ಕಾಶಿಬೆಟ್ಟು: ಅರಳಿ ಮಿತ್ರ ಯುವಕ – ಯುವತಿ ಮಂಡಲದಿಂದ ಪ್ರತಿಭಾ ಸಂಗಮ ಕಾರ್ಯಕ್ರಮ: ಸನ್ಮಾನ


ಬೆಳ್ತಂಗಡಿ; ಕಾಶಿಬೆಟ್ಟು ಅರಳಿ ಎಂಬಲ್ಲಿ ಕಾರ್ಯಾಚರಿಸುತ್ತಿರುವ ಮಿತ್ರ ಯುವಕ ಮಂಡಲ(ರಿ) ಮತ್ತು ಮಿತ್ರ ಮಹಿಳಾ ಮಂಡಳಿ ಅರಳಿ ಉಜಿರೆ ಇದರ ವತಿಯಿಂದ 26ನೇ ವರ್ಷದ ಪ್ರತಿಭಾ ಸಂಗಮ 2023 ಎಂಬ ಕಾರ್ಯಕ್ರಮವು ನಡೆಯಿತು
ಕಾರ್ಯಕ್ರಮದ ಉದ್ಘಾಟನನೆಯನ್ನು ರೋಟರಿ ಕ್ಲಬ್ ಅಧ್ಯಕ್ಷೆ ಮನೋರಮಾ ಭಟ್ ನೆರವೇರಿಸಿದರು. ಸಭೆಯ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ದಿನೇಶ್ ಅಲ್ಯೋಟ್ಟು ವಹಿಸಿಕೊಂಡಿದ್ದರು.
ಮುಖ್ಯ ಅತಿಥಿಗಾಳಾಗಿ ಶಿವಪ್ರಸಾದ್ ಸಾಮರಸ್ಯ ಮತ್ತು ಪ್ರಭಾಕರ್ ಕೆ ಕಾಶಿಬೆಟ್ಟು ಇವರು ಉಪಸ್ಥಿತರಿದ್ದರು.
ಉದ್ಯಮ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ರಾಜ್ಯ ಮಟ್ಟದ “ವಿಜಯ ರತ್ನ” ಪ್ರಶಸ್ತಿಯೊಂದಿಗೆ ಪುರಸ್ಕೃತ ರಾದುದದಕ್ಕೆ, ಮತ್ತು ಅವರು ನೇತೃತ್ವ ನೀಡುತ್ತಿರುವ “ಬದುಕು ಕಟ್ಟೋಣ ಬನ್ನಿ” ತಂಡಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿರುವ ಹಿನ್ನೆಲೆಯಲ್ಲಿ ಉಜಿರೆ ಲಕ್ಷ್ಮೀ ಗ್ರೂಪ್ಸ್ ಮಾಲಿಕ ಕೆ ಮೋಹನ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಮಿತ್ರ ಮಹಿಳಾ ಮಂಡಳಿಯ ಅಧ್ಯಕ್ಷೆ ಪ್ರತಿಮಾ ದಿನೇಶ್ ಗೌಡ ಉಪಸ್ಥಿತರಿದ್ದರು.
ವಿನಯ್ ಸಾಲಿಯಾನ್ ಸ್ವಾಗತಿಸಿದರು. ಕ್ರೀಡಾಕೂಟದ ಬಹುಮಾನ ವಿತರಣೆ ನಡೆಯಿತು. ನಿಶಿತ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಭವ್ಯಾ ಅಲ್ಯೋಟ್ಟು ಧನ್ಯವಾದವಿತ್ತರು.
ಬಳಿಕ ಪ್ರತಿಭಾ ಸಂಗಮದ ಅಂಗವಾಗಿ ಮಕ್ಕಳ ಗಾಯನ, ಸುಂದರವಾದ ಜಾನಪದ ನೃತ್ಯ, ನಾಟಕ, ನೃತ್ಯ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.