ಕಬಡ್ಡಿ ಪಂದ್ಯಾಟದಲ್ಲಿ ತೀವ್ರವಾಗಿ ಗಾಯಗೊಂಡಿರುವ ಸತೀಶ್ ಎಂಬವರಿಗೆ ಸಹಾಯಹಸ್ತ ನೀಡಿದ ಮಾಜಿ ಸಚಿವರಾದ ಗಂಗಾಧರ ಗೌಡ

ಲಾಯಿಲ: ಪ್ರಸನ್ನ ಕಾಲೇಜಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಕಬಡ್ಡಿ ಪಂದ್ಯಾಟದಲ್ಲಿ ಧರ್ಮಸ್ಥಳ ಗ್ರಾಮದ ಕಬಡ್ಡಿ ತಂಡದ ಆಟಗಾರ ಸತೀಶ್ ಅನ್ನುವವರು ತೀವ್ರವಾಗಿ ಗಾಯಗೊಂಡಿದ್ದರು. ಇವರನ್ನು ಈ ಸಂದರ್ಭದಲ್ಲಿ ಡಾಕ್ಟರ್ ರೇಷ್ಮಾ ಜಿ ಗೌಡ ಮತ್ತು ತಂಡದವರು ತಮ್ಮ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದರು.
ಗಾಯಾಳು ಸತೀಶರನ್ನು ಮಾಜಿ ಸಚಿವರಾದ ಗಂಗಾಧರ ಗೌಡ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿ ಸಹಾಯಾಸ್ತ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ
ಬೆಳ್ತಂಗಡಿ ಅಧ್ಯಕ್ಷರು ಕೆ ಶೈಲೇಶ್ ಕುಮಾರ್ ಕುರ್ತೋಡಿ, ಗ್ರಾಮೀಣ ಕಾಂಗ್ರೆಸ್ ಸಮಿತಿ ಬೆಳ್ತಂಗಡಿ ಅಧ್ಯಕ್ಷರು ರಂಜನ್ ಜಿ ಗೌಡ, ಕೆ.ಪಿ.ಸಿ.ಸಿ ಸದಸ್ಯ ಕೇಶವ ಗೌಡ, ಗ್ರಾಮ ಸಮಿತಿ ಅಧ್ಯಕ್ಷರಾದ ತುಕರಾಂ ಗೌಡ, ಪಕ್ಷದ ಮುಖಂಡ ಯತೀಶ
ಶಾಮು,ಹೊನ್ನಮ್ಮ ಗ್ರಾಮ ಪಂಚಾಯತ್ ಸದಸ್ಯ
ಬಾಲ ಕೃಷ್ಣ ಗೌಡ ಉಜಿರೆ ಪಂಚಾಯತ್ ಸದಸ್ಯರು
ಕಾಂಗ್ರೆಸ್ ಪಕ್ಷದ ಮುಖಂಡರಾದ ಚಂದು, ದಲಿತ ಮುಖಂಡರಾದ ಪ್ರಭಕರ್ ಶಾಂತಿಕೋಡಿ
ರವರು ಉಪಸ್ಥಿತರಿದ್ದರು.