ಕರಾವಳಿ ಭಾಗದಲ್ಲೂ ಹಬ್ಬಿದ ವೈರಸ್ ಹಾವಳಿ
ಕಳೆದ ಎರಡು ತಿಂಗಳುಗಳಿಂದ ರಾಜ್ಯದ ಬಹುತೇಕ ಕಡೆಯಲ್ಲಿ ಎಚ್ 3 ಎನ್2 ವೈರಸ್ ಕಾಣಿಸಿಕೊಂಡಿದ್ದು, ಕರಾವಳಿ ಭಾಗದಲ್ಲೂ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಶೀತ, ಜ್ವರ ಜೊತೆಗೆ ಒಂದೆರಡು ವಾರ ನಿರೆಂತರ ಕೆಮ್ಮು, ಕಫದಂತಹ ಸಮಸ್ಯೆಗಳು ಭಾಧಿಸುತ್ತಿದ್ದರೆ ಅದು ಎಚ್3 ಎನ್2 ವೈರಸ್ ನ ಲಕ್ಷಣ. ಬಿರು ಬಿಸಿಲು, ಹವಾಮಾನದಲ್ಲಿ ಬದಲಾವಣೆ ಈ ವೈರೆಸ್ ನ ವೇಗಕ್ಕೆ ಮತ್ತಷ್ಟು ಬೂಸ್ಟ್ ನೀಡಿದೆ. ಕಿರಿಯರಿಂದ ಹಿರಿಯರ ತನಕ ಈ ವೈರಸ್ ಭಾಧಿಸಿವೆ.
ಎಚ್3 ಎನ್2 ವೈರಸ್ ಲಕ್ಷಣಗಳೇನು?
ಕೆಮ್ಮು, ನೆಗಡಿ, ಗಂಟಲು ಕೆರೆತ, ತಲೆನೋವು, ಮೈ ಕೈ ನೋವು, ಜ್ವರ.ಅಝಿತ್ರೋಮೈಸಿನ್ ಮತ್ತು ಅಮೊಕ್ಸಿಕ್ಲಾವ್ ನಂತಹ ಆ್ಯಂಟಿ ಬಯಾಟಿಕ್ ಗಳನ್ನು ಅನಗತ್ಯ ಸೇವಿಸದಂತೆ ಐಸಿಎಂ ಆರ್ ಎಚ್ಚರಿಕೆ ನೀಡಿದೆ.
ಹೆಚ್ಚಾಗಿ ಯಾರಿಗೆ ಸಮಸ್ಯೆ ?
ಮಕ್ಕಳಿಗೆ ಹಾಗೂ ಹಿರಿಯರಿಗೆ ಹೆಚ್ಚು ಸಮಸ್ಯೆ ಉಂಟುಮಾಡುತ್ತದೆ. ಇವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಶೀತ, ಜ್ವರ, ಕೆಮ್ಮು ಪದೇ ಪದೇ ಬರುವ ಸಾಧ್ಯತೆ ಇರುತ್ತದೆ. ಮಕ್ಕಳು ಶಾಲೆಯಲ್ಲಿ ಹತ್ತಿರ ಕುಳಿತುಕೊಳ್ಳುವುದರಿಂದ ಈ ವೈರಸ್ ಬೇಗನೆ ಆವರಿಸಿಕೊಳ್ಳುವ ಸಾಧ್ಯತೆ ಇದೆ.
ಏನು ಮಾಡಬೇಕು?
1) ಆಗಾಗ ಸಾಬೂನು ಮತ್ತು ನೀರಿನಿಂದ ಕೈ ತೊಳೆದುಕೊಳ್ಳುತ್ತಿರಿ
2) ಮಾಸ್ಕ್ ಧರಿಸಬೇಕು
3) ಕೆಮ್ಮುವಾಗ ಮತ್ತು ಸೀನುವಾಗ ಬಾಯಿ ಹಾಗೂ ಮೂಗಿಗೆ ಬಟ್ಟೆ ಇಟ್ಟುಕೊಳ್ಳಿ
4) ಸಾಕಷ್ಟು ನೀರು ಕುಡಿಯಿರಿ.
5)ಆದಷ್ಟು ಬೆಚ್ಚಗಿನ ಆಹಾರ ಸೇವಿಸಬೇಕು.
6)ನೆಲ್ಲಿಕಾಯಿ, ಅಶ್ವಗಂಧ, ಪಿಪ್ಪಲಿ, ಕಾಳುಮೆಣಸು ಹೆಚ್ಚಾಗಿ ಬಳಕೆ ಮಾಡುವುದರಿಂದ ನಿಯಂತ್ರಣ ಸಾಧ್ಯ.