2ನೇ ಬಾರಿ ಹರೀಶ್ ಪೂಂಜಾಗೆ ಶಾಸಕ ಪಟ್ಟ: ಇಬ್ಬರು ಯುವಕರಿಂದ ಅಳದಂಗಡಿ ದೇವಸ್ಥಾನಕ್ಕೆ ಪಾದಯಾತ್ರೆ
ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಗೆಲುವಿನ ಹಿನ್ನಲೆಯಲ್ಲಿ ಇಬ್ಬರು ಯುವಕರು ಅಳದಂಗಡಿಯ ಸತ್ಯದೇವತೆ ದೇವಸ್ಥಾನಕ್ಕೆ ಪಾದಾಯಾತ್ರೆ ಕೈಗೊಂಡಿದ್ದು, ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದಿಂದ ಮುಂಜಾನೆ 3.30 ಕ್ಕೆ ಹೊರಟ ಅಜಿತ್ ಪೂಜಾರಿ ಕನ್ಯಾಡಿ ಹಾಗೂ ಅಜಿತ್ ಕುಮಾರ್ ಚಾರ್ಮಾಡಿ ಇಂದು ಬೆಳಗ್ಗೆ 9.30 ರ ಸುಮಾರಿಗೆ ಅಳದಂಗಡಿಯ ಸತ್ಯದೇವತೆಯ ದರ್ಶನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರರು ಶಿವಪ್ರಸಾದ್ ಅಜಿಲರು ಶುಭಹಾರೈಸಿದರು.