• July 27, 2024

ಹಿಂದೂ ಧರ್ಮದ ಬಗ್ಗೆ ಜಾಲತಾಣಗಳಲ್ಲಿ ನಿಂದನೆ ಪೋಸ್ಟ್: ಆರೋಪಿಯನ್ನು ಬಂಧಿಸುವಂತೆ ವಿ.ಹಿಂ ಪ ಬಜರಂಗದಳ, ಬೆಳ್ತಂಗಡಿ ಪ್ರಖಂಡ ನೇತೃತ್ವದಲ್ಲಿ ಪ್ರತಿಭಟನೆ

 ಹಿಂದೂ ಧರ್ಮದ ಬಗ್ಗೆ ಜಾಲತಾಣಗಳಲ್ಲಿ ನಿಂದನೆ ಪೋಸ್ಟ್: ಆರೋಪಿಯನ್ನು ಬಂಧಿಸುವಂತೆ ವಿ.ಹಿಂ ಪ ಬಜರಂಗದಳ, ಬೆಳ್ತಂಗಡಿ ಪ್ರಖಂಡ ನೇತೃತ್ವದಲ್ಲಿ ಪ್ರತಿಭಟನೆ

ಬೆಳ್ತಂಗಡಿ: ಉಪವಲಯ ಅರಣ್ಯಾಧಿಕಾರಿ ಸಂಜೀವ ಎಂಬವರು ಭಜನೆ ಮತ್ತು ಭಜಕರ ಕುರಿತು ಹಾಗೂ ಹಿಂದೂ ಧರ್ಮಕ್ಕೆ ಧಕ್ಕೆ ಬರುವಂತೆ ನಿಂದನೆಯ ಪೋಸ್ಟ್ ಗಳನ್ನು ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಹಿಂದುಗಳ ಭಾವನೆಗೆ ಧಕ್ಕೆ ತಂದಿರುವ ವಿಚಾರವಾಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಸಹ ಬಂಧನ ಮಾಡದೇ ಕೆಲಸದಿಂದ ವಜಾ ಯಾವುದೇ ಕ್ರಮ ಕೈಗೊಳ್ಳದ ಕಾರಣ ಇಂದು ವಿ.ಹಿಂ ಪ ಬಜರಂಗದಳ, ಬೆಳ್ತಂಗಡಿ ಪ್ರಖಂಡ ಇದರ ನೇತೃತ್ವದಲ್ಲಿ ಬೆಳ್ತಂಗಡಿ ಠಾಣೆಯ ಎದುರು ಪ್ರತಿಭಟನೆ ನಡೆಯಿತು.
ಹಿಂದೂ ಧರ್ಮದ ಭಜನೆ ಮತ್ತು ಭಜಕರ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿ ಜಾಮೀನು ರಹಿತ ಪ್ರಕರಣ ದಾಖಲಾಗಿದ್ದರೂ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ. ಆರೋಪಿಯನ್ನು ಬಂಧಿಸದಿರುವ ಹಿನ್ನಲೆಯಲ್ಲಿ ಪೊಲೀಸರ ಮೇಲೆಯೂ ಅನುಮಾನ ಕಾಡುತ್ತಿದೆ. ಆರೋಪಿಯನ್ನು ಬಂಧನಕ್ಕಾಗಿ ಇಂದು ಸಣ್ಣ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಒಂದು ವೇಳೆ ಬಂಧಿಸದಿದ್ದಲ್ಲಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಅವರು ತಿಳಿಸಿದರು.

ಈ ಸಂದರ್ಭ ಯಾವುದಾದರೂ ಅಹಿತಕರ ಘಟನೆ ನಡೆದರೆ ಅದಕ್ಕೆ ಅರಣ್ಯ ಮತ್ತು ಪೊಲೀಸ್ ಇಲಾಖೆ ನೇರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಬೆಳ್ತಂಗಡಿ ಪೊಲೀಸ್ ಠಾಣೆಯ ಎದುರು ಭಜನೆ ಮಾಡಿ ಪ್ರತಿಭಟನೆ ನಡೆಸಿ, ನಂತರ ಆರೋಪಿಯ ಬಂಧನಕ್ಕೆ ಒತ್ತಾಯಿಸಿ, ಎಸ್.ಐ ನಂದಕುಮಾರ್ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಗಣೇಶ್ ಕಳೆಂಜ ಬಜರಂಗದಳ ಜಿಲ್ಲಾ ಅಖಾಡ ಪ್ರಮುಖ್, ದಿನೇಶ್ ಚಾರ್ಮಾಡಿ ವಿ.ಹಿಂ.ಪ ಪ್ರಖಂಡ ಅಧ್ಯಕ್ಷರು, ಸಂತೋಷ್ ಅತ್ತಾಜೆ ಸಂಯೋಜಕರು, ಮೋಹನ್ ಬೆಳ್ತಂಗಡಿ,
ರಮೇಶ್ ಧರ್ಮಸ್ಥಳ, ಸುಧೀರ್ ಚಾರ್ಮಾಡಿ, ರಿಜೇಶ್ ಗುರುವಾಯನಕೆರೆ, ಭಜನಾ ಪರಿಷತ್ ನಿಕಟಪೂರ್ವ ಅಧ್ಯಕ್ಷರು ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!