• November 2, 2024

ವಿಟ್ಲ:ಧರ್ಮನಗರ ಸಿದ್ದಿವಿನಾಯಕ ಯುವಕ ಮಂಡಲ ವತಿಯಿಂದ ಸೇವಾನಿಧಿ ವಿತರಣೆ

 ವಿಟ್ಲ:ಧರ್ಮನಗರ ಸಿದ್ದಿವಿನಾಯಕ ಯುವಕ ಮಂಡಲ ವತಿಯಿಂದ ಸೇವಾನಿಧಿ ವಿತರಣೆ

 

ಹಲವಾರು ಸೇವಾಚಟುವಟಿಕೆಗಳಿಂದ ಹೆಸರುವಾಸಿಯಾಗಿರುವ ಅನೇಕ ಯುವಕ ಮಂಡಲಗಳಲ್ಲಿ ಸಿದ್ದಿವಿನಾಯಕ ಯುವಕ ಮಂಡಲ ಧರ್ಮನಗರವೂ ಒಂದು. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸೇವಾನಿಧಿಯನ್ನು ನೀಡಿ ಅವರ ಬಾಳಿಗೆ ಬೆಳಕಾಗುವ ಕೆಲಸವನ್ನು ಕಳೆದ ಎರಡು ವರ್ಷದಿಂದ ಯುವ ತಂಡ ಮಾಡುತ್ತಿದ್ದು,ಸಿದ್ದಿವಿನಾಯಕ ಯುವಕ ಮಂಡಲದ ಆರನೇ ಸೇವಾಯೋಜನೆಯಾಗಿ,ನಿರ್ಮಾಣ ಹಂತದಲ್ಲಿರುವ ಕಾರಣಿಕ ಕ್ಷೇತ್ರ ಶ್ರೀ ವೈದ್ಯನಾಥ, ಮಲರಾಯ ಮತ್ತು ಸಪರಿವಾರ ದೈವಗಳ ಸನ್ನಿಧಿ ಮಲರಾಯ ಜೇರ-ಧರ್ಮನಗರ ಇಲ್ಲಿನ ಮುಂದಿನ ಹಂತದ ಕೆಲಸಕಾರ್ಯಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಯುವಕ ಮಂಡಲದ ವತಿಯಿಂದ ಸೇವಾನಿಧಿ ವಿತರಣೆಯು ಏ.14ರಂದು ದೈವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ವಿಟ್ಲ ಸೀಮೆಯ ಗುರಿಕ್ಕಾರರಾದ ಕೆ. ಟಿ. ವೆಂಕಟೇಶ್ವರ ನೂಜಿ, ದೈವಸ್ಥಾನ ಸಮಿತಿಯ ಅಧ್ಯಕ್ಷರಾದ ಸತೀಶ್ ಶೆಟ್ಟಿ ಮೂಡೈಮಾರು,ಯುವಕ ಮಂಡಲದ ಗೌರವಾಧ್ಯಕ್ಷರಾದ ಜನಾರ್ಧನ ಕಾರ್ಯಡಿ, ಅಧ್ಯಕ್ಷರಾದ ರಂಜಿತ್ ನೆಕ್ಕರೆ, ಮತ್ತು ಯುವಕ ಮಂಡಲದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!