ಅಳದಂಗಡಿ: ಅನುಮಾನಾಸ್ಪದವಾಗಿ ಸತ್ತು ಬಿದ್ದ ಮಂಗದ ಮೃತದೇಹ: ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗದ ಭೀತಿ: ಅಂತ್ಯಸಂಸ್ಕಾರ ಮಾಡಿದ ಗ್ರಾಮಸ್ಥರು
ಬೆಳ್ತಂಗಡಿ: ಅಳದಂಗಡಿ ಉಂಗಿಲಬೈಲು ಎಂಬಲ್ಲಿ ಸಾರ್ವಜನಿಕ ಜಾಗದಲ್ಲಿ ಮಂಗವೊಂದರ ಮೃತದೇಹ ಶುಕ್ರವಾರ ಸಂಜೆಯ ವೇಳೆ ಅನುಮಾನಾಸ್ಪದ ರೀತಿಯಲ್ಲಿ ಕಂಡು ಬಂದಿದೆ.
ವಿಷಯ ಅರಿತ ನಾಗರಿಕರು ಪಂಚಾಯತ್ ಅಧ್ತಕ್ಷ ಉಪಾಧ್ಯಕ್ಷ ಮತ್ತು ಪಿಡಿಒ ಅವರಿಗೆ ಮಾಹಿತಿ ನೀಡಿದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ದೂರಿದ್ದಾರೆ.
ಬಳಿಕ ಸ್ಥಳೀಯರಾದ ಸೇಸಪ್ಪ ನಲಿಕೆ ಅಳದಂಗಡಿ, ಪ್ರೇಮಾ ಟೀಚರ್, ಅಶೋಕ್ ಮಾಸ್ಟರ್ ಮತ್ತು ಉಂಗಿಲಬೈಲಿನಲ್ಲಿ ನೆಲೆಸಿರುವ ಮೈಸೂರಿನ ಮಂಜುನಾಥ ಅವರು ಸೇರಿ, ಸಾಂಕ್ರಾಮಿಕ ರೋಗ ಭೀತ ತಪದಪಿಸುವ ಸಲುವಾಗಿ ಮಂಗದ ಮೃತದೇಹದ ಅಂತ್ಯಸಂಸ್ಕಾರಕ್ಕೆ ಕ್ರಮ ಕೈಗೊಂಡಿದ್ದಾರೆ.