• September 12, 2024

ಮಕ್ಕಳ ಭಾಗ್ಯವೇ ಇಲ್ಲದ ದಂಪತಿಗಳ ಪಾಲಿಗೆ ವರದಾನವಾದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿ: ಒಂದು ವರ್ಷದೊಳಗೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ: ಹರಕೆ ತೀರಿಸಲು ಓಡೋಡಿ ಬಂದ ದಂಪತಿಗಳು

 ಮಕ್ಕಳ ಭಾಗ್ಯವೇ ಇಲ್ಲದ  ದಂಪತಿಗಳ ಪಾಲಿಗೆ ವರದಾನವಾದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿ: ಒಂದು ವರ್ಷದೊಳಗೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ: ಹರಕೆ ತೀರಿಸಲು ಓಡೋಡಿ ಬಂದ ದಂಪತಿಗಳು

ಆರಿಕೋಡಿ: ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಆರಿಕೋಡಿಯಲ್ಲಿ ನೆಲೆನಿಂತ ಶ್ರೀ ಚಾಮುಂಡೇಶ್ವರಿ ತಾಯಿಯನ್ನು ನೆನೆದರೆ ಭಕ್ತರ ಕಷ್ಟಗಳು ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದೆ.

ಅದರಂತೆ ಕಷ್ಟ ಎಂದು ಬಂದ ಭಕ್ತರ ಪಾಲಿಗೆ ವರದಾನವಾಗುತ್ತಾಳೆ ಈ ತಾಯಿ ಎಂದರೆ ತಪ್ಪಾಗಲಾರದು

ಹೌದು ಬೆಳ್ತಂಗಡಿ ತಾಲೂಕಿನ ಕೊಲೋಡಿ ಮನೆಯ ರವಿ ಮತ್ತು ಅವರ ಧರ್ಮಪತ್ನಿ ಸುಮಂಗಲ ದಂಪತಿಗಳು ಸುಮಾರು 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರ ದಾಂಪತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಕೂಡಿ ಬರಲಿಲ್ಲ. ಆ ಸಂದರ್ಭದಲ್ಲಿ ಎಲ್ಲಾ ದೈವ ದೇವರಿಗೆ ಹರಕೆ ನೀಡಿದರೂ ಯಾವುದೇ ಪ್ರಯೋಜನವಾಗದೇ ಇದ್ದಾಗ ಇತಿಹಾಸ ಪ್ರಸಿದ್ದ ಕ್ಷೇತ್ರವಾಗಿರುವ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದು ದೇವಿ ಚಾಮುಂಡೇಶ್ವರಿ ಯ ಅಭಯದ ನುಡಿಯಲ್ಲಿ ವಿಚಾರಣೆ ಮಾಡಿದ್ದಾರೆ.

ಸಂಸಾರದಲ್ಲಿದ್ದ ಸಮಸ್ಯೆಯನ್ನು ದೂರ ಮಾಡಿ ನಿಮ್ಮ ದಾಂಪತ್ಯದಲ್ಲಿ ಒಂದು ವರ್ಷದೊಳಗಡೆ ಮುದ್ದಾದ ಮಗು ಜನನವಾಗುತ್ತದೆ ಎಂದು ಶ್ರೀ ದೇವಿ ಅಭಯವನ್ನು ನೀಡಿದ್ದಾಳೆ.

ಕೊಟ್ಟ ಮಾತಿನ ಪ್ರಕಾರವಾಗಿ ಅವರ ದಾಂಪತ್ಯದಲ್ಲಿ ಗಂಡು ಮಗುವಿನ ಜನನ ಒದಗಿ ಬಂತು. ಆ ಪ್ರಯುಕ್ತ ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೆ ದಂಪತಿಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ

Related post

Leave a Reply

Your email address will not be published. Required fields are marked *

error: Content is protected !!