ವರ್ಗಾವಣೆಗೊಂಡಿರುವ ಮುಂಡಾಜೆ ಪಂಚಾಯತ್ ಪಿಡಿಒ ಸುಮಾ ಎ.ಎಸ್ ಅವರಿಗೆ ಬೀಳ್ಕೊಡುಗೆ
ಮುಂಡಾಜೆ : ಮುಂಡಾಜೆ ಗ್ರಾಮ ಪಂಚಾಯತ್ ನಲ್ಲಿ ಪಿಡಿಒ ಆಗಿ ಸೇವೆ ಸಲ್ಲಿಸಿ ಇದೀಗ ನೆರಿಯ ಗ್ರಾ.ಪಂ ಗೆ ವರ್ಗಾವಣೆಗೊಂಡಿರುವ ಕುಮಾರಿ ಸುಮಾ ಎ.ಎಸ್ ಅವರಿಗೆ ಗ್ರಾ.ಪಂ ಮತ್ತು ಸಂಘ ಸಂಸ್ಥೆಗಳ ವತಿಯಿಂದ ಬೀಳ್ಕೊಡುಗೆ ಸಮಾರಂಭ ಡಿ.24 ರಂದು ನಡೆಯಿತು.
ಮುಂಡಾಜೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ನೂತನ ವೇದಿಕೆಯಲ್ಲಿ ಈ ಕಾರ್ಯಕ್ರಮ ನಡೆಯಿತು.
ಗ್ರಾ.ಪಂ ಅಧ್ಯಕ್ಷೆ ರಂಜಿನಿ ಆರ್, ರೇಷ್ಮೆ ಇಲಾಖೆಯ ನಿವೃತ್ತ ಅಧಿಕಾರಿ ಬಾಬು ಪೂಜಾರಿ ಕೂಳೂರು, ಗ್ರಾ.ಪಂ ಸದಸ್ಯ ಅಗರಿ ರಾಮಣ್ಣ ಶೆಟ್ಟಿ, ನಿವೃತ್ತ ಮೇಜರ್ ಜನರಲ್ ಎಂ.ವಿ ಭಟ್, ಗ್ರಾ.ಪಂ ಉಪಾಧ್ಯಕ್ಷೆ ದಿಶಾ ಪಟವರ್ಧನ್ ಮೊದಲಾದವರು ಪಿಡಿಒ ಅವರ ಕರ್ತವ್ಯ ದಕ್ಷತೆಯ ಬಗ್ಗೆ ಮಾತನಾಡಿ ಅವರ ಮುಂದಿನ ಕರ್ತವ್ಯಕ್ಕೆ ಶುಭಕೋರಿದರು.
ಬೀಳ್ಕೊಡುಗೆಯ ಅಂಗವಾಗಿ ಪಿಡಿಒ ಅವರಿಗೆ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಹಾಗೂ ಸಿಬ್ಬಂದಿಗಳು,
ಊರ ಸಂಘ ಸಂಸ್ಥೆಯವರು, ಅಂಗನವಾಡಿ ಕಾರ್ಯಕರ್ತರು, ಮುಂಡಾಜೆ ಶಾಲಾ ಎಸ್‌ಡಿಎಂಸಿ ಮತ್ತು ಶತಮಾನೋತ್ಸವ ಸಮಿತಿ ಇವುಗಳ ಪದಾಧಿಕಾರಿಗಳು ಜಂಟಿಯಾಗಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಊರ ಹಿರಿಯರಾದ ಅಡೂರು ಗೋಪಾಲಕೃಷ್ಣ ರಾವ್, ಅಡೂರು ವೆಂಕಟ್ರಾಯ, ಗ್ರಾ.ಪಂ ಸದಸ್ಯರಾದ ಗಣೇಶ್ ಬಂಗೇರ, ಅಶ್ವಿನಿ, ವಿಮಲಾ, ಜಗದೀಶ್ ನಾಯ್ಕ್, ಸುಮಲತಾ, ಎಂ.ವಿಶ್ವನಾಥ ಶೆಟ್ಟಿ ಮತ್ತು ರವಿಚಂದ್ರ ನೇಕಾರ, ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯಚಂದ್ರ, ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್, ಪತ್ರಕರ್ತ ಅಶ್ರಫ್ ಆಲಿಕುಂಞಿ, ಸಚಿನ್ ಭಿಡೆ, ಶಾಲಾ ಮುಖ್ಯ ಶಿಕ್ಷಕಿ ಮಂಜುಳಾ ಸಹಿತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ನೂತನ ಪಿಡಿಒ ಗಾಯತ್ರಿ ದಿನೇಶ್ ಸ್ವಾಗತಿಸಿದರು. ಶಿಕ್ಷಕಿ ಸುಮಂಗಲಾ ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ಧನ್ಯವಾದವಿತ್ತರು.