭಾಷೆಯಲ್ಲಿ ಸಂಭಾಷಣೆ ನಡೆದಿದೆ.

ಫೇಸ್ ಬುಕ್ ನಲ್ಲಿ ಫೇಕ್ ಅಕೌಂಟ್ ಮಾಡಿಕೊಂಡು ಹಣ ಕೇಳುತ್ತಿದ್ದಾರೆ, ಈ ರೀತಿಯ ಸಂದೇಶಗಳು ಬಂದರೆ ಪ್ರತಿಕ್ರಿಯೆ ನೀಡಬೇಡಿ ಎಂದು ರಕ್ಷಿತ್ ಶಿವರಾಂ ರವರು ಮನವಿ ಮಾಡಿಕೊಂಡಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!