ಬೆಳ್ತಂಗಡಿ: ಹಿಂದೂ ರಾಷ್ಟ್ರ ಜಾಗೃತಿ ಸಭೆ


ಬೆಳ್ತಂಗಡಿ : ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಮುರ ಶ್ರೀರಾಮ ಭಜನಾ ಮಂದಿರದಲ್ಲಿ ಮಾ.5 ರಂದು ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಆನಂದ ಗೌಡ ಇವರು ಮಾತನಾಡುತ್ತಾ , ಪ್ರತಿಯೊಬ್ಬ ಹಿಂದೂ, ಧರ್ಮ ಶಿಕ್ಷಣವನ್ನು ಪಡೆದು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಉಡುಪಿ ಜಿಲ್ಲೆಯ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ವಿಜಯಕುಮಾರ್ ಮಾತನಾಡುತ್ತಾ ಇಂದು ಪ್ರಪಂಚದಾದ್ಯಂತ ಇತರ ಮತದವರಿಗೆ ಅವರದ್ದೇ ಆದ ದೇಶಗಳಿವೆ. ಭಾರತ ದೇಶ ಹಿಂದೂ ದೇಶವಾಗಿದ್ದರು ಅದು ಈಗ ಜಾತ್ಯಾತೀತ ದೇಶವಾಗಿದೆ. ಇತರ ಮತೀಯರು ಭಾರತವನ್ನು 2047 ನೇ ಇಸವಿಯಲ್ಲಿ ಇಸ್ಲಾಂ ರಾಷ್ಟ್ರ ಮಾಡ್ತೇವೆ ಎಂದು ಹೇಳುತ್ತಿದ್ದಾರೆ ಅಲ್ಲದೆ ಅವರು ಅದಕ್ಕಾಗಿ ಪ್ರಯತ್ನ ಮಾಡುತ್ತಿದ್ದಾರೆ. ಹಿಂದೂ ಮುಖಂಡರ ಹತ್ಯೆ, ಲವ್ ಜಿಹಾದ್, ಮತಾಂತರ ,ಭಯೋತ್ಪಾದನೆ, ಭಾರತ ಆರ್ಥಿಕತೆಯನ್ನು ಬಡಮೇಲು ಮಾಡುವ ಹಲಾಲ್ ಜಿಹಾದ್,ಲ್ಯಾಂಡ್ ಜಿಹಾದ್ ಈ ರೀತಿ ಅವರ ಪ್ರಯತ್ನಗಳು ಆಗುತ್ತಿದ್ದರೂ ನಮ್ಮ ಹಿಂದೂಗಳು ಸ್ವಂತ ವಿಚಾರ ದಲ್ಲಿಯೇ ಮುಳುಗಿದ್ದೇವೆ. ಅದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿ ಹಿಂದೂ ರಾಷ್ಟ್ರ ಜಾಗೃತಿ ಸಭೆಗಳನ್ನು ಮಾಡಿ ಹಿಂದುಗಳಿಗೆ ಆತ್ಮಸ್ಥೈರ್ಯವನ್ನು ತುಂಬಿಸುವ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ಧರ್ಮಶಿಕ್ಷಣ. ಧರ್ಮ ಜಾಗೃತಿ, ಧರ್ಮ ರಕ್ಷಣೆ,ರಾಷ್ಟ್ರ ರಕ್ಷಣೆ ಕಾರ್ಯದಲ್ಲಿ ಹಿಂದುಗಳನ್ನು ಸಕ್ರಿಯ ಗೊಳಿಸಲಾಗುತ್ತಿದೆ ಎಂದು ಹೇಳಿದರು.
ಈ ಸಭೆಯಲ್ಲಿ ಸುಮಾರು 110 ಜನ ಉಪಸ್ಥಿತರಿದ್ದರು