• July 15, 2024

ಬೆಳ್ತಂಗಡಿ: ಜಯಾನಂದ ಪಿಲಿಕಲರವರಿಗೆ ಹರೀಶ್ ಪೂಂಜರಿಂದ ಬೆದರಿಕೆ ಆರೋಪ: ಶಾಸಕರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

 ಬೆಳ್ತಂಗಡಿ: ಜಯಾನಂದ ಪಿಲಿಕಲರವರಿಗೆ ಹರೀಶ್ ಪೂಂಜರಿಂದ ಬೆದರಿಕೆ ಆರೋಪ: ಶಾಸಕರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಬೆಳ್ತಂಗಡಿ : ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ,ಮಲೆಕುಡಿಯ ಸಮುದಾಯದ ಯುವ ನಾಯಕ ಜಯಾನಂದ ಪಿಲಿಕಲ ಇವರಿಗೆ ಕಪಾಳ ಮೋಕ್ಷ ಮಾಡುವ ಬೆದರಿಕೆ ಒಡ್ಡಿ ನಿಂದಿಸಿ ಸಾರ್ವಜನಿಕವಾಗಿ ಅವಮಾನ ಮಾಡಿದ ಆರೋಪದಡಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಬೆಳ್ತಂಗಡಿ ಪೋಲಿಸ್ ಠಾಣೆಯ ಮುಂಭಾಗ ಜ.30 ರಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮಲೆಕುಡಿಯ ಸಮುದಾಯದ ಸದಸ್ಯರಿಂದ ಪ್ರತಿಭಟನೆ ನಡೆಯಿತು.

ಈ ಪ್ರತಿಭಟನೆಯಲ್ಲಿ ಬೆಳ್ತಂಗಡಿ ಮಾಜಿ ಸಚಿವರು ಗಂಗಾಧರ್ ಗೌಡ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರು ರಂಜನ್ ಗೌಡ, ಬ್ಲಾಕ್ ಕಾಂಗ್ರೆಸ್ ಮುಖಂಡ ಶೈಲೇಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವ ರಾಮ್, ಬಿ ಎಂ ಭಟ್ ವಕೀಲರು ಬೆಳ್ತಂಗಡಿ, ಮನೋಹರ್, ಜಯಾನಂದ ಪಿಲಿಕಲ, ಹಾಗೂ ಮಲೆಕುಡಿಯ ಸಮುದಾಯದ ಸದಸ್ಯರು ಭಾಗವಹಿಸಿದ್ದರು.

Related post

Leave a Reply

Your email address will not be published. Required fields are marked *

error: Content is protected !!