ಮಲವಂತಿಗೆ: ಅಬ್ಬಿ ಎಂಬಲ್ಲಿ ಅಪರಿಚಿತ ವ್ಯಕ್ತಿಗೆ ಡಿಕ್ಕಿ ಹೊಡೆದ ಟ್ರಾಕ್ಟರ್: ಮೃತಪಟ್ಟ ಅಪರಿಚಿತ ವ್ಯಕ್ತಿಯ ಮಾಹಿತಿ ಪತ್ತೆಗೆ ಪೊಲೀಸರ ಮನವಿ
ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಅಬ್ಬಿ ಎಂಬಲ್ಲಿ ರಸ್ತೆ ಅಪಘಾತ ಪ್ರಕರಣದಲ್ಲಿ ಗಾಯಗೊಂಡು ಮೃತಪಟ್ಟಿರುವ ಅಪರಿಚಿತ ವ್ಯಕ್ತಿ ಲೋಕೇಶ್ ಎಂಬಾತನ ಬಗ್ಗೆ ಮಾಹಿತಿ ತಿಳಿದಲ್ಲಿ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಗೆ (08256-234100) ತಿಳಿಸುವಂತೆ ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕರು ಮಾಹಿತಿ ನೀಡುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.7ರಂದು ನೊಂದಣಿಯಾಗದ ಹೊಸ ಟ್ರಾಕ್ಟರ್ ವಾಹನವನ್ನು ಚಾಲಕ ದೀಪಕ್ ಎಂಬಾತ ಮಲವಂತಿಗೆ ಗ್ರಾಮದ ಅಬ್ಬಿ ಎಂಬಲ್ಲಿ ಡಿ.7ರಂದು ಚಾಲಕ ದೀಪಕ್ ಎಂಬಾತ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಪಾದಾಚಾರಿ ಲೋಕೇಶ್ ಎಂಬಾತನಿಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ತೋಟಕ್ಕೆ ಪಲ್ಟಿಹೊಡೆದಿದೆ. ಪರಿಣಾಮ ಪಾದಾಚಾರಿ ಲೋಕೇಶ್ ರವರ ತಲೆಗೆ, ಮೈಕೈಗಳಿಗೆ ಗಂಭೀರ ಗಾಯಗಳಾಗಿದ್ದು ಕಳಸ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.
ಮೃತ ಪಟ್ಟ ವ್ಯಕ್ತಿ ಲೋಕೇಶ್ ಎಂಬಾತ ಅಪರಿಚಿತ ವ್ಯಕ್ತಿಯಾಗಿದ್ದಾನೆ. ಈತನಿಗೆ ಅಂದಾಜು 32 ವರ್ಷ ವಯಸ್ಸಾಗಿದ್ದು, 5.6 ಸೆ.ಮೀ ಎತ್ತರವಿದ್ದು, ಎಣ್ಣೆ ಕಪ್ಪು ಮೈಬಣ್ಣ ಹಾಗೂ ಬೂದುಗೆರೆಗಳಿರುವ ಅರ್ಧ ತೋಳಿನ ಟಿ ಶರ್ಟ್ , ಹಳದಿ ಬಣ್ಣದ ಬರ್ಮುಡ ಚಡ್ಡಿಯನ್ನು ಧರಿಸಿದ್ದರು. ಯಾರಿಗಾದರು ಈ ವ್ಯಕ್ತಿಯ ಬಗ್ಗೆ ತಿಳಿಸಿದ್ದರೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.