ವಿಟ್ಲ: ಆಟೋ ರಿಕ್ಷಾದಲ್ಲಿ ಅಕ್ರಮ ಗೋಮಾಂಸ ಪತ್ತೆ: ಸುಮಾರು 20 ಕೆಜಿ ಗೋಮಾಂಸ ಸಾಗಾಟ: ಪೊಲೀಸರು ದಾಳಿ ನಡೆಸುತ್ತಿದ್ದಂತೆ ಆಟೋ ಬಿಟ್ಟು ಪರಾರಿಯಾದ ಆರೋಪಿ

ವಿಟ್ಲ: ಮೇಗಿನ ಪೇಟೆ ಎಂಬಲ್ಲಿ ಆಟೋ ರಿಕ್ಷಾದ ಸೀಟಿನಡಿಯಲ್ಲಿ ಸುಮಾರು 20 ಕೆಜಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ಮಾಹಿತಿ ತಿಳಿದ ವಿಟ್ಲ ಠಾಣಾ ಪೊಲೀಸರು ದಾಳಿ ನಡೆಸಿದ ಘಟನೆ ಡಿ.28ರಂದು ನಡೆದಿದೆ.
ಪೊಲೀಸರು ಆಟೋರಿಕ್ಷಾದಲ್ಲಿ ಗೋಮಾಂಸವಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಆಟೋ ರಿಕ್ಷಾದ ಸೀಟಿನಡಿಯಲ್ಲಿ ಗೋಮಾಂಸದ ಕಟ್ಟು ಪತ್ತೆಯಾಗಿದೆ. ಸಾಲೆತ್ತೂರು ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಆಟೋ ರಿಕ್ಷವನ್ನುಪೊಲೀಸರು ನಿಲ್ಲಿಸುವಂತೆ ಸೂಚನೆ ನೀಡಿದಾಗ ,
20 ಕೆಜಿ ಎಷ್ಟು ದಿನದ ಮಾಂಸ ಪತ್ತೆಯಾಗಿದೆ ದಾಳಿ ಬೇಳೆ ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ ಪರಾರಿಯಾದ ಆಟೋ ರಿಕ್ಷಾ ಚಾಲಕರ ನಿವಾಸಿ ಗುರುತಿಸಲಾಗಿದೆ
ಸಾಲೆತ್ತೂರು ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಆಟೋ ರಿಕ್ಷಾವನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಅದರ ಚಾಲಕ ಆಟೋರಿಕ್ಷಾ ವನ್ನು ನಿಲ್ಲಿಸಿ ರಿಕ್ಷಾದಿಂದ ಹಿಳಿದು ಓಡಿ ಹೋಗಿದ್ದಾನೆ. ಆಟೋ ರಿಕ್ಷಾವನ್ನು ಪರಿಶೀಲಿಸಿದಾಗ ಅದರ ಚಾಲಕನ ಸೀಟಿನಡಿಯ ಭಾಗದಲ್ಲಿ ನೋಡಿದಾಗ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಒಂದು ಕೆಜಿ 10 ಕಟ್ಟು ದನದ ಹಸಿಮಾಂಸ ಐದು ಕೆಜಿಯ ಎರಡು ಕಟ್ಟು ಹಸಿ ಮಾಂಸ ಕಂಡು ಬಂದಿರುತ್ತದೆ ಅಂದಾಜು ಮೌಲ್ಯ ಐವತ್ತು ಸಾವಿರ ರೂಪಾಯಿ ಆಗಬಹುದು.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಖಾದಿ 2022 ರಂತೆ ಪ್ರಕರಣ ದಾಖಲಾಗಿದೆ.