ಡಿ.31ರಂದು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕೊರಂಜದಲ್ಲಿ ಶಾಲಾ ವಾರ್ಷಿಕೋತ್ಸವ
ಗೇರುಕಟ್ಟೆ : ಶಾಲಾ ಶಿಕ್ಷಣ & ಸಾಕ್ಷರತಾ ಇಲಾಖೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ,ಕೊರಂಜ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಇವುಗಳ ಜಂಟಿ ಆಶ್ರಯದಲ್ಲಿ ಶಾಲಾ ವಾರ್ಷಿಕೋತ್ಸವವು ಡಿ.31ರಂದು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕೊರಂಜ ಇಲ್ಲಿ ಜರುಗಲಿದೆ.
ಡಿ.31 ರಂದು ಬೆಳಗ್ಗೆ ಬಿ.ಹರೀಶ್ ಕುಮಾರ್ ಧ್ವಜಾರೋಹಣ ಗೈಯಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಳಿಯ ಗ್ರಾ.ಪಂ ಉಪಾಧ್ಯಕ್ಷೆ ಕುಸುಮ ಎನ್ ಬಂಗೇರ ವಹಿಸಲಿದ್ದು. ಮುಖ್ಯ ಅತಿಥಿಗಳಾಗಿ ಕಳಿಯ ಗ್ರಾ.ಪಂ ಸದಸ್ಯರಾದ ಯಶೋಧರ ಶೆಟ್ಟಿ ಕೊರಂಜ, ದಿವಾಕರ ಎಂ, ಸುಧಾಕರ ಮಜಲು, ಮೋಹಿನಿ, ವಿಜಯ ಗೌಡ, ಲತೀಫ್ ಪರಿಮ, ಪುಷ್ಪಾ ಬಿ, ಇಂದಿರಾ, ಶಕುಂತಳಾ, ಸುರೇಂದ್ರ ಕುಮಾರ್ ಜೈನ್ ಕಳಿಯಬೀಡು, ಕಳಿಯ ಹಾಲು ಉತ್ಪಾದಕರ ಸೇವಾ ಸಹಕಾರ ಸಂಘದ ಅಧ್ಯಕ್ಷರು ಜನಾರ್ಧನ ಗೌಡ ಕೆ, ಗುರುವಾಯನಕೆರೆ ಕ್ಲಸ್ಟರ್ ಸಿ.ಆರ್ ಪಿ ರಾಜೇಶ, ಗೇರುಕಟ್ಟೆ ಸ್ನೇಹ ಸಂಗಮ ಆಟೋ ಚಾಲಕ ಮಾಲಕರ ಸಂಘ ಅಧ್ಯಕ್ಷರು ವಸಂತ ಶೆಟ್ಟಿ ಭಾಗಿಯಾಗಲಿದ್ದಾರೆ
ಕುವೆಟ್ಟು ಕ್ಷೇತ್ರ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಮಮತಾ ಶೆಟ್ಟಿ ನೀರಿನ ಘಟಕವನ್ನು ಉದ್ಘಾಟಿಸಲಿದ್ದಾರೆ.
ಗೌರವಾರ್ಪಣೆ
ಓಡಿಲ್ನಾಳ ಸ.ಉ.ಪ್ರಾ ಶಾಲೆ ಮುಖ್ಯಶಿಕ್ಷಕಿ ಉಷಾ ಪಿ ಉಚ್ಚಿಲ್, ಕಟ್ಟದ ಬೈಲು ಸ.ಹಿ.ಪ್ರಾ ಶಾಲೆ ಶಿಕ್ಷಕರು, ರಾಜ್ಯಪ್ರಶಸ್ತಿ ಪುರಸ್ಕೃತರು ಎಡ್ವರ್ಡ್ ಡಿಸೋಜಾ, ಗೇರುಕಟ್ಟೆ ಸರಕಾರಿ ಪ್ರೌಢಶಾಲೆ ಶಿಕ್ಷಕ, ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಅಜಿತ್ ಕುಮಾರ್ ಕೆ, ಬೊಳ್ಳುಕಲ್ಲು ಸ.ಕಿ.ಪ್ರಾ.ಶಾಲೆ ಶಿಕ್ಷಕರು, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿವಾನಂದ ಭಂಡಾರಿ, ರಕ್ತೇಶ್ವರಿ ಪದವು ಸ.ಕಿ.ಪ್ರಾ ಶಾಲೆ ಶಿಕ್ಷಕಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಚೈತ್ರಪ್ರಭಾ ಶ್ರೀಶಾಂ, ಪ್ರಥಮ ದರ್ಜೆ ಸಹಾಯಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕುಂದಾಪುರದ ಆರತಿ ಕೆ ಹಾಗೂ ವಿವಿಧ ಕ್ಷೇತ್ರದ ಸಾಧಕರು, ದಾನಿಗಳಿಗೆ ಗೌರವಾರ್ಪಣೆ ನಡೆಯಲಿದೆ.
ಸಂಜೆ 5.30 ರಿಂದ ಗೇರುಕಟ್ಟೆ, ಬಟ್ಟೆಮಾರು, ಕುಂಟಿನಿ, ಎರುಕಡಪು ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ನೃತ್ಯ ವೈಭವ ನಡೆಯಲಿದೆ.
ಸಂಜೆ 7 ಗಂಟೆಯಿಂದ ವಾರ್ಷಿಕೋತ್ಸವ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. ಉದ್ಘಾಟನೆಯನ್ನು ಶಾಸಕರಾದ ಹರೀಶ್ ಪೂಂಜ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಳಿಯ ಗ್ರಾ.ಪಂ ಅಧ್ಯಕ್ಷೆ ಸುಭಾಷಿಣಿ ಜನಾರ್ಧನ ಗೌಡ ಕೆ ವಹಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಶುಭಾಶೀರ್ವಾದವನ್ನು ನೀಡಲಿದ್ದಾರೆ.
ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ಮೇಲ್ಛಾವಣಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಕಳಿಯ ಗ್ರಾ.ಪಂ ಸದಸ್ಯರಾದ ಕೆ.ಎಂ ಅಬ್ದುಲ್ ಕರೀಂ, ಮರೀಟಾ ಪಿಂಟೋ, ಶ್ವೇತಾ ಕೆ, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಹೆಚ್ ಎಸ್, ವೃತ್ತ ನಿರೀಕ್ಷಕರು ಶಿವಕುಮಾರ್, ಬೆಸ್ಟ್ ಪೌಂಡೇಶನ್ ಅಧ್ಯಕ್ಷರು ರಕ್ಷಿತ್ ಶಿವರಾಂ, ಕಳಿಯ ಸಿ.ಎ ಬ್ಯಾಂಕ್ ಅಧ್ಯಕ್ಷರು ವಸಂತ ಮಜಲು, ಸಮನ್ವಯಾದಿಕಾರಿಗಳಾದ ಶಂಭು ಶಂಕರ್, ನವಶಕ್ತಿ ರಾಜೇಶ್ ಶೆಟ್ಟಿ, ಉದ್ಯಮಿ ಹೇಮಂತ್ ಕುಮಾರ್, ಚಂದ್ರಕಾಮತ ನಿಡ್ಡಾಜೆ, ಭುವನೇಶ್ವರ ಜಿ, ಜನಾಬ್ ಅಬೂಬಕ್ಕರ್ ಹಾಜಿ ಪೆಲತ್ತಳಿಕೆ, ಯಾದವ ಗೌಡ, ವಂ|ಫಾ| ವಿನೋದ್ ಮಸ್ಕರೇನ್ಹಸ್, ಪ್ರೊ. ಮಧೂರು ಮೋಹನ ಕಲ್ಲೂರಾಯ, ಸಂತೋಷ್ ಪಾಟೀಲ್ ಭಾಗಿಯಾಗಲಿದ್ದಾರೆ.
ಈ ಸಂದರ್ಭದಲ್ಲಿ ಅಪರ ಕಾರ್ಯದರ್ಶಿ ಕೆ.ಎ ಹಿದಾಯತುಲ್ಲ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ದಿವಾಕರ ಆಚಾರ್ಯ ಗೇರುಕಟ್ಟೆ, ಕುದ್ರೋಳಿ ಉಪನ್ಯಾಸಕರು ಕೇಶವ ಬಂಗೇರ ಬಿ, ಕೊರಂಜ ಶಾಲೆಯ ನಿವೃತ್ತ ಶಿಕ್ಷಕಿ ವನಜಾ ಕುಮಾರಿ ಇವರಿಗೆ ಗೌರವಾರ್ಪಣೆ ನಡೆಯಲಿದೆ.
ರಾತ್ರಿ 7.30 ರಿಂದ ಶಾಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ನೃತ್ಯ ವೈಭವ ಕಾರ್ಯಕ್ರಮ ಜರುಗಲಿದೆ. ರಾತ್ರಿ 9 ರಿಂದ ಅಮ್ಮ ಕಲಾವಿದೆರ್ ಕುಡ್ಲ ವತಿಯಿಂದ ಅಲೇ..! ಬುಡಿಯೆರ್ ಗೆ ನಾಟಕ ಜರುಗಲಿದೆ.