• April 26, 2025

ಧರ್ಮಸ್ಥಳ: ವೈಯಕ್ತಿಕ ವೀಡಿಯೋ ವೈರಲ್ ಮಾಡುವುದಾಗಿ ಅಪರಿಚಿತನಿಂದ ಬೆದರಿಕೆ: ಹೆದರಿದ ಯುವಕ ಆತ್ಮಹತ್ಯೆಗೆ ಯತ್ನ

 ಧರ್ಮಸ್ಥಳ: ವೈಯಕ್ತಿಕ ವೀಡಿಯೋ ವೈರಲ್ ಮಾಡುವುದಾಗಿ ಅಪರಿಚಿತನಿಂದ  ಬೆದರಿಕೆ: ಹೆದರಿದ ಯುವಕ ಆತ್ಮಹತ್ಯೆಗೆ ಯತ್ನ

 

ಬೆಳ್ತಂಗಡಿ: ವೈಯಕ್ತಿಕ ವೀಡಿಯೋ ವೈರಲ್ ಮಾಡುವುದಾಗಿ ಅಪರಿಚಿತನೋರ್ವ ಬೆದರಿಕೆಯೊಡ್ಡಿದ್ದ ಪರಿಣಾಮ ಬಿಕಾಂ ವಿದ್ಯಾರ್ಥಿ ಹೆದರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಧರ್ಮಸ್ಥಳ ದಲ್ಲಿ ನಡೆದಿದೆ.

ಆತ್ಮಹತ್ಯೆ ಗೆ ಯತ್ನಿಸಿದ ಯುವಕ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ನಿವಾಸಿ , ಹರ್ಷಿತ್ .

ಇನ್ಸ್ಟಾ ಗ್ರಾಂ ನಲ್ಲಿ ಹರ್ಷಿತ್ ಗೆ ಅಪರಿಚಿತ ವ್ಯಕ್ತಿಯೋರ್ವನ ಪರಿಚಯವಾಗಿದ್ದು, ಆತನೊಂದಿಗೆ ಚಾಟಿಂಗ್ ಮತ್ತು ವೀಡಿಯೋ ಕಾಲ್ ಮಾಡುತ್ತಿದ್ದರು. ಇತ್ತೀಚೆಗೆ ಅಪರಿಚಿತ ವ್ಯಕ್ತಿ ಹರ್ಷಿತ್ ಗೆ ಕರೆ ಮಾಡಿ ನಿನ್ನ ವೈಯಕ್ತಿಕ ವೀಡಿಯೋ ನನ್ನಲ್ಲಿದೆ ನನಗೆ 11 ಸಾವಿರ ರೂ ನೀಡದಿದ್ದಲ್ಲಿ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ.

ಬೆದರಿಕೆಗೆ ಹೆದರಿದ ಹರ್ಷಿತ್ ಹಣ ಹೊಂದಿಸಲು ಪ್ರಯತ್ನಿಸಿದ್ದಾನೆ ಅದು ಸಾಧ್ಯವಾಗದೇ ಇದ್ದಾಗ ಮನ ನೊಂದು ಇಲಿ ಪಾಷಾಣ ಸೇವಿಸಿದ್ದಾರೆ.

ಮಾಹಿತಿ ತಿಳಿದು ತಕ್ಷಣ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related post

Leave a Reply

Your email address will not be published. Required fields are marked *

error: Content is protected !!