ಉಜಿರೆ: ರಿಕ್ಷಾ ಹಾಗೂ ಬೊಲೆರೋ ಗಾಡಿ ಮುಖಾಮುಖಿ ಡಿಕ್ಕಿ: ಆಟೋ ಚಾಲಕ ಗಂಭೀರ
ಉಜಿರೆ: ಉಜಿರೆ ವ್ಯಾಪ್ತಿಯ ಓಡಾಲ ಎಂಬಲ್ಲಿ ಆಟೋ ಹಾಗೂ ಬೊಲೆರೋ ವಾಹನ ಮುಖಾಮುಖಿ ಡಿಕ್ಕಿ ಹೊಡೆದಿರುವ ಘಟನೆ ಡಿ.28 ರಂದು ಸಂಜೆ ವೇಳೆ ನಡೆದಿದೆ.
ಪರಿಣಾಮ ಆಟೋ ಮುಂಭಾಗ ಜಖಂ ಗೊಂಡಿದ್ದು ಆಟೋ ಚಾಲಕ ಗಂಭಿರ ಗಾಯಗೊಂಡಿದ್ದಾರೆ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬೊಲೆರೋ ವಾಹನದ ಮುಂಭಾಗ ನಜ್ಜುಗುಜ್ಜಾಗಿದ್ದು ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.