ಜ.12 ರಂದು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಪ್ರಾಂತ್ಯ ಸಿ ವಲಯ 15 ಮತ್ತು ರೆಡ್ ಕ್ರಾಸ್ ಘಟಕ ಸ.ಪ.ಪೂ ಕಾಲೇಜು ನಡ ಇದರ ಸಹಭಾಗಿತ್ವದಲ್ಲಿ ನರೇಂದ್ರ ನಮನ ಕಾರ‍್ಯಕ್ರಮ
ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಮಂಜುಶ್ರೀ ಪ್ರಾಂತ್ಯ ಸಿ ವಲಯ 15 ಮತ್ತು ರೆಡ್ ಕ್ರಾಸ್ ಘಟಕ ಸ.ಪ.ಪೂ ಕಾಲೇಜು ನಡ ಇದರ ಸಹಭಾಗಿತ್ವದಲ್ಲಿ ವಿವೇಕಾನಂದರ ಜಯಂತಿ ಪ್ರಯುಕ್ತ, ನರೇಂದ್ರ ನಮನ ಕಾರ‍್ಯಕ್ರಮವು ಜ.12 ರಂದು ಸ.ಪ.ಪೂ ಕಾಲೇಜು ನಡ ಇಲ್ಲಿ ಜರುಗಲಿದೆ.
ಪೃಥ್ವೀಶ್ ಧರ್ಮಸ್ಥಳ ಇವರು ಪ್ರೇರಣಾದಾಯಕ ಮಾತುಗಳನ್ನಾಡಲಿದ್ದಾರೆ. ಕಾರ‍್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸ.ಪ.ಪೂ ಕಾಲೇಜು ನಡ ಇಲ್ಲಿಯ ಪ್ರಾಂಶುಪಾಲರು ಚಂದ್ರಶೇಖರ್ ಹಾಗೂ ರೆಡ್ ಕ್ರಾಸ್ ಘಟಕ ನಿರ್ದೆಶಕರು ಮೋಹನ್ ಗೌಡ ಭಾಗಿಯಾಗಲಿದ್ದಾರೆ.
ಈ ಸಂಧರ್ಭದಲ್ಲಿ ನಿಸ್ವಾರ್ಥದ ಪರಿಪೂರ್ಣ ವ್ಯಕ್ತಿತ್ವ ಹೊಂದಿದ ಬೆಳ್ತಂಗಡಿ ಪ.ಪಂ ಉಪಾಧ್ಯಕ್ಷರಾದ ಜಯಾನಂದ ಗೌಡ ಇವರಿಗೆ ಅಭಿನಂದನಾ ಕಾರ್ಯಕ್ರಮ ಜರುಗಲಿದೆ.