• July 15, 2024

ಜೇಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾಗಿ ಶಂಕರ್ ರಾವ್ ಅಧಿಕಾರ ಸ್ವೀಕಾರ

 ಜೇಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾಗಿ  ಶಂಕರ್ ರಾವ್ ಅಧಿಕಾರ ಸ್ವೀಕಾರ

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶಂಕರ್ ರಾವ್ ನಿರ್ಗಮನ ಅಧ್ಯಕ್ಷರಾದ JFM ಪ್ರಸಾದ್ B.S ಇವರಿಂದ ಪದಪ್ರದಾನಗೊಂಡು ಡಿಸೆಂಬರ್ 22ರಂದು ಜೇಸಿ ಭವನದಲ್ಲಿ ನಡೆದ ಪದಪ್ರದಾನ ಕಾರ್ಯಕ್ರಮದಲ್ಲಿ,ಜೆಸಿಐ ಬೆಳ್ತಂಗಡಿ ಮಂಜುಶ್ರೀಯ 46ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

ಈ ಕಾರ್ಯಕ್ರಮದಲ್ಲಿ ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ ಪಿ. ಕುಶಾಲಪ್ಪ ಗೌಡ ಮುಖ್ಯ ಅಭ್ಯಾಗತರಾಗಿ ಆಗಮಿಸಿ ಮಾತನಾಡುತ್ತ ನಿರಂತರ ಪ್ರಯತ್ನ ಮತ್ತು ಕ್ರಿಯಾಶೀಲತೆಯಿಂದ ಉನ್ನತ ವ್ಯಕ್ತಿತ್ವವನ್ನು ಸಂಪಾದಿಸಬಹುದು. ಜೇಸಿಐನಿಂದ ತರಬೇತಿ ಪಡೆದವರು ಸಮಾಜಮುಖಿಯಾಗಿ ಬೆಳೆದು ಶ್ರೇಷ್ಠ ಸ್ಥಾನಮಾನವನ್ನು ಪಡೆಯಲು ಸಾಧ್ಯ ಎಂದು ಹೇಳುತ್ತಾ ನೂತನ ಅಧ್ಯಕ್ಷರ ಸಾಧನೆಗಳ ಬಗ್ಗೆ ಮೆಚ್ಚುಗೆಯ ಮಾತನ್ನಾಡಿ ಶುಭ ಹಾರೈಸಿದರು.

ಘಟಕದ ಪೂರ್ವಧ್ಯಕ್ಷರಾದ JC ಸಂತೋಷ ಕೋಟ್ಯಾನ್ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ JFM ಸ್ವರೂಪ್ ಶೇಖರ್ ಇವರನ್ನು ಪೂರ್ವಧ್ಯಕ್ಷರ ಸಾಲಿಗೆ ಸೇರ್ಪಡೆ ಗೊಳಿಸಿದರು.

ಜೆಸಿಐ ಭಾರತದ ವಲಯ XV ರ ವಲಯಧ್ಯಕ್ಷರಾದ JFD ಪುರುಷೋತ್ತಮ್ ಶೆಟ್ಟಿ ಮುಖ್ಯ ಅತಿಥಿಯಾಗಿ, ವಲಯ ಉಪಾಧ್ಯಕ್ಷರಾದ JC ಭರತ್ ಶೆಟ್ಟಿ ಮತ್ತು ವಲಯಡಿಳಿತ ಮಂಡಳಿಯ ನಿರ್ದೇಶಕರಾದ JC ಪ್ರಶಾಂತ್ ಲಾಯಿಲ ಉಪಸ್ಥಿತರಿದ್ದರು. ಘಟಕದ ಪೂರ್ವಧ್ಯಕ್ಷರಾದ Jc ಶ್ರೀನಾಥ್ ಕೆ.ಎಮ್, ಘಟಕ ಉಪಾಧ್ಯಕ್ಷರುಗಳಾದ Jc HGF ರಂಜಿತ್ ಎಚ್ ಡಿ, Jc HGF ಪ್ರೀತಮ್ ಶೆಟ್ಟಿ ಮತ್ತು ಸದಸ್ಯರಾದ ರಕ್ಷಿತ್ ಅಂಡಿಜೆ ಮಖ್ಯ ಅತಿಥಿಗಳನ್ನು ಪರಿಚಯಿಸಿದರು. Jc ಚಂದ್ರಹಾಸ್ ಬಳಂಜ ನೂತನ ಅಧ್ಯಕ್ಷರನ್ನು ಸಭೆಗೆ ಪರಿಚಯಿಸಿದರು. ಮಹಿಳಾ ವಿಭಾಗದ ಸಂಯೋಜಕಿ Jc ಮಾಮಿತಾ ಸುಧೀರ್ ಹಾಗೂ ಜೂನಿಯರ್ jc ವಿಭಾಗದ ಅಧ್ಯಕ್ಷರಾದ JJc ರಾಮಕೃಷ್ಣ ಶರ್ಮಾ ಅಧಿಕಾರ ಸ್ವೀಕರಿಸಿದರು. ಪೂರ್ವಧ್ಯಕ್ಷರಾದ Jc ಚಿದಾನಂದ ಇಡ್ಯಾ ಗಣ್ಯರನ್ನು ಬರಮಾಡಿಕೊಂಡರು ನೂತನ ಕಾರ್ಯದರ್ಶಿ Jc ಸುಧೀರ್ ಕೆ. ಎನ್ ಸರ್ವರಿಗೂ ಧನ್ಯವಾದ ಸಮರ್ಪಿಸಿದರು.

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಧ್ಯಕ್ಷರುಗಳು ಸದಸ್ಯರುಗಳು ಮತ್ತು ಜೆಸಿಐನ ಹಿತೈಷಿಗಳು ನೂತನ ತಂಡಕ್ಕೆ ಶುಭ ಹಾರೈಸಿದರು.

Related post

Leave a Reply

Your email address will not be published. Required fields are marked *

error: Content is protected !!