ನಿನ್ನಿಕಲ್ಲು: ಶಾಟ್ ಸರ್ಕ್ಯೂಟ್: ಸುಟ್ಟುಕರಕಲಾದ ರಬ್ಬರ್ ಗುಡ್ಡ
ಉಜಿರೆ: ಬೆಳ್ತಂಗಡಿ ತಾಲೂಕಿನ , ಉಜಿರೆ ಗ್ರಾಮದ ನಿನ್ನಿಕಲ್ಲು ಬೈರ್ನೊಟ್ಟು ಎಂಬಲ್ಲಿ ಕರೆಂಟ್ ಟ್ರಾನ್ಸ್ಫರ್ ಪೆಟ್ಟಿಗೆಯಿಂದ ಶಾರ್ಟ್ ಸರ್ಕ್ಯೂಟ್ ಆಗಿ ರಬ್ಬರ್ ಗುಡ್ಡಕ್ಕೆ ಹಾಗೂ ಬಾಳೆ ತೋಟಕ್ಕೆ ಹಾನಿಯಾಗಿದ್ದು, ಸುಮಾರು 1 ವರೆ ಎಕರೆಗಿಂತಲೂ ಹೆಚ್ಚು ಪ್ರದೇಶ ಸುಟ್ಟು ಕರಕಲಾಗಿರುವ ಘಟನೆ ಮಾ.3 ರಂದು ಮಧ್ಯಾಹ್ನ ವೇಳೆ ಸಂಭವಿಸಿದೆ.
ಬೈರ್ನೊಟ್ಟು ನಿವಾಸಿ ಕೇಶವ ಹಾಗೂ ನವೀನ್ ಎಂಬವರ ರಬ್ಬರ್ ಗುಡ್ಡ ಹಾಗೂ ಬಾಳೆ ತೋಟ ಸುಟ್ಟು ಕರಕಲಾಗಿದ್ದು ಪೈಪ್ ಲೈನ್ ಗಳು ಸುಟ್ಟುಹೋಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ