ನೊಂದ ಕುಟುಂಬಕ್ಕೆ ಬೆಳಕಾದ ಯುವಕೇಸರಿ ಕಣಿಯೂರು ತಂಡ
ಕಣಿಯೂರು: ಸಮಾಜ ಸೇವೆಯೇ ನಮ್ಮ ಉಸಿರು ಎಂಬ ಧ್ಯೇಯ ವಾಕ್ಯವನ್ನು ಅಳವಡಿಸಿಕೊಂಡು ಯುವಕೇಸರಿ ಕಣಿಯೂರು ತಂಡದ ವತಿಯಿಂದ ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಕೊರಜ್ಜಂಡದಲ್ಲಿ ತೀರಾ ಬಡತನದಲ್ಲಿ ವಾಸ ಮಾಡುತ್ತಿರುವ ದಿ| ವಾಸಪ್ಪರವರ ಹೆಂಡತಿ ವಿನಯ ಎಂಬವರು ಅಸೌಖ್ಯದಿಂದ ಬಳಲುತ್ತಿದ್ದಾರೆ, ಈ ಕುಟುಂಬಕ್ಕೆ
ಸಹಾಯ ಹಸ್ತ ನೀಡುವುದಾಗಿ ತೀರ್ಮಾನ ಮಾಡಿದಂತೆ ,ನೊಂದ ಕುಟುಂಬದ ಮನೆಯವರಿಗೆ ಅ.14 ರಂದು ಧನ ಸಹಾಯ ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ಕಣಿಯೂರು ಗ್ರಾಮ ಪಂಚಾಯತ್ ಸದಸ್ಯರು,ಸಂಘದ ಅಧ್ಯಕ್ಷರಾದ ಪ್ರವೀಣ್ ಗೌಡ ಅಲೆಕ್ಕಿ, ಸಂಘದ ಗೌರವಾಧ್ಯಕ್ಷರು ಪದ್ಮುಂಜ ಸಿ.ಎ.ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಯುವ ಕೇಸರಿ ಕಣಿಯೂರು ಇದರ ಕಾರ್ಯದರ್ಶಿ, ವಕೀಲರಾದ ಯತೀಶ್ ಶೆಟ್ಟಿ ಪಣೆಕ್ಕರ, ದಿನೇಶ್ ನಾಯ್ಕ್ ಅಚ್ಚಿತರಡ್ಡ, ಅವಿನ್ ಕೊಲ್ಲೊಟ್ಟು ಉಪಸ್ಥಿತರಿದ್ದರು.